ನವ ದೆಹಲಿ: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಶೀಘ್ರದಲ್ಲೇ ಬ್ರಿಟಿಷ್ ಸಾಹಸಿ ಎಡ್ವರ್ಡ್ ಮೈಕೆಲ್ ಗ್ರಿಲ್ಸ್ ಯಾನೆ ಬೇರ್ ಗ್ರಿಲ್ಸ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಹರಿದಾಡುತ್ತಿವೆ. ಗ್ರಿಲ್ಸ್ ಅವರು ವಿಭಿನ್ನ ಕ್ಷೇತ್ರದ ಐಕಾನ್ಗಳ ಜತೆ ಸಂಭಾಷಣೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
Throwback to working with Simon Reay on Man Vs Wild in the Sahara. It was a partnership and friendship that changed our lives. #manvswild @Discovery #adventure #nevergiveup pic.twitter.com/DR88KiYsqo
— Bear Grylls OBE (@BearGrylls) June 5, 2023
ಈ ಕುರಿತು ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ, ನಾವು ಆ ಒಂದು ಯೋಜನೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನೂ ಏನನ್ನೂ ದೃಢಪಡಿಸಿಲ್ಲ. ಆದರೆ, ಸದ್ಯದಲ್ಲೇ ಭಾರತಕ್ಕೆ ಬರುವೆ ಎಂಬುದಾಗಿ ಬೇರ್ ಗ್ರಿಲ್ಸ್ ಹೇಳಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬೇರ್ ಗ್ರಿಲ್ 2019ರಲ್ಲಿ ಭಾರತಕ್ಕೆ ಬಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸೆಲೆಬ್ರಿಟಿಗಳೊಂದಿಗೆ ಮಾತ್ರ ಕಾರ್ಯಕ್ರಮ ನಡೆಸುವ ಗ್ರಿಲ್ಸ್ ಈ ಬಾರಿ ವಿರಾಟ್ ಕೊಹ್ಲಿ ಮತ್ತು ಪ್ರಿಯಾಂಕ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Virat Kohli : ಕಾರ್ಯಕ್ರಮದ ವೇದಿಕೆಯಲ್ಲೇ ಪತ್ನಿ ಅನುಷ್ಕಾ ಜತೆ ವಾಗ್ವಾದ ನಡೆಸಿದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಪ್ರಸ್ತುತ ಡಬ್ಲ್ಯುಟಿಸಿ 2023ರ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಭಾರತ ತಂಡ ಈ ಹಣಾಹಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯಲಿದ್ದು, ಆಸೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ತಮ್ಮ ದೇಶಕ್ಕಾಗಿ ಮತ್ತೊಂದು ಸ್ಮರಣೀಯ ಇನ್ನಿಂಗ್ಸ್ ಆಡಲು ಮುಂದಾಗಿದ್ದಾರೆ.
ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಭಾರತವು ಕಳೆದ ಬಾರಿ ತವರಿನ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಮೈದಾನದಲ್ಲಿಯೇ ಮತ್ತೊಂದು ಬಾರಿ ಪಾರಮ್ಯ ಸಾಧಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಓವಲ್ನಲ್ಲಿ ಆಸ್ಟ್ರೇಲಿಯಾದ ದಾಖಲೆ ಕಳಪೆಯಾಗಿದೆ. ಆದರೂ ನಿರ್ಣಾಯಕ ಮುಖಾಮುಖಿಯಲ್ಲಿ ಅವರನ್ನು ಭಾರತ ತಂಡ ಲಘವಾಗಿ ಪರಿಗಣಿಸದು.