Site icon Vistara News

KL Rahul: ಕೆ.ಎಲ್ ರಾಹುಲ್ ಮೇಲೆ ಬಿಸಿಸಿಐ ಗರಂ; ವಿಡಿಯೊ ಹಂಚಿಕೊಂಡಿದ್ದೇ ಕಾರಣ!

KL Rahul

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಕೆ.ಎಲ್​ ರಾಹುಲ್​(KL Rahul) ವಿರುದ್ಧ ಬಿಸಿಸಿಐ(BCCI) ಗರಂ ಆಗಿದೆ. ಇದಕ್ಕೆ ಕಾರಣ ರಾಹುಲ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಒಂದು ವಿಡಿಯೊ. ಫಿಟ್ನೆಸ್ ವರದಿ ಹೊರಬರುವ ಮೊದಲೇ ತಾವು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಇದು ಬಿಸಿಸಿಐ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೈದ್ಯಕೀಯ ವರದಿ ಹೊರಬರುವ ಮೊದಲೇ ರಾಹುಲ್​ ಅವರು ಬ್ಯಾಟಿಂಗ್ ಮಾಡುವ ವಿಡಿಯೊ ಪ್ರಕಟಿಸಿದ್ದರು. ಇದನ್ನು ಕಂಡ ಅವರ ಅಭಿಮಾನಿಗಳು ಮೂರನೇ ಟೆಸ್ಟ್ ಪಂದ್ಯಕ್ಕೆ ಪುನರಾಗಮನ ಮಾಡಲಿದ್ದಾರೆ ಎಂದು ಭಾವಿಸಿದ್ದರು. ಆದರೆ, ಸೋಮವಾರ ಪೂರ್ಣ ಫಿಟ್ ಆಗದ ಕಾರಣ ರಾಹುಲ್​ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು.

ವೈದ್ಯರು, ತಜ್ಞರ ತಂಡ ಫಿಟ್​ನೆಸ್​ ಘೋಷಿಸುವ ಮೊದಲೇ ತಾವೇ ಫಿಟ್ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಬಿಸಿಸಿಐ ಮತ್ತು ತಂಡದ ಯೋಜನೆಗೂ ಹೊಡೆತ ಬೀಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ರಾಹುಲ್​ ನಡೆಗೆ ಗರಂ ಆಗಿದ್ದಾರೆ. ಜತೆಗೆ ಎಚ್ಚರಿಕೆಯೆನ್ನು ಕೂಡ ನೀಡಿದ್ದಾರೆ ಎಂದು ವರದಿಯಾಗಿದೆ. ಮೂರನೇ ಪಂದ್ಯಕ್ಕೆ ರಾಹುಲ್​ ಬದಲು ದೇವದತ್ತ ಪಡಿಕ್ಕಲ್​ ಆಯ್ಕೆಯಾಗಿದ್ದಾರೆ. ಮೂರನೇ ಪಂದ್ಯ ಗುರುವಾರದಿಂದ ರಾಜ್​ಕೋಟ್​ನಲ್ಲಿ ಆರಂಭಗೊಳ್ಳಲಿದೆ. ಸದ್ಯ ರಾಹುಲ್​ ಬೆಂಗಳೂರಿನ ಎನ್​ಸಿಎಯಲ್ಲಿದ್ದಾರೆ.

ಇದನ್ನೂ ಓದಿ Yuvraj Singh: ರಾಜಕೀಯದಲ್ಲಿ ಸಿಕ್ಸರ್​ ಬಾರಿಸಲು ಸಜ್ಜಾದ ಯುವರಾಜ್​​; ಬಿಜೆಪಿ ಪರ ಬ್ಯಾಟಿಂಗ್​!

ಮೊದಲ ಟೆಸ್ಟ್​ ಪಂದ್ಯ ಆಡಿದ್ದ ಕೆ.ಎಲ್​ ರಾಹುಲ್​ ಅವರು ಸ್ನಾಯು ಸೆಳೆತದಿಂದಾಗಿ ದ್ವಿತೀಯ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದರು. ಬಳಿಕ ಬೆಂಗಳೂರಿನ ಎನ್​ಸಿ ಸೇರಿದ್ದರು. ಇಲ್ಲಿ ಫಿಟ್​ನೆಸ್​ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಭಾನುವಾರ ನೆಟ್ಸ್​ನಲ್ಲಿ(KL Rahul’s Net Session) ಬ್ಯಾಟಿಂಗ್​ ಅಭ್ಯಾಸಿದ ವಿಡಿಯೊ ಹಂಚಿಕೊಂಡು ‘ಸಂಡೇ’ ಎಂದು ಬರೆದುಕೊಂಡಿದ್ದರು.

ಭಾರತ ಟೆಸ್ಟ್​ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

Exit mobile version