Site icon Vistara News

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

Pandya brothers

ಬೆಂಗಳೂರು: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಐಪಿಎಲ್​ನ ಸ್ಟಾರ್ ಸಹೋದರರು (Pandya Brothers). ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಸ್ಪಿನ್ ಆಲ್ರೌಂಡರ್ ಆಗಿದ್ದಾರೆ. ಸಹೋದರರು ಒಟ್ಟಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಬಹುತೇಕ ಏಕ ಕಾಲಕ್ಕೆ ಖ್ಯಾತಿ ಗಳಿಸಿದರು. ಇಬ್ಬರೂ ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. ನಂತರ ವಿವಿಧ ಫ್ರಾಂಚೈಸಿಗಳಿಗೆ ಹೋದರು. 2024 ರ ಋತುವಿಗೆ ಮುಂಚಿತವಾಗಿ, ಹಾರ್ದಿಕ್ ಮುಂಬೈ ಇಂಡಿಯನ್ಸ್​ಗೆ ನಾಯಕನಾಗಿ ಮರಳಿದರು. ಈ ಸಹೋದರರ ಮನೆಗೆ ಹೊಸ ಅತಿಥಿಯೊಬ್ಬ ಆಗಮಿಸಿದ್ದಾನೆ.

ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಕುರಿ ಶರ್ಮಾ ಅವರ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅದಕ್ಕೆ ವಾಯು ಎಂಬ ಹೆಸರಿಟ್ಟಿದ್ದಾರೆ. ಹೊಸ ಸದಸ್ಯನನ್ನು ಪಾಂಡ್ಯ ಕುಟುಂಬ ಶುಕ್ರವಾರ ಅದ್ಧೂರಿಯಿಂದ ಸ್ವಾಗತಿಸಿದೆ. ಆ ಚಿತ್ರಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಆಲ್​ರೌಂಡರ್​ ಕೃನಾಲ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ತಮ್ಮ ಫ್ರಾಂಚೈಸಿಗಾಗಿ ಹೆಚ್ಚು ಎಕಾನಮಿಕಲ್​ ಆಗಿರುವ ನಾಲ್ಕು ಓವರ್​ಗಳನ್ನು ಎಸೆದಿದ್ದಾರೆ. ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 33ರ ಹರೆಯದ ಪಾಂಡ್ಯ ಈ ಸಾಧನೆ ಮಾಡಿದ್ದಾರೆ.

ಪಾಂಡ್ಯ ನಾಲ್ಕು ಓವರ್​ಗಳಲ್ಲಿ 2.75 ಎಕಾನಮಿ ರೇಟ್​​ನಲ್ಲಿ 11 ರನ್​ ನೀಡಿ 3 ವಿಕೆಟ್​ ಪಡೆದಿದ್ದಾರೆ. ಸಾಯಿ ಸುದರ್ಶನ್, ಬಿ.ಆರ್.ಶರತ್ ಮತ್ತು ದರ್ಶನ್ ನಲ್ಕಂಡೆ ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಇದನ್ನೂ ಓದಿ: Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

ಇದು ಐಪಿಎಲ್​​ನಲ್ಲಿ ಎಲ್ಎಸ್ಜಿ ಬೌಲರ್ ಗಳಿಸಿದ ನಾಲ್ಕು ಓವರ್ಗಳ ಅತ್ಯಂತ ಎಕಾನಮಿ ಸ್ಪೆಲ್ ಆಗಿದೆ. 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್​ಗಳಲ್ಲಿ 11 ರನ್ಗೆ 2 ವಿಕೆಟ್ ಪಡೆದ ತಮ್ಮದೇ ದಾಖಲೆಯನ್ನು ಪಾಂಡ್ಯ ಮುರಿದರು. ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್​​ಗಳಲ್ಲಿ 14 ರನ್​ಗೆ 5 ವಿಕೆಟ್ ಪಡೆದಿದ್ದರು.

ಕೃನಾಲ್ ಗುಜರಾತ್​​ ವಿರುದ್ಧ ಆಡಲು ಇಷ್ಟಪಡುತ್ತಾರೆ ಅಂಕಿ ಅಂಶಗಳು ಅದನ್ನು ಸಾಬೀತುಪಡಿಸುತ್ತವೆ. ಐದು ಪಂದ್ಯಗಳಲ್ಲಿ, ಅವರು ಫ್ರಾಂಚೈಸಿ ವಿರುದ್ಧ 17.66 ಸರಾಸರಿಯಲ್ಲಿ ಮತ್ತು 5.3 ಎಕಾನಮಿ ರೇಟ್​​ನಲ್ಲಿ ಆರು ವಿಕೆಟ್​ ಪಡೆದಿದ್ದಾರೆ. ಜಿಟಿ ವಿರುದ್ಧ ಅವರು 20 ಸ್ಟ್ರೈಕ್ ರೇಟ್ ಸಹ ಕಾಯ್ದುಕೊಂಡಿದ್ದಾರೆ. ಜಿಟಿ ವಿರುದ್ಧ ಐದು ಇನ್ನಿಂಗ್ಸ್​ಗಳಲ್ಲಿ 17.00 ಸರಾಸರಿಯಲ್ಲಿ 51 ರನ್ ಗಳಿಸಿದ್ದಾರೆ. ಅಜೇ 23 ಅತ್ಯುತ್ತಮ ಸ್ಕೋರ್.

Exit mobile version