ಇಂದೋರ್: ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದರೂ ಟಿ20 ಸರಣಿಯಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗುತ್ತಿದೆ. ಇದೀಗ ಈ ಪ್ರಶ್ನೆಗೆ ಕೋಚ್ ರಾಹುಲ್ ದ್ರಾವಿಡ್(Rahul Dravid) ಸ್ಪಷ್ಟನೆ ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ವಿಶ್ರಾಂತಿ ನೀಡುವ ಉದ್ದೇಶದಿಂದ ಮಾತ್ರ ಕೊಹ್ಲಿ ಮತ್ತು ರೋಹಿತ್ ಅವರನ್ನು ಟಿ20 ಸರಣಿಯಿಂದ ಸದ್ಯಕ್ಕೆ ದೂರ ಇರಿಸಲಾಗಿದೆ ಎಂದು ಹೇಳಿದರು.
“ಕಳೆದ ವರ್ಷದ ಟಿ20 ವಿಶ್ವ ಕಪ್ ಬಳಿಕ ಈ ಆರು ಏಕದಿನ ಪಂದ್ಯಗಳಿಗೆ ಆದ್ಯತೆ ನೀಡಲಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಎಲ್ಲ ಆರು ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಅವರಿಗೆ ಟಿ20 ಸರಣಿಯಿಂದ ಸ್ವಲ್ಪ ವಿರಾಮ ನೀಡಲಾಗಿದೆ. ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೂ ಮುಖ್ಯವಾಗಿರುವುದರಿಂದ ಸ್ಟಾರ್ ಆಟಗಾರರು ಟಿ20ಯಿಂದ ಹೊರಗುಳಿದಿದ್ದಾರೆ” ಎಂದು ರಾಹುಲ್ ದ್ರಾವಿಡ್ ಹೇಳಿದರು.
ಇದನ್ನೂ ಓದಿ | IND VS NZ: ಶಿಖರ್ ಧವನ್ ದಾಖಲೆ ಮುರಿದ ಶುಭಮನ್ ಗಿಲ್