Site icon Vistara News

Kylian Mbappe: ಬಾಲ್ಯದ ಕನಸಿನ ರಿಯಲ್‌ ಮ್ಯಾಡ್ರಿಡ್‌ ತಂಡ ಸೇರಿದ ಕೀಲಿಯನ್‌ ಎಂಬಾಪೆ

Kylian Mbappe

Kylian Mbappe:Kylian Mbappe emotional after dream move to Real Madrid

ಮ್ಯಾಡ್ರಿಡ್‌: ಫ್ರಾನ್ಸ್‌ ತಂಡದ ಸ್ಟಾರ್ ಫುಟ್ಬಾಲ್​ ಆಟಗಾರ ಕೀಲಿಯನ್‌ ಎಂಬಾಪೆ(Kylian Mbappe) ತಮ್ಮ ಕನಸಿನ ರಿಯಲ್‌ ಮ್ಯಾಡ್ರಿಡ್‌(Real Madrid) ತಂಡವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮುಂದಿನ 5 ವರ್ಷಗಳ ಕಾಲ ಅವರು ಈ ಕ್ಲಬ್​ ಪರ ಆಡಲಿದ್ದಾರೆ. ಎಂಬಾಪೆಯನ್ನು ತಂಡಕ್ಕೆ ಸ್ವಾಗತಿಸಲು ದಾಖಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಕ್ಲಬ್‌ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್‌ 9ನೇ ನಂಬರ್ ಜೆರ್ಸಿ ನೀಡಿ ತಂಡಕ್ಕೆ ಸ್ವಾಗತಿಸಿದರು. ಎಂಬಾಪೆ ಜತೆ ತಂದೆ-ತಾಯಿ ಕೂಡ ಭಾಗಿಯಾಗಿದ್ದರು. ತಂಡ ಸೇರಿದ ಬಳಿಕ ಮಾತನಾಡಿದ ಎಂಬಾಪೆ ‘ನನ್ನ ಬಾಲ್ಯಕಾಲದ ಕನಸು ಇಂದು ನನಸಾಗಿದೆ. ನನ್ನ ಕುಟುಂಬಕ್ಕೆ ಸಂತಸವಾಗಿದೆ. ನನ್ನ ತಾಯಿ ಭಾವನೆಗಳನ್ನು ತಡೆಯಲಾಗದೇ ಅತ್ತಿದ್ದಾರೆ’ ಎಂದರು.

ಕಳೆದ ವರ್ಷ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ತನ್ನ ಕ್ಲಬ್​ ಪರ ಆಡಲು ಎಂಬಾಪೆಗೆ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿತ್ತು. ಆದರೆ, ಎಂಬಾಪೆ ಈ ಆಫರ್​ ತಿರಸ್ಕರಿಸಿದ್ದರು. 

ಎಂಬಾಪೆ ಮೈದಾನದಲ್ಲಿ ಇದ್ದರೆ ದಾಖಲೆಗಳು ನಿರ್ಮಾಣವಾಗುತ್ತವೆ. ಪಂದ್ಯಕ್ಕೊಂದು ಹೊಸ ತಿರುವು ಸಿಗುತ್ತದೆ. ಆತನ ಪಾದಗಳಲ್ಲಿ ಅಡಗಿರುವ ಮಾಂತ್ರಿಕ ಶಕ್ತಿ, ಮುಂದೊಂದು ದಿನ ಆತನನ್ನು ಫುಟ್ಬಾಲ್‌ ದಿಗ್ಗಜರ ಸಾಲಿಗೆ ಸೇರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇದನ್ನೂ ಓದಿ Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

ಯುಇಎಫ್‌ಎ ಚಾಂಪಿಯನ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ, ಡಿವಿಶನ್ 1ನಲ್ಲಿ 10 ಗೋಲು ದಾಖಲಿಸಿದ ಅತೀ ಕಿರಿಯ ಆಟಗಾರ, 2016–17ರ ಋತುವಿನಲ್ಲಿ 26 ಗೋಲು ಬಾರಿಸಿ ದಾಖಲೆ, ಚಾಂಪಿಯನ್‌ ಲೀಗ್‌ನಲ್ಲಿ 10 ಗೋಲು ಬಾರಿಸಿದ ಅತೀ ಕಿರಿಯ ಆಟಗಾರ, ಲೀಗ್‌ ಪ್ರಶಸ್ತಿ ಗೆದ್ದ ಅತೀ ಕಿರಿಯ ಆಟಗಾರ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಫ್ರೆಂಚ್ ಆಟಗಾರ..‌ ಹೀಗೆ ದಾಖಲೆಗಳನ್ನು ಹೊಂದಿರುವ ಎಂಬಾಪೆ ಇದೀಗ ಪ್ರತಿಷ್ಠಿತ ರಿಯಲ್‌ ಮ್ಯಾಡ್ರಿಡ್‌ ಕ್ಲಬ್​ ಪರ ಕೂಡ ಹಲವು ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

4ನೇ ಬಾರಿಗೆ ಯುರೋ ಕಪ್ ಗೆದ್ದ ಸ್ಪೇನ್​


ಬರ್ಲಿನ್: ಕಳೆದ ಭಾನುವಾರ ನಡೆದಿದ್ದ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್​ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್​ನಲ್ಲಿ ಮುಗ್ಗರಿಸಿ ರನ್ನರ್​ ಅಪ್​ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

Exit mobile version