Site icon Vistara News

ಕೊಹ್ಲಿಯ ಶತಕ ನ್ಯಾಯಯುತ, ಅವರು ಯಾವುದೇ ತಪ್ಪು ಮಾಡಿಲ್ಲ; ವಿರೋಧಿಗಳಿಗೆ ತಿರುಗೇಟು ನೀಡಿದ ಶ್ರೀಕಾಂತ್‌

Virat Kohli is ecstatic after scoring his 48th century

ಪುಣೆ: ವಿರಾಟ್​ ಕೊಹ್ಲಿ(virat kohli) ಅವರು ಬಾಂಗ್ಲಾ(IND vs BAN) ವಿರುದ್ಧ ಶತಕ ಬಾರಿಸಿದನ್ನು ಕೆಲವರು ಪಶ್ನೆ ಮಾಡಿ ಇದು ವೈಯಕ್ತಿಕ ದಾಖಲೆಗಾಗಿಯೇ ಆಡಿದಂತಿದೆ ಎಂದು ಹೇಳಿದ್ದಾರೆ. ಅಲ್ಲದೆ ಕೊಹ್ಲಿ ಶತಕ ವಿಚಾರದಲ್ಲಿ ಪರ ವಿರೋಧದ ಚರ್ಚೆಗಳು ಕೂಡ ಆರಂಭವಾಗಿದೆ. ಆದರೆ 1983ರ ವಿಶ್ವಕಪ್​ ವಿಜೇತ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್‌(Krishnamachari Srikkanth) ಅವರು ವಿರಾಟ್​ ಪರ ಬ್ಯಾಟ್​ ಬೀಸಿದ್ದಾರೆ.

ವಿರಾಟ್ ಬಗ್ಗೆ ಅಪಸ್ವರ ಎತ್ತಿದವರ ವಿರುದ್ಧ ಟ್ವಿಟರ್​ನಲ್ಲಿ ಖಡಕ್​ ಎಚ್ಚರಿಕೆ ನೀಡಿರುವ ಶ್ರೀಕಾಂತ್‌, ವಿರಾಟ್ ಮಾಡಿದ್ದರಲ್ಲಿ ತಪ್ಪೇನು? ಕ್ರಿಕೆಟ್ ಅರ್ಥವಾಗದವರನ್ನು ನಾನು ಪ್ರಶ್ನಿಸುತ್ತೇನೆ, ವಿಶ್ವಕಪ್‌ನಲ್ಲಿ ಶತಕ ಗಳಿಸುವುದು ದೊಡ್ಡ ವಿಚಾರ ಎಂಬುದನ್ನು ಮೊದಲು ಗಮನಿಸಿ. ಅವರ ಶತಕವನ್ನು ಇಡೀ ತಂಡ ಆನಂದಿಸಿದೆ ಇದೊಂದು ಉತ್ತಮ ಟೀಮ್ ಸ್ಪಿರೀಟ್​ ಎನ್ನುವುದನ್ನು ನಾವು ಇಲ್ಲಿ ಮೊದಲು ಗಮನಿಸಬೇಕು. ಕೊಹ್ಲಿ ಹಾಗೂ ತಂಡಕ್ಕೆ ಅಭಿನಂದನೆಗಳು. ಚೆನ್ನೈ ವಿರುದ್ಧ ಸಂಕಷ್ಟದಲ್ಲಿ ಸಿಲುಕಿದಾಗ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತು ಆಡಿದ್ದರು. ಈಗ ಬಾಂಗ್ಲಾ ವಿರುದ್ದವೂ ಇದೇ ಪ್ರದರ್ಶನ ತೋರಿದ್ದಾರೆ” ಎಂದು ಬರೆದು ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

ಕೆಲ ಮಾಜಿ ಆಟಗಾರರು ವಿರಾಟ್​ ಕೊಹ್ಲಿ ಅವರು ತಂಡಕ್ಕಾಗಿ ಆಡಿಲ್ಲ. ಅವರು ವೈಯಕ್ತಿಕ ಸಾಧನೆಗಾಗಿ ಆಡಿದ್ದಾರೆ. ಈ ಶತಕ ನ್ಯಾಯಯುವಲ್ಲ ಎಂದು ಹೇಳಿದ್ದಾರೆ. ಆದರೆ ಬಹುತೇಖ ಮಂದಿ ವಿರಾಟ್​ ಇದುವರೆಗೂ ತಮ್ಮ ವೈಯಕ್ತಿಕ ದಾಖಲೆಗಾಗಿ ಒಮ್ಮೆಯೂ ಆಡಿಲ್ಲ. ತಂಡದ ಗೆಲುವೇ ಅವರ ಪ್ರಮುಖ ಗುರಿ ಎಂದಿದ್ದಾರೆ.

ಕೆ.ಎಲ್​ ರಾಹುಲ್​ ಬೆಂಬಲ

ವಿರಾಟ್​ ಕೊಹ್ಲಿ ಶತಕ ಬಾರಿಸುವಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಅವರ ಶಮ್ರಮವೂ ಅಧಿಕವಾಗಿದೆ. ಈ ಮಾತನ್ನು ರಾಹುಲ್​ ಅವರು ಪಂದ್ಯದ ಬಳಿಕ ರಿವೀಲ್​ ಮಾಡಿದ್ದರು. “ನಾನು ಕೊಹ್ಲಿ ಜತೆ ಸಿಂಗಲ್ ತೆಗೆದುಕೊಳ್ಳುವುದು ಬೇಡವೆಂದು ಹೇಳಿದೆ. ಆದರೆ ವಿರಾಟ್ ಕೊಹ್ಲಿ ಇದಕ್ಕೆ ಒಪ್ಪಲಿಲ್ಲ. ಸಿಂಗಲ್ ತೆಗೆದುಕೊಳ್ಳದಿದ್ದರೆ ಜನರು ನನ್ನನ್ನು ತಪ್ಪಾಗಿ ಅರ್ಥೈಸುತ್ತಾರೆ. ಈ ರೀತಿ ಮಾಡುವ ಮೂಲಕ ನಾನು ನನ್ನ ವೈಯಕ್ತಿಕ ದಾಖಲೆಗಾಗಿ ಆಡುತ್ತಿದ್ದೇನೆ ಎಂದು ಜನರು ಹೇಳಿಕೊಳ್ಳುತ್ತಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ ನಾನು ವಿರಾಟ್​ ಅವರನ್ನು ಸಮಾಧಾನ ಪಡಿಸಿ, ಪಂದ್ಯ ಹೇಗಿದ್ದರೂ ನಾವು ಸುಲಭ ಗೆಲ್ಲುತ್ತೇವೆ ನೀವೂ ಶತಕ ಪೂರೈಸಲೇ ಬೇಕು ಎಂದು ಹೇಳಿದೆ. ಒಲ್ಲದ ಮನಸ್ಸಿನಿಂದಲೇ ವಿರಾಟ್ ಕೊಹ್ಲಿ ನನ್ನ ಮಾತುಗಳನ್ನು ಒಪ್ಪಿಕೊಂಡರು. ಇದಾದ ಬಳಿಕ ವಿರಾಟ್ ಕೊಹ್ಲಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ಶತಕ ಪೂರೈಸಿದರು” ಎಂದು ಕೆಎಲ್​ ರಾಹುಲ್​ ಹೇಳಿದರು.

ಇದನ್ನೂ ಓದಿ Virat Kohli: ಸಚಿನ್ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ

ಶತಕದ ಯೋಚನೆಯೇ ಇರಲಿಲ್ಲ

“ಕೊಹ್ಲಿಗೆ ಶತಕ ಬಾರಿಸುವ ಯಾವುದೇ ಯೋಚನೆ ಇರಲಿಲ್ಲ. ಅವರ ತಲೆಯಲ್ಲಿದ್ದ ವಿಚಾರ ಒಂದೇ, ಪಂದ್ಯವನ್ನು ಆದಷ್ಟು ಬೇಗ ಮುಗಿಸಿ ಗೆಲುವು ಸಾಧಿಸಬೇಕೆಂದು. ನ್ನನ ಬಳಿಯೂ ಅವರು ಇದನ್ನೇ ಹೇಳುತ್ತಿದ್ದರು. ಆದರೆ ನಾನೇ ಒತ್ತಾಯ ಪೂರ್ವಕವಾಗಿ ಶತಕ ಬಾರಿಸಲು ಅವರನ್ನು ಪ್ರಚೋದಿಸಿದೆ ಎಂದು ರಾಹುಲ್​ ಹೇಳಿದರು.

Exit mobile version