Site icon Vistara News

IND vs ENG: 5ನೇ ಸ್ಥಾನಕ್ಕೆ ರಾಹುಲ್​-ಅಯ್ಯರ್​ ಮಧ್ಯೆ ಪೈಪೋಟಿ; ಬ್ಯಾಟಿಂಗ್​ ಅಂಕಿ ಅಂಶ ಹೇಗಿದೆ?

shreyas iyer and kl rahul

ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್(IND vs ENG)​ ನಡುವಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್ ರಾಹುಲ್(KL Rahul) ಬ್ಯಾಟರ್ ಮತ್ತು ವಿಕೆಟ್‌ಕೀಪರ್ ಆಗಿ ಆಡುತ್ತಾರೆಯೇ ಅಥವಾ ಟೀಮ್ ಇಂಡಿಯಾದಲ್ಲಿ ಅವರಿಗೆ ಸ್ಥಾನವಿಲ್ಲವೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ರಾಹುಲ್ ದಕ್ಷಿಣ ಆಫ್ರಿಕಾ ಟೆಸ್ಟ್‌ನಲ್ಲಿ ವಿಕೆಟ್‌ ಕೀಪಿಂಗ್‌ಗೆ ಪಾದರ್ಪಣೆ ಮಾಡಿದರೂ, ಇಬ್ಬರು ಶ್ರೇಷ್ಠ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ವಿರುದ್ಧ ರಾಹುಲ್​ ವಿಕೆಟ್ ಕೀಪಿಂಗ್ ಮಾಡಬಹುದೆಂದು ತಂಡದ ಮ್ಯಾನೇಜ್‌ಮೆಂಟ್ ನಂಬಿಕೆ ಇಟ್ಟಿಲ್ಲ. ಇದೇ ಕಾರಣಕ್ಕೆ ಆಯ್ಕೆ ಸಮಿತಿ ತಂಡ ಪ್ರಕಟಿಸುವಾಗ ರಾಹುಲ್​ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ ಎಂದು ಹೇಳಿತ್ತು. ರಾಹುಲ್​ ಕೀಪಿಂಗ್​ ನಡೆಸದಿದ್ದರೆ ಈ ಜವಾಬ್ದಾರಿ ಕೆ.ಎಸ್​ ಭರತ್​ಗೆ ಸಿಗಲಿದೆ. ಆಗ 5ನೇ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ಸದ್ಯದ ಕುತೂಹಲ.

ಭರತ್​ ಅವರು ಕೀಪಿಂಗ್​ ನಡೆಸಿದರೆ, ಅಯ್ಯರ್(Shreyas Iyer)​ ಅಥವಾ ರಾಹುಲ್​ ಮಧ್ಯೆ ಯಾರು ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ? ಯಾರನ್ನು ಆಯ್ಕೆ ಮಾಡುವುದು ಎನ್ನುವುದು ಈಗ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೆ.ಎಲ್ ರಾಹುಲ್ ತವರಿನ ಟೆಸ್ಟ್‌ಗಳಲ್ಲಿ ವಿಕೆಟ್ ಕೀಪಿಂಗ್​ ಮಾಡಿದ್ದರೆ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ, ಭರತ್​ ಕೀಪಿಂಗ್​ ಮಾಡಿದರೆ ರಾಹುಲ್​ ಮತ್ತು ಅಯ್ಯರ್​ ನಡುವೆ ಪೈಪೋಟಿ ಏರ್ಪಡಲಿದೆ.

ಉಭಯ ಆಟಗಾರರ ಅಂಕಿ ಅಂಶಗಳನ್ನು ನೋಡುವುದಾದರೆ, ಶ್ರೇಯಸ್ ಅಯ್ಯರ್ ತವರಿನಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ 7 ಟೆಸ್ಟ್ ಪಂದ್ಯಗಳಲ್ಲಿ 39.09 ಸರಾಸರಿಯಲ್ಲಿ ಬ್ಯಾಟ್​ ಬೀಸಿ 430 ರನ್ ಗಳಿಸಿದ್ದಾರೆ. 1 ಶತಕವೂ ಒಳಗೊಂಡಿದೆ. ಕೆ.ಎಲ್ ರಾಹುಲ್ ಭಾರತದ ನೆಲದಲ್ಲಿ ಇದುವರೆಗೆ 16 ಟೆಸ್ಟ್‌ಗಳನ್ನು ಆಡಿ 40.13 ಸರಾಸರಿಯಲ್ಲಿ 923 ರನ್ ಗಳಿಸಿದ್ದಾರೆ. 1 ಶತಕ ಕೂಡ ಬಾರಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ರಾಹುಲ್​ ತೀರಾ ಕಳಪೆ ಪ್ರದರ್ಶನ ತೋರಿ ಉಪನಾಯಕ ಸ್ಥಾನದ ಜತೆಗೆ ತಂಡದಿಂದ ಹೊರಬಿದ್ದಿದ್ದರು. ಆದರೆ ಈಗ ರಾಹುಲ್​ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಅಯ್ಯರ್​ ಬ್ಯಾಟಿಂಗ್​ ಲಯ ಕಳೆದುಕೊಂಡಿದ್ದಾರೆ ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.

ಇದನ್ನೂ ಓದಿ IND vs AFG: ಹೋರಾಡಿ ಸೋತ ಆಫ್ಘನ್​; ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

2 ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಅವೇಶ್ ಖಾನ್.

Exit mobile version