ನವದೆಹಲಿ: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಅಜೇಯ 122 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿಯನ್ನು ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಮತ್ತೊಮ್ಮೆ ಗುರಿಯಾಗಿಸಿಕೊಂಡಿದ್ದಾರೆ. ಸ್ವಿಂಗ್ ಮತ್ತು ಸೀಮಿಂಗ್ ಟ್ರ್ಯಾಕ್ನಲ್ಲಿ ಉತ್ತಮ ಬೌಲಿಂಗ್ ಮಾಡಿರುವ ಕುಲ್ದೀಪ್ ಯಾದವ್ ಅವರು ಆ ಪ್ರಶಂಸೆಗೆ ಅರ್ಹರು ಎಂದು ಕ್ರಿಕೆಟಿಗ ಮತ್ತು ರಾಜಕಾರಣಿಯಾಗಿರು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Fastest to 13000 ODI runs.
— BCCI (@BCCI) September 11, 2023
Take a bow, @imVkohli 🙌🙌#TeamIndia pic.twitter.com/UOT6HsJRB2
ಕೊಹ್ಲಿ 94 ಎಸೆತಗಳಲ್ಲಿ 122 ರನ್ ಗಳಿಸುವ ಮೂಲಕ ಪಾಕಿಸ್ತಾನ ವಿರುದ್ಧ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಲು ಭಾರತಕ್ಕೆ ನೆರವಾಗಿದ್ದರು. ಬಲಗೈ ಬ್ಯಾಟರ್ ಕೆಎಲ್ ರಾಹುಲ್ ಅವರೊಂದಿಗೆ 233 ರನ್ಗಳ ಮುರಿಯದ ಜೊತೆಯಾಟವನ್ನು ಹಂಚಿಕೊಂಡಿದ್ದರು. ಆದರೆ ವಿಕೆಟ್ಗಳ ನಡುವಿನ ಅವರ ಓಟವು ಪ್ರಮುಖ ಚರ್ಚೆಯ ವಿಷಯವಾಗಿತ್ತು. ಅಲ್ಲದೆ, ಈ ಪಂದ್ಯದಲ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ಅತಿವೇಗದಲ್ಲಿ 13,000 ರನ್ ಪೂರೈಸಿ ಸಾಧನೆ ಮಾಡಿದ್ದರು.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗಂಭೀರ್, ಕುಲ್ದೀಪ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ. ಮಣಿಕಟ್ಟು ಸ್ಪಿನ್ನರ್ ವಿರುದ್ಧ ಪಾಕಿಸ್ತಾನ ಬ್ಯಾಟರ್ಗಳು ತಡಬಡಾಯಿಸಿದ್ದರು ಎಂದು ಹೇಳಿದರು.

Fastest to 13000 ODI runs.

Take a bow, @imVkohli 🙌🙌#TeamIndia pic.twitter.com/UOT6HsJRB2
— BCCI (@BCCI) September 11, 2023

ಕುಲದೀಪ್ ಯಾದವ್ ಅವರನ್ನು ಈ ಪಂದ್ಯದಲ್ಲಿ ಮೀರಿ ನೋಡಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಶತಕ, ಕೆಎಲ್ ರಾಹುಲ್ ಶತಕ , ರೋಹಿತ್ ಶರ್ಮಾ 50, ಶುಭಮನ್ ಗಿಲ್ 50 ರನ್ ಗಳಿಸಿದ್ದಾರೆ. ಈ ರೀತಿಯ ಪಿಚ್ನಲ್ಲಿ ಸ್ವಿಂಗ್, ವಏಗದ ಬೌಲರ್ಗಳಿಗೆ ಮಾತ್ರ ಅನುಕೂಲ. ಎಲ್ಲಕ್ಕಿಂತ ಮುಖ್ಯವಾಗಿ, ಸಾಂಪ್ರದಾಯಿಕವಾಗಿ ಸ್ಪಿನ್ ಬೌಲಿಂಗ್ಗೆ ಚೆನ್ನಾಗಿ ಆಡುವ ಪಾಕಿಸ್ತಾನದ ಬ್ಯಾಟರ್ಗಳಿಗೆ ಕುಲ್ದೀಪ್ ಬೆದರಿಕೆ ಹುಟ್ಟಿಸಿದ್ದರು. ಈ ಮೂಲಕ ಅವರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರು ಎಂದು ಮುಂದುವರಿದ ಗಂಭೀರ್ ಹೇಳಿದ್ದಾರೆ.
ಸಾಧನೆ ಗುಟ್ಟು ಬಹಿರಂಗ
ಕಾನ್ಪುರ ಮೂಲದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ತಮ್ಮ ರನ್-ಅಪ್ ನೇರ ಮತ್ತು ಲಯಬದ್ಧವಾಗಿ ಹೆಚ್ಚು ಆಕ್ರಮಣಕಾರಿಯಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಇದು ಹೆಚ್ಚಿನ ನಿಯಂತ್ರಣವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.
ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಒಂದೂವರೆ ವರ್ಷಗಳಾಗಿವೆ. ರನ್-ಅಪ್ ನೇರವಾಗಿದೆ. ಲಯವು ಆಕ್ರಮಣಕಾರಿಯಾಗಿದೆ. ವಿಧಾನ ಚೆನ್ನಾಗಿದೆ. ನಾನು ನನ್ನ ಸ್ಪಿನ್ ಮತ್ತು ಡ್ರಿಫ್ಟ್ ಅನ್ನು ಕಳೆದುಕೊಳ್ಳಲಿಲ್ಲ,. ನನ್ನ ಬೌಲಿಂಗ್ ವೇಗವು ಹೆಚ್ಚಾಯಿತು ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.