ಬೆಂಗಳೂರು: ರಾಜ್‌ಕೋಟ್‌ನಲ್ಲಿ ಗುರುವಾರ, ಫೆಬ್ರವರಿ 15 ರಿಂದ ಪ್ರಾರಂಭವಾಗುವ ಇಂಗ್ಲೆಂಡ್(IND vs ENG 3rd Test) ವಿರುದ್ಧದ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ ದೊರಕಿದೆ. ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್(KL Rahul) ಫಿಟ್ ಆದಂತೆ ತೋರುತ್ತಿದೆ. ನೆಟ್ಸ್‌ನಲ್ಲಿ(KL Rahul’s Net Session) ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಮೊದಲ ಟೆಸ್ಟ್ ಪಂದ್ಯ ಆಡಿದ್ದ ಕೆ.ಎಲ್ ರಾಹುಲ್ ಅವರು ಸ್ನಾಯು ಸೆಳೆತದಿಂದಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಬಳಿಕ ಬೆಂಗಳೂರಿನ ಎನ್ಸಿ ಸೇರಿದ್ದರು. ಇಲ್ಲಿ ಫಿಟ್ನೆಸ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇವರ ಜತೆಗೆ ರವೀಂದ್ರ ಜಡೇಜಾ ಕೂಡ ಬಂದಿದ್ದರು. ಸದ್ಯ ರಾಹುಲ್ ಫಿಟ್ ಆಗಿರುವಂತೆ ತೋರುತ್ತಿದೆ.
ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟಗೊಂಡಾಗ ರಾಹುಲ್ಗೆ ತಂಡದಲ್ಲಿ ಅವಕಾಶ ನೀಡಿದರೂ ಫಿಟ್ನೆಸ್ ಸಾಬೀತು ಪಡಿಸಿದರೆ ಮಾತ್ರ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿತ್ತು. ಇದೀಗ ರಾಹುಲ್ ಫಿಟ್ನೆಸ್ ಪಾಸ್ ಆದಂತೆ ಕಾಣುತ್ತಿದೆ. ಇಲ್ಲವಾದಲ್ಲಿ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರಲಿಲ್ಲ. ಒಟ್ಟಾರೆ ರಾಹುಲ್ ಅವರ ಕಮ್ಬ್ಯಾಕ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಏಕೆಂದರೆ ಅನುಭವಿ ಆಟಗಾರರ ಕೊರತೆಯಿಂದಾಗಿ ತಂಡದ ನಾಯಕ ರೋಹಿತ್ ಚಿಂತೆಯಲ್ಲಿದ್ದರು. ಇದೀಗ ನಾಯಕ ಚಿಂತೆ ಕೊಂಚ ದೂರವಾದಂತಿದೆ. ಆದರೆ ರವೀಂದ್ರ ಜಡೇಜಾ ಅವರ ಫಿಟ್ನೆಸ್ ಹೇಗಿದೆ? ಅಭ್ಯಾಸ ಆರಂಭಿಸಿದ್ದಾರಾ? ಎನ್ನುವ ಯಾವುದೇ ಮಾಹಿತಿ ಇದುವರೆಗೆ ಲಭ್ಯವಿಲ್ಲ.
ರಾಹುಲ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು ‘ನೆಟ್ಸ್‌ನಲ್ಲಿ ಬಾಸ್ ಕೆ.ಎಲ್ ರಾಹುಲ್!’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Jack Leach: ಟೆಸ್ಟ್ ಸರಣಿಯಿಂದಲೇ ಹೊರಬಿದ್ದ ಇಂಗ್ಲೆಂಡ್ ಸ್ಟಾರ್ ಸ್ಪಿನ್ನರ್
Boss KL Rahul in the nets! 😍 #INDvsAUS pic.twitter.com/a48KPaHLNa
— Kunal Yadav (@Kunal_KLR) February 11, 2024
ಬುಮ್ರಾಗೆ ರೆಸ್ಟ್
ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 57 ಓವರ್ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲು ಬಯಸಿದೆ. ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದರೆ ಅವರ ಸ್ಥಾನಕ್ಕೆ ಮತ್ತೋರ್ವ ಅನುಭವಿ ಬೌಲರ್ ಆಯ್ಕೆ ಮಾಡುವುದು ಕೂಡ ಬಿಸಿಸಿಐಗೆ ಸವಾಲಾಗಿದೆ. ಏಕೆಂದರೆ ಸಿರಾಜ್ ಹೊರತುಪಡಿಸಿ ಬೇರಾರು ತಂಡದಲ್ಲಿ ಅನುಭವಿಗಳಿಲ್ಲ.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.