ಯೆಯೊಸು: ಭಾರತದ ಸ್ಟಾರ್ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ(Chirag Shetty) ಕೊರಿಯಾ ಓಪನ್ ಸೂಪರ್ 500 ಟೂರ್ನಿಯ(Korea Open 2023) ಪಂದ್ಯದಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಪ್ರಶಸ್ತಿಯೊಂದನ್ನು ಖಾತ್ರಿ ಪಡಿಸಿಕೊಮಡಿದ್ದಾರೆ.
ಶನಿವಾರ ನಡೆದ ಪುರುಷರ ಡಬಲ್ಸ್‌ನ ಸೆಮಿಫೈನಲ್ ಕಾದಾಟದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ 2021ರ ವಿಶ್ವ ಚಾಂಪಿಯನ್ ಆಗಿರುವ ಚೀನಾದ ಎರಡನೇ ಶ್ರೇಯಾಂಕದ ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ ಅವರನ್ನು 21-15, 24-22 ನೇರ ಗೇಮ್ಗಳಿಂದ ಹಿಮ್ಮಟಿಸಿದರು.
ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ ಎರಡನೇ ಶ್ರೇಯಾಂಕದ ಜೋಡಿಯಾಗಿದ್ದರೂ ಭಾರತೀಯರ ಮುಂದೆ ಆಟ ನಡೆಯಲಿಲ್ಲ. ದ್ವಿತೀಯ ಸೆಟ್ನಲ್ಲಿ ತೀವ್ರ ಹೋರಾಟ ನಡೆಸಿದರೂ ಅದೃಷ್ಟ ಭಾರತದ ಜೋಡಿಗೆ ಲಭಿಸಿತು. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಐದನೇ ಶ್ರೇಯಾಂಕದ ಜಪಾನಿನ ಜೋಡಿಯನ್ನು 21-14 21-17 ರಿಂದ ಮಣಿಸಿತ್ತು.
Another Sunday another Final for Satwik/Chirag✨
— BAI Media (@BAI_Media) July 22, 2023
We don't mind getting used to this😎
📸: @badmintonphoto#KoreaOpen2023#IndiaontheRise#Badminton pic.twitter.com/lqzQHepxYF
ಕಳೆದ ತಿಂಗಳು ಭಾರತೀಯ ಜೋಡಿ “ಇಂಡೋನೇಷ್ಯಾ ಓಪನ್” ಬ್ಯಾಡ್ಮಿಂಟನ್(Indonesia Open) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಸೂಪರ್-1000ನಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹಿರಿಮೆ ಪಾತ್ರರಾಗಿದ್ದರು. ಇದಕ್ಕೂ ಮುನ್ನ ಸ್ವಿಸ್ ಓಪನ್ ಸೂಪರ್ ಸೀರೀಸ್-300 ಬ್ಯಾಡ್ಮಿಂಟನ್(Swiss Open) ಪಂದ್ಯಾವಳಿಯಲ್ಲಿ ಗೆದ್ದಿದ್ದರು. ಇದೀಗ ಮೂನರೇ ವರ್ಷದ ಮೂರನೇ ಪ್ರತಿಷ್ಠಿತ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ವೇಗದ ಸ್ಮ್ಯಾಶ್ ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದ ಸಾತ್ವಿಕ್
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮಂಗಳವಾರ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಇಂಡೋನೇಷ್ಯಾ ಓಪನ್ ಸೂಪರ್ ಟೂರ್ನಿಯ ಪಂದ್ಯವೊಂದರಲ್ಲಿ 565 ಕಿ.ಮೀ ವೇಗದಲ್ಲಿ ಸ್ಮ್ಯಾಶ್ ಬಾರಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಹಿರಿಮೆಗೆ ಪಾತ್ರರಾದರು. 2013ರ ಮೇ ತಿಂಗಳಲ್ಲಿ ಮಲೇಷ್ಯಾದ ಟಾನ್ ಬೂನ್ ಹ್ಯೋಂಗ್ ಬಾರಿಸಿದ್ದ ಗಂಟೆಗೆ 493 ಕಿ.ಮೀ ವೇಗದ ಸ್ಮ್ಯಾಶ್ ದಾಖಲೆಯನ್ನು ಮುರಿದರು.