ಕಾನ್ಪುರ: ಟಿ29 ವಿಶ್ವಕಪ್ ತಂಡದ ಭಾಗವಾಗಿದ್ದ ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್(Kuldeep Yadav) ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ(Chief Minister of Uttar Pradesh) ಯೋಗಿ ಆದಿತ್ಯನಾಥ್(Yogi Adityanath) ಅವರು ಅಭಿನಂದಿಸಿದ್ದಾರೆ. ಜತೆಗೆ ಸ್ಮರಣಿಯನ್ನು ನೀಡಿ ಗೌರವಿಸಿದ್ದಾರೆ. ಈ ಫೋಟೊ ವೈರಲ್ ಆಗಿದೆ.
ಕುಲ್ದೀಪ್ ಯಾದವ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ವಿಕೆಟ್ ಕಿತ್ತು ಮಿಂಚಿದ್ದರು. ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಗಮನಸೆಳೆದಿದ್ದರು.
ಟಿ20 ವಿಶ್ವಕಪ್(T20 World Cup) ಗೆಲುವಿನ ಬಳಿಕ ಟ್ರೋಫಿ ಎತ್ತಿ ಹಿಡಿಯುವಾಗ ನಾಯಕ ರೋಹಿತ್ ಶರ್ಮ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ಈ ಬಗ್ಗೆ ಪ್ರಧಾನಿ ಮೋದಿ(Narendra Modi) ಪ್ರಶ್ನೆ ಕೇಳಿದಾಗ ಕುಲ್ದೀಪ್(Kuldeep Yadav) ನೀಡಿರುವ ಉತ್ತರ ಕೇಳಿ ಮೋದಿ ಸೇರಿ ಟೀಮ್ ಇಂಡಿಯಾ ಆಟಗರರು ನಗೆಗಡಲಲ್ಲಿ ತೇಲಿದ್ದರು.
ರೋಹಿತ್ ಬಳಿ ಮೋದಿ ಅವರು ಈ ರೀತಿ ಸಂಭ್ರಮಿಸಲು ಚಾಹಲ್ ಸಲಹೆ ನೀಡಿದರೇ? ಎಂದು ಕೇಳಿದರು. ಈ ವೇಳೆ ನಗುಮುಖದಿಂದಲೇ ರೋಹಿತ್, ‘ಹೌದು ಚಾಹಲ್ ಹಾಗೂ ಕುಲದೀಪ್ ಅವರು ಸಲಹೆ ನೀಡಿದ್ದರು’ ಎಂದು ತಿಳಿಸಿದರು. ಈ ವೇಳೆ ಕುಲದೀಪ್ ಅವರಲ್ಲಿ ನಿಮ್ಮ ನಾಯಕನನ್ನು ನೃತ್ಯ ಮಾಡುವಂತೆ ಹೇಳಲು ಹೇಗೆ ಧೈರ್ಯ ಬಂತು ಎಂದು ಪ್ರಧಾನಿ ಕೇಳಿದರು. ಇದಕ್ಕೆ ಉತ್ತರಿಸಿದ ಕುಲ್ದೀಪ್, ನಾನು ಹೇಳಿಕೊಟ್ಟಂತೆ ರೋಹಿತ್ ಅನುಕರಿಸಲಿಲ್ಲ ಎಂದು ಹೇಳಿದರು. ಈ ಮಾತು ಕೇಳಿ ಮೋದಿ ಜೋರಾಗಿ ನಕ್ಕರು.
ಇದನ್ನೂ ಓದಿ Kuldeep Yadav : ತಮ್ಮ ನೆಚ್ಚಿನ ಸ್ವಾಮೀಜಿಯ ಆಶೀರ್ವಾದ ಪಡೆದ ಕುಲ್ದೀಪ್ ಯಾದವ್
ಆಟಗಾರರೆಲ್ಲ ಪದಕ ಸ್ವೀಕರಿಸುತ್ತಿದ್ದ ವೇಳೆ ಕುಲ್ದೀಪ್ ಅವರು ರೋಹಿತ್ ಅವರಿಗೆ ಯಾವ ರೀತಿಯಲ್ಲಿ ಬಂದು ಕಪ್ ಎತ್ತಬೇಕು ಎಂದು ನಟನೆ ಮಾಡಿ ತೋರಿಸಿದ್ದರು. ಈ ವೇಳೆ ರೋಹಿತ್ ಓಕೆ ಓಕೆ.. ಎಂದು ಹೇಳಿದ್ದರು. ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ನೀಡಲು ಬರುವ ವೇಳೆ ಕುಲ್ದೀಪ್ ಹೇಳಿಕೊಟ್ಟಂತೆ ರೋಹಿತ್ ಅವರು ಅಂದು ಮೆಸ್ಸಿ ನಡೆದು ಬಂದು ಟ್ರೋಫಿಯನ್ನು ಎತ್ತಿ ಹಿಡಿದ ರೀತಿಯಲ್ಲೇ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಸಂಭ್ರಮಿಸಿದ್ದರು. ಟೀಮ್ ಇಂಡಿಯಾ ಆಟಗಾರರು ಕೂಡ ಅರ್ಜೆಂಟೀನಾ ಫುಟ್ಬಾಲ್ ತಂಡದ ಆಟಗಾರರಂತೆ ಸಂಭ್ರಮಿಸಿದ್ದರು.
ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 29ರಂದು ನಡೆದಿದ್ದ ಟಿ20 ವಿಶ್ವಕಪ್ ಫೈನಲ್(T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.