ನವ ದೆಹಲಿ : ಟೀಮ್ ಇಂಡಿಯಾದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯ (Virat Kohli) ಪುಟಾಣಿ ಹೆಣ್ಣು ಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳು ಅಭಿರುಚಿಯ ಕಾಮೆಂಟ್ಗಳನ್ನು ಮಾಡಿದವರ ಮೇಲೆ ಕೇಸ್ ದಾಖಲಿಸುವಂತೆ ದಿಲ್ಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ ದಂಪತಿಯ ಪುತ್ರಿ ವಾಮಿಕಾ ಕೊಹ್ಲಿ ಜನವರಿ 11ರಂದು ತನ್ನ ಎರಡನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಕ್ರಿಕೆಟಿಗ ಕೊಹ್ಲಿ ಹಾಗೂ ಅನುಷ್ಕಾ ಜನುಮ ದಿನ ಸಂಭ್ರಮದಲ್ಲಿರುವ ತಮ್ಮ ಪುತ್ರಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರ ವಾಮಿಕಾ ಈ ಜಗತ್ತಿನ ಅತ್ಯಂತ ಕೆಟ್ಟ ಜೀವಿ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾನೆ.
ಅದೇ ರೀತಿ ಧೋನಿಯ ಪುತ್ರಿ ಜೀವಾಳ ಚಿತ್ರಕ್ಕೂ ಅತ್ಯಂತ ಕಳಪೆ ಪ್ರತಿಕ್ರಿಯೆಯನ್ನು ವ್ಯಕ್ತಿಯೊಬ್ಬ ನೀಡಿದ್ದ. ಅವೆರಡೂ ಕಾಮೆಂಟ್ಗಳ ಸ್ಕ್ರೀನ್ ಶಾಟ್ಗಳನ್ನು ಹಾಕಿದರ ಸ್ವಾತಿ ಮಲಿವಾಲ್ ಅವರು ಅವರ ಬಗ್ಗೆ ಕೇಸ್ ದಾಖಲಿಸುವಂತೆ ಸೂಚನೆ ಕೊಟ್ಟಿದ್ದಾರೆ. ಪೊಲೀಸರು ತಕ್ಷಣದಲ್ಲೇ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ.
ಇದನ್ನೂ ಓದಿ | VIrat kohli | ಮೊದಲ ಬಾರಿ ಕೊಹ್ಲಿಯ ಪುತ್ರಿ ವಾಮಿಕಾಳ ಮುಖ ನೋಡಿದ ಅಭಿಮಾನಿಗಳು ಫುಲ್ ಖುಷ್, ಎಲ್ಲಿ ಸಿಕ್ಕಿದಳು ಪುಟಾಣಿ?