Site icon Vistara News

ಪಾಕಿಸ್ತಾನ ವಿರುದ್ಧ ಧರಿಸಿದ್ದ ಕೊಹ್ಲಿಯ ಗ್ಲೌಸ್ ಭಾರಿ ಮೊತ್ತಕ್ಕೆ ಹರಾಜು!

virat kohli

ಮೆಲ್ಬೋರ್ನ್​: ಕಳೆದ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ 2022ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(virat kohli) ಅವರು ಧರಿಸಿದ್ದ ಕೈಗವಸು (ಗ್ಲೌಸ್)ಗಳು ಭಾರಿ ಮೊತ್ತಕ್ಕೆ ಹರಾಜು ಮಾಡಲಾಗಿದೆ. ಕಳೆದ ತಿಂಗಳು ಸಿಡ್ನಿಯಲ್ಲಿ ನಡೆದ ಚಾಪೆಲ್ ಫೌಂಡೇಶನ್‌ನ(The Chappell Foundation) ಆರನೇ ವಾರ್ಷಿಕ ಭೋಜನಕೂಟದಲ್ಲಿ ಕೊಹ್ಲಿಯ ಗ್ಲೌಸ್​ಗ​ಳನ್ನು ಹರಾಜಿಗೆ ಇಡಲಾಗಿತ್ತು. ಇದೀಗ ಹಾರ್ವ್ ಕ್ಲೆರ್ ಅಂತಿಮವಾಗಿ 5,750 ಯುಎಸ್ ಡಾಲರ್ (3.2 ಲಕ್ಷ ರೂ) ಮೌಲ್ಯದ ಬಿಡ್ ಸಲ್ಲಿಸಿ ಈ ಗ್ಲೌಸ್​ ತನ್ನದಾಗಿಸಿಕೊಂಡಿದೆ.

ಚಾಪೆಲ್ ಪ್ರತಿಷ್ಠಾನವು ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಹಣವನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. ಈ ಫೌಂಡೇಶನನ್ನು ಗ್ರೆಗ್ ಚಾಪೆಲ್ ಮತ್ತು ಆಸ್ಟ್ರೇಲಿಯಾದ ಉದ್ಯಮಿ ದರ್ಶಕ್ ಮೆಹ್ತಾ ಅವರು ಸ್ಥಾಪಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಆಶ್ರಯ, ಆರೈಕೆ, ಶಿಕ್ಷಣ, ತರಬೇತಿ ಮತ್ತು ಉತ್ತಮ ಭವಿಷ್ಯವನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.

ಚಾಪೆಲ್ ಫೌಂಡೇಶನ್ 2017ರಿಂದ ಈವರೆಗೆ 5 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ. ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಬ್ರೆಟ್ ಲೀ, ಮೈಕೆಲ್ ಬೆವನ್, ಪೀಟರ್ ನೆವಿಲ್, ಫಿಲ್ ಎಮೆರಿ, ಜಿಯೋಫ್ ಲಾಸನ್, ಗ್ರೆಗ್ ಡೈಯರ್, ಟ್ರೆವರ್ ಮತ್ತು ಇಯಾನ್ ಚಾಪೆಲ್ ಅವರು ವಾರ್ಷಿಕ ಡಿನ್ನರ್‌ಗಾಗಿ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಉಪಸ್ಥಿತರಿದ್ದರು.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅಜೇಯ 82 ರನ್ ಬಾರಿಸಿ ಭಾರತ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಈ ವೇಳೆ ಅಕ್ಷರಶಃ ಗದ್ಗದಿತರಾದ ಕೊಹ್ಲಿ, ತನ್ನ ಕಣ್ಣಾಲಿಗಳಲ್ಲಿ ಆನಂದಬಾಷ್ಪ ತುಂಬಿಕೊಂಡು ಆಕಾಶದತ್ತ ಮುಖಮಾಡಿ ತಮ್ಮದೇ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು.

ಇದನ್ನೂ ಓದಿ Virat And Rohit: ಕುಚಿಕು ಗೆಳೆಯರಾದ ರೋಹಿತ್​-ವಿರಾಟ್​ ಸಂಭ್ರಮಾಚರಣೆಗೆ ಅಭಿಮಾನಿಗಳು ಫಿದಾ

ಅಂತಿಮ ಎರಡು ಓವರ್‌ನಲ್ಲಿ 31 ರನ್‌ ಸವಾಲು

18 ಓವರ್‌ ಮುಕ್ತಾಯಕ್ಕೆ ಭಾರತ ತಂಡ 4 ವಿಕೆಟ್‌ಗೆ 129 ರನ್‌ ಗಳಿಸಿತ್ತು. ಉಳಿದ 2 ಓವರ್‌ಗಳಲ್ಲಿ ಗೆಲುವಿಗೆ 31 ರನ್‌ ಗಳಿಸುವ ಸವಾಲು ಭಾರತದ ಮುಂದಿತ್ತು. ಅದಾಗಲೇ ಸ್ಲೋ ಬೌಲಿಂಗ್‌ ಮೂಲಕ ಉತ್ತಮ ಸ್ಪೆಲ್‌ ನಡೆಸಿ ಯಶಸ್ಸು ಕಂಡ ಹ್ಯಾರಿಸ್‌ ರವೂಫ್‌ ಬೌಲಿಂಗ್‌ ನಡೆಸಲು ಮುಂದಾದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್ಸ್‌ ರನ್‌ ದಾಖಲಾಯಿತು. ಮೂರನೇ ಎಸೆತ ಡಾಟ್‌ ಬಾಲ್.‌ ಮುಂದಿನ ಎಸೆತದಲ್ಲಿ ಪಾಂಡ್ಯ ಒಂದು ರನ್‌ ಗಳಿಸಿದರು. ಈ ವೇಳೆ ಭಾರತದ ಗೆಲುವಿಗೆ 8 ಎಸೆತದಲ್ಲಿ 28 ರನ್‌ ಗಳಿಸಬೇಕಿತ್ತು. ಸ್ಟ್ರೈಕ್‌ನಲ್ಲಿದ್ದ ಕೊಹ್ಲಿ, ರವೂಫವವ ಅವರ 5ನೇ ಮತ್ತು ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವಿನ ಭರವಸೆ ಮೂಡಿಸಿದರು. ಅಂತಿಮ ಓವರ್‌ನಲ್ಲಿ 16 ರನ್‌ ಗಳಿಸಬೇಕಿತ್ತು.

ಮೊಹಮ್ಮದ್‌ ನವಾಜ್‌ ತಮ್ಮ ಸ್ಪೆಲ್‌ನ ಮೊದಲ ಮೂರು ಓವರ್‌ನಲ್ಲಿ 29 ರನ್‌ ಬಿಟ್ಟುಕೊಟ್ಟಿದ್ದರು. ಆದರೂ ನಾಯಕ ಬಾಬರ್‌ ಅಜಂ ಇವರ ಮೇಲೆ ನಂಬಿಕೆ ಇರಿಸಿ ಚೆಂಡು ಕೈಗೆ ನೀಡಿದರು. ಅದರಂತೆ ತಾನೆಸೆದ ಮೊದಲ ಎಸೆತದಲ್ಲೇ ಡೇಂಜರಸ್‌ ಪಾಂಡ್ಯ ವಿಕೆಟ್‌ ಕಿತ್ತರು. ಮುಂದಿನ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ ಒಂದು ರನ್‌ ಗಳಿಸಿದರು. ಮೂರನೇ ಎಸೆತದಲ್ಲಿ ಕೊಹ್ಲಿ ಎರಡು ರನ್‌ ಗಳಿಸಿದರು. ಮೂರನೇ ಎಸೆತದಲ್ಲಿ ನೋಬಾಲ್‌ಗೆ ಸಿಕ್ಸರ್‌ ಬಡಿದಟ್ಟಿದ ಕೊಹ್ಲಿ ಗೆಲುವನ್ನು ಭಾರತದ ಕಡೆಗೆ ತಿರುಗಿಸಿದರು. ಮುಂದಿನ ಎಸೆತ ವೈಡ್‌ ಆಗಿತ್ತು. ಫ್ರೀಹಿಟ್‌ ಎಸೆದಲ್ಲಿ ಕೊಹ್ಲಿ ಬೌಲ್ಡ್‌ ಆದರೂ ಮೂರು ರನ್‌ ಕಲೆಹಾಕಿದರು. ಆದರೆ 5ನೇ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ ಸ್ಟಂಪ್ಡ್‌ ಆಗುವ ಮೂಲಕ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ಕೊಂಡೊಯ್ಯುವಂತೆ ಮಾಡಿದರು.

ಅಂತಿಮವಾಗಿ ಒಂದು ಎಸೆತದಲ್ಲಿ ಭಾರತಕ್ಕೆ ಎರಡು ರನ್‌ ಗಳಿಸುವ ಸವಾಲು ಎದುರಾಯಿತು. ಈ ವೇಳೆ ಅನುಭವಿ ಆಟಗಾರ ಆರ್‌.ಅಶ್ವಿನ್‌ ಕ್ರೀಸ್‌ಗೆ ಬಂದರು. ಅಂತಿಮ ಎಸೆತವನ್ನು ವೈಡ್‌ಲೈನ್‌ನಲ್ಲಿ ಎಸೆದು ಅಶ್ವಿನ್‌ ಅವರನ್ನು ವಂಚಿಸುವ ಯತ್ನದಲ್ಲಿ ನವಾಜ್‌ ವಿಫಲರಾದರು. ಕೊನೆಗೆ ಒಂದು ಎಸೆತದಲ್ಲಿ ಒಂದು ರನ್‌ ಗಳಿಸುವ ಸವಾಲು ಭಾರತಕ್ಕೆ ಲಭಿಸಿತು. ಪಂದ್ಯ ವೀಕ್ಷಿಸುತ್ತಿದ್ದ ಎಲ್ಲ ಅಭಿಮಾನಿಗಳು ಎಂದು ಕ್ಷಣ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದರು. ಆದರೆ ಅಶ್ವಿನ್‌ ಈ ಎಸೆತವನ್ನು ಸಿಂಗಲ್‌ ತೆಗೆದು ಭಾರತಕ್ಕೆ ಗೆಲುವು ತಂದು ಕೊಟ್ಟರು. ಇಲ್ಲಿಗೆ ಪಾಕ್‌ ಗೆಲುವಿನ ಕನಸ್ಸನ್ನು ನವಾಜ್‌ ಮತ್ತು ರವೂಫ್‌ ಕಸಿದುಕೊಂಡು ವಿಲನ್‌ಗಳಾಗಿದ್ದರು.

Exit mobile version