ನವದೆಹಲಿ: ಜಗತ್ತಿನ ಪ್ರಸಿದ್ಧ ಫೋಟೊ ಶೇರಿಂಗ್ ಜಾಲತಾಣವಾದ ಇನ್‌ಸ್ಟಾಗ್ರಾಂ (Instagram Outage) ಸರ್ವರ್ ಅಕ್ಟೋಬರ್ 31ಕ್ಕೆ ಡೌನ್ ಆದ ಪರಿಣಾಮ ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Kohli And Ronaldo) ಮತ್ತು ಪೋರ್ಚುಗಲ್‌ನ ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಇನ್ಸ್ಟಾ ಫಾಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.
ಲಕ್ಷಾಂತರ ಜನ ಇನ್‌ಸ್ಟಾಗ್ರಾಂ ಜಾಲತಾಣ ಬಳಕೆಯಲ್ಲಾಗುತ್ತಿರುವ ತೊಂದರೆ ಕುರಿತು ಕಳೆದ ವಾರ ದೂರು ನೀಡಿದ್ದರು ಕೆಲವೊಬ್ಬರಿಗೆ ಇ-ಮೇಲ್ ಹಾಗೂ ಪಾಸ್‌ವರ್ಡ್ ಕೇಳಿ, ಲಾಗ್ ಇನ್ ಆದರೂ ಜಾಲತಾಣವನ್ನು ಬಳಸಲು ಆಗದ ಸ್ಥಿತಿ ಎದುರಾಗಿತ್ತು. ಹೀಗಾಗಿ ರೊನಾಲ್ಡೊ ಮತ್ತು ಕೊಹ್ಲಿಯ ಫಾಲೋವರ್‌ಗಳ ಸಂಖ್ಯೆ ಇಳಿಕೆ ಕಂಡಿದೆ.
ವಿಶ್ವದ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ವ್ಯಕ್ತಿ ಎಂದರೆ ರೊನಾಲ್ಡೊ. ಸರಿ ಸುಮಾರು 493 ಮಿಲಿಯನ್ (49.3 ಕೋಟಿ) ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಆದರೆ ಇದೀಗ ಸರ್ವರ್ ಸಮಸ್ಯೆಯಿಂದಾಗಿ 3 ಮಿಲಿಯನ್ (30 ಲಕ್ಷ) ಫಾಲೋವರ್ಸ್ಗಳನ್ನು ಕಳೆದುಕೊಂಡಂತಾಗಿದೆ. ಇನ್ನು ಭಾರತದ ಅತೀ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ಗಳನ್ನು ಹೊಂದಿದ ಖ್ಯಾತಿ ವಿರಾಟ್ ಕೊಹ್ಲಿಯ(221 ಮಿಲಿಯನ್-22.1 ಕೋಟಿ) ಹೆಸರಿನಲ್ಲಿದೆ. ಆದರೆ ಇದೀಗ ಕೊಹ್ಲಿಯ ಫಾಲೋವರ್ಸ್ ಸಂಖ್ಯೆಯಲ್ಲಿಯೂ ಇಳಿಕೆ ಕಂಡಿದೆ.
ಇದನ್ನೂ ಓದಿ |Indian 2 Film | ʻಇಂಡಿಯನ್ 2ʼ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಖ್ಯಾತ ಕ್ರಿಕೆಟರ್ ತಂದೆ, ಯಾರವರು?