ಮುಂಬಯಿ : ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್‌ಗಾಗಿ ಈಗಾಗಲೇ ಯುಎಇಗೆ ತೆರಳಿ ಅಭ್ಯಾಸ ಆರಂಭಿಸಿದೆ. ಆಗಸ್ಟ್ ೨೮ರಂದು ಪಾಕಿಸ್ತಾನ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಆಡಲಿದೆ. ಏತನ್ಮಧ್ಯೆ, ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್‌ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನೆಟ್ ಬೌಲರ್ ಆಗುವಂತೆ ಕರೆ ಕೊಟ್ಟಿದೆ. ಹೀಗಾಗಿ ಮಧ್ಯಪ್ರದೇಶದ ೨೫ ವರ್ಷದ ಬೌಲರ್ ದುಬೈಗೆ ತೆರಳಲಿದ್ದಾರೆ.
ಕುಲ್ದೀಪ್ ಸೇನ್‌ಗೆ ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ನೆಟ್ ಬೌಲರ್ ಅಗುವ ಅವಕಾಶ ಲಭಿಸಿದೆ. ಕುಲ್ದೀಪ್ ಅವರ ಸಹೋದರ ಜಗದೀಪ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಬಿಸಿಸಿಐ ಆಯ್ಜೆ ಸಮತಿಯ ಮುಖ್ಯಸ್ಥರಾದ ಚೇತನ್ ಶರ್ಮ ಅವರು, ಕರೆ ಮಾಡಿ ತಂಡ ಸೇರಿಕೊಳ್ಳುವಂತೆ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಕುಲ್ದೀಪ್ ಸೇನ್ ಸರಾಸರಿ ೧೪೫ ಕಿ.ಮೀ ವೇಗದಲ್ಲಿ ಚೆಂಡೆಸೆಯು ಸಾಮರ್ಥ್ಯ ಹೊಂದಿದ್ದಾರೆ. ೨೦೨೨ನೇ ಆವೃತ್ತಿಯ ಐಪಿಎಲ್‌ನಲ್ಲಿ ೨೦ ಲಕ್ಷ ರೂಪಾಯಿ ಬೆಲೆಗೆ ರಾಜಸ್ಥಾನ್ ತಂಡ ಸೇರಿದ್ದ ಅವರು ೭ ಪಂದ್ಯಗಳಲ್ಲಿ ೮ ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರದರ್ಶನದ ಹಿನ್ನೆಲೆಯಲ್ಲಿ ಅವರಿಗೆ ನೆಟ್ ಬೌಲರ್ ಆಗುವ ಅವಕಾಶ ಲಭಿಸಿದೆ.
ಇದನ್ನೂ ಓದಿ | ಮಹಿಳಾ ಬೌಲರ್ ಎಸೆತಕ್ಕೆ K L Rahul ಅಭ್ಯಾಸ