Site icon Vistara News

Virat kohli : ಕೊಹ್ಲಿಯ ದುರದೃಷ್ಟ ಅಷ್ಟೆ, ಅವರ ನೈಪುಣ್ಯದ ಬಗ್ಗೆ ಮಾತನಾಡುವ ಅಗತ್ಯವಿಲ್ಲ

Virat kohli

ನಾಗ್ಪುರ: ಮಾಜಿ ನಾಯಕ ವಿರಾಟ್​ ಕೊಹ್ಲಿ(Virat kohli) ಹಾಗೂ ಮಾಜಿ ಕೋಚ್​ ರವಿ ಶಾಸ್ತ್ರಿಯ ದೋಸ್ತಿ ದೀರ್ಘ ಕಾಲದ್ದು. ಕೊಹ್ಲಿ ಈಗ ಭಾರತ ತಂಡದ ಪರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಆಡುತ್ತಿದ್ದು, ರವಿ ಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದಾರೆ. ಏತನ್ಮಧ್ಯೆ, ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್​ ಮುಂದುವರಿದಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 12 ರನ್ ಬಾರಿಸಿ ಔಟಾಗಿದ್ದಾರೆ. ಅದೂ ಕೂಡ ಟಾಡ್​ ಮರ್ಫಿ ಹಾಕಿದ ಅತ್ಯಂತ ಕೆಟ್ಟ ಎಸೆತಕ್ಕೆ ಅವರು ಬಲಿಯಾಗಿದ್ದಾರೆ. ವೈಡ್​ ಹೋಗುತ್ತಿದ್ದ ಎಸೆತವನ್ನು ಕೆಣಕಿ ವಿಕೆಟ್​ಕೀಪರ್​ ಅಲೆಕ್ಸ್​ ಕ್ಯೇರಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ದಾರೆ. ಕೊಹ್ಲಿ ನಿರಾಸೆಯಿಂದ ಪೆವಿಲಿಯನ್​ಗೆ ಮರಳುತ್ತಿದ್ದಂತೆ ಅವರ ಬ್ಯಾಟಿಂಗ್​ ಕೌಶಲದ ಬಗ್ಗೆ ಚರ್ಚೆಗಳು ಶುರುವಾಗಿವೆ.

ವಿರಾಟ್​ ಕೊಹ್ಲಿ ಬ್ಯಾಟಿಂಗ್​ ನೈಪುಣ್ಯವನ್ನು ಮರೆತಿದ್ದಾರೆ. ಕೆಟ್ಟ ಎಸೆತಗಳಿಗೆ ಔಟಾಗುತ್ತಿದ್ದಾರೆ. ಅವರ ಕಲಿಯಬೇಕಾಗಿರುವುದು ಇನ್ನಷ್ಟು ಇದೆ ಎಂದು ಹಿರಿಯ ಕ್ರಿಕೆಟಿಗರನೇಕರು ಮಾತನಾಡುತ್ತಿದ್ದಾರೆ. ಆದರೆ ಕಾಮೆಂಟೇಟರ್ ಹಾಗೂ ಮಾಜಿ ಕೋಚ್​ ರವಿಶಾಸ್ತ್ರಿ ಅದನ್ನು ಒಪ್ಪುತ್ತಿಲ್ಲ. ವಿರಾಟ್​ ಕೊಹ್ಲಿ ಉತ್ತಮ ಬ್ಯಾಟರ್​ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ದುರದೃಷ್ಟದಿಂದ ಔಟಾಗಿದ್ದಾರೆ ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ದುರದೃಷ್ಟ ಎದುರಿಸುತ್ತಿದ್ದಾರೆ. ಲೆಗ್​ಸೈಡ್​ಗೆ ಹೋಗುತ್ತಿದ್ದ ಚೆಂಡಿಗೆ ರನ್​ ಬಾರಿಸಲು ಹೋಗಿ ಔಟಾಗಿದ್ದಾರೆ. 50 ಇನಿಂಗ್ಸ್​ಗಳಲ್ಲಿ ಒಂದು ಬಾರಿ ಮಾತ್ರ ಈ ರೀತಿ ಔಟಾಗುವುದಕ್ಕೆ ಸಾಧ್ಯ. ಹಾಗೆಂದು ಅವರ ಬ್ಯಾಟಿಂಗ್ ಕೌಶಲದ ಬಗ್ಗೆ ವಿಮರ್ಶೆ ನಡೆಸುವ ಅಗತ್ಯವಿಲ್ಲ. ಆದರೆ, ಆಸ್ಟ್ರೇಲಿಯಾ ಪಾಲಿಗೆ ಅವರ ವಿಕೆಟ್ ಅತ್ಯಗತ್ಯವಾಗಿತ್ತು ಎಂಬುದಾಗಿ ರವಿ ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ : Virat Kohli: ವಿರಾಟ್​ ಕೊಹ್ಲಿಗೆ ಕಬ್ಬಿಣದ ಕಡಲೆಯಾದ ಸ್ಪಿನ್​ ದಾಳಿ

ವಿರಾಟ್​ ಕೊಹ್ಲಿ ಟೆಸ್ಟ್​ ಮಾದರಿಯಲ್ಲಿ ರನ್​ ಬರ ಎದುರಿಸುತ್ತಿದ್ದಾರೆ. ಏಕ ದಿನ ಮಾದರಿಯಲ್ಲಿಅವರು ರನ್​ ಬಾರಿಸುವ ಮೂಲಕ ಸುಧಾರಣೆ ಕಂಡಿದ್ದರೂ ಟಿ20 ಮಾದರಿಯಲ್ಲ ನಿರೀಕ್ಷಿತ ರನ್​ ಕೊಡುಗೆ ಕೊಡುತ್ತಿಲ್ಲ ಹೀಗಾಗಿ ಅವರು ಟೀಕೆಗಳನ್ನು ಎದುರಿಸುವಂತಾಗಿದೆ.

Exit mobile version