Site icon Vistara News

Kuldeep Yadav : ತಮ್ಮ ನೆಚ್ಚಿನ ಸ್ವಾಮೀಜಿಯ ಆಶೀರ್ವಾದ ಪಡೆದ ಕುಲ್ದೀಪ್​ ಯಾದವ್​​

Kuldeep Yadav

ನವದೆಹಲಿ: ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಬುಧವಾರ ತಮ್ಮ ಕುಟುಂಬದೊಂದಿಗೆ ಮಧ್ಯಪ್ರದೇಶದ ಬಾಗೇಶ್ವರ ಧಾಮ್ ಸರ್ಕಾರ್ ಆಶ್ರಮಕ್ಕೆ ಭೇಟಿ ನೀಡಿದರು. ಕುಲದೀಪ್ ಇತ್ತೀಚೆಗೆ ಏಷ್ಯಾ ಕಪ್ 2023 ರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲಿ ಅವರು ನಾಲ್ಕು ಇನಿಂಗ್ಸ್​ಗಳಲ್ಲಿ 11.44 ಸರಾಸರಿಯಲ್ಲಿ ಒಂಬತ್ತು ವಿಕೆಟ್​ಗಳನ್ನು ಉರುಳಿಸಿದ್ದರು. 3.61 ಎಕಾನಮಿಯಲ್ಲಿ ಒಂದು ನಾಲ್ಕು ವಿಕೆಟ್ ಸಾಧನೆ ಮಾಡಿದ್ದರು.

28 ವರ್ಷದ ಕುಲ್ದೀಪ್​ 2022 ರಿಂದ ಭಾರತೀಯ ತಂಡಕ್ಕೆ ಗಮನಾರ್ಹ ಪುನರಾಗಮನ ಮಾಡಿದ್ದಾರೆ, ಇದು 2023 ರ ಏಕದಿನ ವಿಶ್ವಕಪ್​ಗೆ ಅವರ ಆಯ್ಕೆಯ ಹಾದಿಯನ್ನು ಸುಗಮಗೊಳಿಸಿದೆ. ಮೆಗಾ ಟೂರ್ನಿಗೆ ಮುಂಚಿತವಾಗಿ, ಕಾನ್ಪುರ ಮೂಲದ ಕ್ರಿಕೆಟಿಗ ಪವಿತ್ರ ಆಶ್ರಮಕ್ಕೆ ಭೇಟಿ ನೀಡಿ ಎಲ್ಲಾ ಪ್ರಮುಖರಿಂದ ಆಶೀರ್ವಾದ ಪಡೆದರು.

ವಿಶೇಷವೆಂದರೆ, ಕುಲ್ದೀಪ್ 2022ರಿಂದ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, 23 ಇನ್ನಿಂಗ್ಸ್​ಗಳಲ್ಲಿ 18.93 ಸರಾಸರಿಯಲ್ಲಿ 43 ವಿಕೆಟ್ ಉರುಳಿಸಿದ್ದಾರೆ. ಅವರ ಬೌಲಿಂಗ್​ ಎಕಾನಮಿ 4.70. ಎಡಗೈ ಸ್ಪಿನ್ನರ್ 2020-2021 ರಿಂದ ತಮ್ಮ ವೃತ್ತಿಜೀವನದ ಕೆಟ್ಟ ಹಂತವನ್ನು ದಾಟಿದ ನಂತರ ತಂಡಕ್ಕೆ ಗಮನಾರ್ಹ ಪುನರ್​ಪ್ರವೇಶ ಮಾಡಿದ್ದಾರೆ.

ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಇತ್ತೀಚೆಗೆ ಕುಲ್ದೀಪ್ ಅವರನ್ನು ಶ್ಲಾಘಿಸಿದ್ದರು. ಅವರನ್ನು ವಿಶ್ವಕಪ್​​ನಲ್ಲಿ ತಂಡದ ಟ್ರಂಪ್ ಕಾರ್ಡ್ ಎಂದಿದ್ದಾರೆ.

ಇದನ್ನೂ ಓದಿ : Ganesha Chaturthi : ಅಂಬಾನಿ ಮನೆಯ ಗಣೇಶ ಪೂಜೆಯಲ್ಲಿ ಸೆಲೆಬ್ರಿಟಿಗಳ ದಂಡು ​; ಶಾರುಖ್​ ಪ್ರಮುಖ ಆಕರ್ಷಣೆ

ನಾನು ಐಪಿಎಲ್​ನಲ್ಲಿ ಒಂದೆರಡು ವರ್ಷಗಳನ್ನು ಕಳೆದಿದ್ದೇನೆ, ಅವರು ವಿಶೇಷ ಕೌಶಲ್ಯ ಹೊಂದಿರುವ ವ್ಯಕ್ತಿ ಮತ್ತು ಅವರು ಅದನ್ನು ಮೈದಾನದಲ್ಲಿ ತೋರಿಸುತ್ತಿದ್ದಾರೆ. ಅವರು ಇದೀಗ ಭಾರತದ ಟ್ರಂಪ್ ಕಾರ್ಡ್ ಗಳಲ್ಲಿ ಒಬ್ಬರು. ಹೆಚ್ಚಿನ ತಂಡಗಳಿಗೆ ಈ ಕ್ಷಣದಲ್ಲಿ ಕುಲ್ದೀಪ್​ ಅವರೇ ಸವಾಲಾಗಿ ಕಾಣುತ್ತಿದ್ದಾರೆ, “ಎಂದು ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಅಕ್ಟೋಬರ್ 08 ರಂದು ಭಾರತದ ಅಭಿಯಾನ ಆರಂಭ

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಿಗೆ ಎಡಗೈ ಸ್ಪಿನ್ನರ್​ ಕುಲ್ದೀಪ್​ಗೆ ವಿಶ್ರಾಂತಿ ನೀಡಲಾಗಿದೆ. ಸೆಪ್ಟೆಂಬರ್ 27 ರ ಬುಧವಾರ ರಾಜ್​ಕೋಟ್​​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಅವರು ತಂಡಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾ ಸರಣಿ ಮುಗಿದ ನಂತರ, ಅಕ್ಟೋಬರ್ 05ರಂದು ಭಾರತದಲ್ಲಿ ಪ್ರಾರಂಭವಾಗಲಿರುವ ವಿಶ್ವಕಪ್​​ಗೆ ಭಾರತ ತೆರಳಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಅಕ್ಟೋಬರ್ 08 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

Exit mobile version