Site icon Vistara News

Asia Cup | ಕೊಹ್ಲಿ, ಸೂರ್ಯಕುಮಾರ್‌ ಅರ್ಧ ಶತಕ, 192 ರನ್ ಬಾರಿಸಿದ ಭಾರತ

asia cup

ದುಬೈ: ವಿರಾಟ್ ಕೊಹ್ಲಿ (59) ಅವರ ಅಮೋಘ ಅರ್ಧ ಶತಕ ಹಾಗೂ ಸೂರ್ಯ ಕುಮಾರ್‌ (68) ಅವರ ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಭಾರತ ತಂಡ ಎದುರಾಳಿ ಹಾಂಕಾಂಗ್‌ಗೆ ೧೯೩ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ. ದುಬೈನ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಡೆದ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೯೨ ಬಾರಿಸಿತು. ಆರಂಭಿಕ ಬ್ಯಾಟರ್‌ ಕೆ. ಎಲ್‌ ರಾಹುಲ್‌ ೩೬ ರನ್‌ ಬಾರಿಸಿದರೆ, ರೋಹಿತ್‌ ಶರ್ಮ ೨೧ ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿತು. ಅನನುಭವಿ ಹಾಂಕಾಂಗ್‌ ತಂಡದ ಬೌಲರ್‌ಗಳ ವಿರುದ್ಧ ಭಾರತದ ಆರಂಭಿಕ ಬ್ಯಾಟರ್‌ಗಳಾದ ಕೆ. ಎಲ್‌ ರಾಹುಲ್‌ ಹಾಗೂ ರೋಹಿತ್ ಶರ್ಮ ರನ್‌ ಬಾರಿಸಲು ಶ್ರಮ ಪಟ್ಟರು.

ತಂಡ ೩೮ ರನ್‌ ಬಾರಿಸುವಷ್ಟರಲ್ಲಿ ರೋಹಿತ್ ಶರ್ಮ ವಿಕೆಟ್‌ ಒಪ್ಪಿಸಿದರೆ, ಕೆ. ಎಲ್‌ ರಾಹುಲ್‌ ೩೯ ಎಸೆತಗಳಲ್ಲಿ ೩೯ ರನ್‌ ಬಾರಿಸಿ ತಂಡದ ಮೊತ್ತ ೯೪ ಆಗುವಷ್ಟರಲ್ಲಿ ಔಟಾಗಿ ನಡೆದರು. ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ ೬ ಸಿಕ್ಸರ್‌ ಹಾಗೂ ಅಷ್ಟೇ ಸಂಖ್ಯೆ ಫೋರ್‌ಗಳ ಮೂಲಕ ೨೬ ಎಸೆತಗಳಲ್ಲಿ ೬೮ ರನ್‌ ಬಾರಿಸಿ ಭಾರತ ತಂಡದ ಒಟ್ಟು ಮೊತ್ತ ಹೆಚ್ಚಾಗುವಂತೆ ನೋಡಿಕೊಂಡರು.

ಸ್ಕೋರ್‌ ವಿವರ : ಭಾರತ ೨೦ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೯೨ ( ಸೂರ್ಯಕುಮಾರ್‌ ಯಾದವ್ ೬೮*, ವಿರಾಟ್‌ ಕೊಹ್ಲಿ ೫೯*, ಕೆ. ಎಲ್‌ ರಾಹುಲ್‌ ೩೬, ರೋಹಿತ್‌ ಶರ್ಮ ೨೧; ಮೊಹಮ್ಮದ್ ಗಜಾನಫರ್‌ ೧೯ಕ್ಕೆ೧).

Exit mobile version