ಚೆನ್ನೈ : Team India ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಈಗ ಕ್ರಿಕೆಟ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವಂತಹ ಹೆಸರು. ಟೀಮ್ ಇಂಡಿಯಾದಲ್ಲಿ ಡಿಕೆ ಕಾಣಿಸಿಕೊಂಡು ಹತ್ತಿರತ್ತಿರ ಮೂರು ವರ್ಷಗಳಾಗಿತ್ತು.…ಡಿಕೆಯ ಕ್ರಿಕೆಟ್ ಕರಿಯರ್ ಮುಗಿದೇ ಹೋಯಿತು ಅನ್ನುವಾಗ ಕಾರ್ತಿಕ್ ಗೆ ಜೀವ ನೀಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಹರಾಜಿನಲ್ಲಿ ಡಿಕೆಯನ್ನ ಖರೀದಿ ಮಾಡಿದ ಬೆಂಗಳೂರು ಫ್ರಾಂಚೈಸಿ ಆಡುವ ೧೧ರ ಬಳಗದಲ್ಲಿ ಅವಕಾಶ ಕೊಟ್ಟಿತು. ಸಿಕ್ಕ ಅವಕಾಶವನ್ನ ಸದ್ಬಳಕೆ ಮಾಡಿಕೊಂಡ ಡಿಕೆ ಐಪಿಎಲ್ ನಲ್ಲಿ ಮಿಂಚಿದರು. ಅದೇ ಆಧಾರದ ಮೇಲೆ ಟೀಮ್ ಇಂಡಿಯಾಗೂ ವಾಪಸ್ ಬಂದರು. ಭಾರತ ತಂಡದಲ್ಲೂ ಅಗತ್ಯ ರನ್ ಪೇರಿಸುವ ಮೂಲಕ ಹೆಸರು ಮಾಡುತ್ತಿದ್ದಾರೆ ಹಾಗೂ ಬೆಸ್ಟ್ ಫಿನಿಶರ್ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಆದ್ರೆ ಇಲ್ಲೊಬ್ಬರು ಡಿಕೆ ಬೆಸ್ಟ್ ಫಿನಿಷರ್ ಅಲ್ಲ ಅಂತ ಹೇಳುತ್ತಿದ್ದಾರೆ. ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ. ಟೀಂ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್.
ಯಾಕೆ ಬೆಸ್ಟ್ ಫಿನಿಶರ್ ಅಲ್ಲ?
ಡಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ದಾರೆ. ಟೀಮ್ ಇಂಡಿಯಾದಲ್ಲೂ ಮಿಂಚುತ್ತಿದ್ದಾರೆ. ಆದರೆ ಅವರನ್ರನು ಬೆಸ್ಟ್ ಫಿನಿಷರ್ ಅಂತ ಹೇಳೋದಕ್ಕೆ ಆಗುವುದಿಲ್ಲ. ಕೊನೆಯ ಎರಡ್ಮೂರ್ ಓವರ್‌ಗಳಲ್ಲಿ ಬಂದು ಆಡಿದ್ರೆ ಆತ ಬೆಸ್ಟ್ ಫಿನಿಷರ್ ಆಗುವುದಿಲ್ಲ. .8 ಅಥವಾ 9ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದು ಪಂದ್ಯ ಗೆಲ್ಲಿಸಿ ಕೊಡುವವನು ಮ್ಯಾಚ್ ಫಿನಿಶರ್ ಆಗುತ್ತಾನೆ ಎಂದು ಶ್ರೀಕಿ ಹೇಳಿದ್ದಾರೆ.
ಮತ್ಯಾರು ಫಿನಿಶರ್ಸ್?
ನಿಜವಾದ ಫಿನಿಷರ್ಸ್ ಅಂದರೆ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ, ಅವ್ರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಅವರನ್ನು ಫಿನಿಷರ್ಸ್ ಅಂತ ಹೇಳಬಹುದು ಅಂತ ಶ್ರೀಕಾಂತ್ ಕೃಷ್ಣಮಾಚಾರಿ ಉದಾಹರಣೆ ಸಮೇತ ಫಿನಿಶರ್ಸ್ ಹೇಗಿರಬೇಕು ಎಂದು ವಿವರಿಸಿದ್ದಾರೆ.
ಅದೇನೆ ಅದರೂ, ಆರ್‌ಸಿಬಿ ಅಭಿಮಾನಿಗಳ ಅಭಿಮಾನಿಗಳ ಪಾಲಿಗೆ ಡಿಕೆಯೇ ಬೆಸ್ಟ್ ಫಿನಿಷರ್..ಆರ್‌ಸಿಬಿ ಅಭಿಮಾನಿಗಳಂತೂ ಡಿಕೆಯ ಆಟಕ್ಕೆ ಫಿದಾ ಆಗಿದ್ದಾರೆ. ದಿನೇಶ್ ಕಾರ್ತಿಕ್ ಅವರೇ ನಮ್ಮ ಪಾಲಿನ ಬೆಸ್ಟ್ ಫಿನಿಶರ್ ಎಂದು ಹೇಳುತ್ತಿದ್ದಾರೆ.
ದಿನೇಶ್ ಕಾರ್ತಿಕ್ ಅವರ ಕಣ್ಣು ಟಿ20 ವಿಶ್ವ ಕಪ್ ಮೇಲೆ. ಅದಕ್ಕಾಗಿ ತಮ್ಮ ಸಾಮರ್ಥ್ಯವನ್ನೆಲ್ಲ ಒರೆಗೆ ಹಚ್ಚಿ ಆಡುತ್ತಿದ್ದಾರೆ ಹಾಗೂ ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ.
ಇದನ್ನೂ ಓದಿ | CWG- 2022 | ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ಬೆಳ್ಳಿಯ ಬೆಡಗು, ಮಲೇಷ್ಯಾ ಚಾಂಪಿಯನ್…