ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಹಲವು ದಾಖಲೆಗಳ ಸರದಾರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಏಷ್ಯಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.(Virat Kohli Second Richest Sportsperson) 100 ಆಟಗಾರರ ಫೋರ್ಬ್ಸ್(Forbes) ಪಟ್ಟಿಯಲ್ಲೂ ಸಹ ಸ್ಥಾನ ಪಡೆದಿರುವ ಕೊಹ್ಲಿ ಏಕೈಕ ಭಾರತದ ಕ್ರಿಕೆಟಿಗನಾಗಿಯೂ ಹೊರಹೊಮ್ಮಿದ್ದಾರೆ.
ವರದಿಗಳ ಪ್ರಕಾರ ಕೊಹ್ಲಿ 2022ರ ಫೋರ್ಬ್ಸ್ ಪಟ್ಟಿಯಲ್ಲಿ 277 ಕೋಟಿ ರೂ. ಗಳಿಸುವ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ 61ನೇ ಸ್ಥಾನದಲ್ಲಿದ್ದಾರೆ. 2021 ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 100 ಕ್ರೀಡಾಪಟುಗಳ ಪಟ್ಟಿಯಲ್ಲಿ 59ನೇ ಸ್ಥಾನದಲ್ಲಿದ್ದರು. ಏಷ್ಯಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಒಸಾಕಾಗೆ ಅಗ್ರಸ್ಥಾನ
4 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಒಡತಿ, ಜಪಾನಿನ ನವೋಮಿ ಒಸಾಕಾ(naomi osaka) ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಏಷ್ಯಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಒಸಾಕಾ ಅವರ ಒಟ್ಟು ಗಳಿಕೆಯನ್ನು $53.2 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೇವಲ $1.2 ಮಿಲಿಯನ್ ಟೆನಿಸ್ನಿಂದ ಬಂದರೆ $52 ಮಿಲಿಯನ್ ಜಾಹೀರಾತುಗಳಿಂದ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನ, ಪೊರ್ಚುಗಲ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೂರನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ Ind vs wi : ವಿರಾಟ್ ಕೊಹ್ಲಿ ದಾಖಲೆಯ ಶತಕ, ಭಾರತ 438 ರನ್ಗಳಿಗೆ ಆಲ್ಔಟ್
ಕೊಹ್ಲಿ ದುಬಾರಿ ಮನೆಯ ಮಾಲೀಕ
ಇದುವರೆಗೆ ಸಚಿನ್ ತೆಂಡೂಲ್ಕರ್(Sachin Tendulkar) ಮತ್ತು ಎಂಎಸ್ ಧೋನಿ(MS Dhoni) ಅವರ ಮನೆಗಳು ಅತ್ಯಂತ ದುಬಾರಿ ಎಂಬ ಖ್ಯಾತಿ ಪಡೆದಿತ್ತು. ಆದರೆ ವಿರಾಟ್ ಕೊಹ್ಲಿ ಉಭಯ ಆಟಗಾರರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 80 ಕೋಟಿ ರೂ.ಮೌಲ್ಯದ ಅತ್ಯಂತ ದುಬಾರಿ ಮನೆಯ ಒಡೆಯನಾಗುವ ಮೂಲಕ ಭಾರತ ಕ್ರಿಕೆಟ್ನ ಅತಿ ಹೆಚ್ಚು ಮೌಲ್ಯದ ಮನೆ ಹೊಂದಿರುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿ ಕೊಹ್ಲಿಯ ಈ ಐಷಾರಾಮಿ ಮನೆ ಇದೆ.