Site icon Vistara News

Kohli VS Babar | ಬಾಬರ್ ಅಜಮ್‌ಗಿಂತ ವಿರಾಟ್‌ ಹೇಗೆ ಶ್ರೇಷ್ಠ ಬ್ಯಾಟರ್‌? ಪಾಕ್‌ ಲೆಜೆಂಡ್‌ಗಳು ವಿವರಿಸಿದ್ದಾರೆ

t20

ಲಾಹೋರ್​: ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ(Kohli VS Babar) ನಡುವೆ ಉತ್ತಮ ಬ್ಯಾಟರ್ ಯಾರು ಎಂಬ ಚರ್ಚೆ ಮತ್ತೊಮ್ಮೆ ಉಲ್ಬಣಗೊಂಡಿದೆ, ಏಕೆಂದರೆ ಎರಡು ವರ್ಷಗಳಿಂದ ರನ್‌ಗಾಗಿ ಹೆಣಗಾಡುತ್ತಿದ್ದ ಭಾರತೀಯ ಬ್ಯಾಟರ್ ಮತ್ತೆ ಮೈದಾನವನ್ನು ಆಳಲು ಪ್ರಾರಂಭಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರಾದ ಮಿಸ್ಬಾ ಉಲ್ ಹಕ್, ಶೋಯೆಬ್​ ಮಲಿಕ್​ ಮತ್ತು ವಕಾರ್​ ಯೂನಿಸ್​ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಂತೆ ವಿರಾಟ್​ ಕೊಹ್ಲಿ ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮುಂದಾಗಿ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸುತ್ತಾರೆ. ಆದರೆ ಬಾಬರ್​ ಇದಕ್ಕೆ ತದ್ವಿರುದ್ಧ. ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಬಳಿಕ ಮಂಕಾಗುತ್ತಾರೆ. ಇದು ಪಂದ್ಯದ ಫಲಿತಾಂಶದ ಮೇಳೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ವಿರಾಟ್​ನಂತೆ ಬ್ಯಾಟ್​ ಬೀಸಿ ಬಾಬರ್​ಗೆ ಸಲಹೆ

ವಿರಾಟ್ ಕೊಹ್ಲಿ ಅವರು ಚೇಸಿಂಗ್​ ವೇಳೆ ಆರಂಭದಲ್ಲಿ ರನ್​ ಗಳಿಸಲು ಹೆಚ್ಚು ಎಸೆತಗಳನ್ನು ಎದುರಿಸಿ ಆಡುವುದರಿಂದ ಅವರ ಸ್ಟ್ರೈಕ್​ರೇಟ್ ಕಡಿಮೆ ಇರುತ್ತದೆ. ಆದರೆ ಒಮ್ಮೆ ಬ್ಯಾಟಿಂಗ್​ಗೆ ಹೊಂದಿಕೊಂಡ ಬಳಿಕ ಅವರ ಸ್ಟ್ರೇಕ್​ರೇಟ್​ ಹೆಚ್ಚಾಗುತ್ತಲೇ ಸಾಗುತ್ತದೆ. ಇದೇ ಕೆಲಸವನ್ನು ಬಾಬರ್ ಅಜಂ ಕೂಡ ಮಾಡಬೇಕಿದೆ. ಏಕೆಂದರೆ ಮೊದಲ ಆರು ಓವರ್‌ಗಳ ಬಳಿಕ ಬಾಬರ್‌ನ ಸ್ಟ್ರೈಕ್ ರೇಟ್ ಕಡಿಮೆಯಾಗುವುದನ್ನು ನಾವು ಹೆಚ್ಚಾಗಿ ನೋಡಿದ್ದೇವೆ. ಮ್ಯಾಚ್ ವಿನ್ನಿಂಗ್ ಇನಿಂಗ್ಸ್​ ವೇಳೆ ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುತ್ತದೆ. ಆದ್ದರಿಂದ ವಿರಾಟ್​ ಅವರಂತೆ ಬಾಬರ್​ ಕೂಡ ಬ್ಯಾಟ್​ ಬೀಸಬೇಕೆಂದು ಪಾಕ್​ ಮಾಜಿ ಆಟಗಾರರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್​ಗೆ ಮಳೆ ಕಾಟ; ಶುಕ್ರವಾರದ ಎರಡೂ ಪಂದ್ಯಗಳು ರದ್ದು

Exit mobile version