ಬೆಂಗಳೂರು: ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದುಕೊಂಡು ಫಿಟ್ನೆಸ್ಗಾಗಿ ಸತತವಾಗಿ ಪ್ರಯತ್ನಿಸುತ್ತಿರುವ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ K L Rahul ಅವರಿಗೆ ಮಹಿಳೆಯರ ತಂಡದ ವೇಗದ ಬೌಲರ್ ಜೂಲಾನ್ ಗೋಸ್ವಾಮಿ ಬೌಲಿಂಗ್ ಮಾಡುತ್ತಿದ್ದಾರೆ.
ರಾಹುಲ್ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿರುವ ಹಾಗೂ ಅವರಿಗೆ ವೇಗಿ ಜೂಲಾನ್ ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿವೆ.
ಜೂಲಾನ್ ಅವರ ಮಹಿಳೆಯರ ಕ್ರಿಕೆಟ್ನ ಅತಿವೇಗದ ಬೌಲರ್ ಆಗಿದ್ದಾರೆ. ಅವರ ಎಸೆತಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಸಜ್ಜಾಗುತ್ತಿದ್ದಾರೆ. ಗೋಸ್ವಾಮಿ ಎಸೆತಕ್ಕೆ ರಾಹುಲ್ ಕವರ್ ಹಾಗೂ ಕಟ್ ಶಾಟ್ಗಳನ್ನು ಬಾರಿಸುತ್ತಿರುವ ವಿಡಿಯೊ ಪ್ರಸರಣಗೊಳ್ಳುತ್ತಿದೆ. ಈ ವಿಡಿಯೊಗೆ ನಾನಾ ಬಗೆಯ ಪ್ರತಿಕ್ರಿಯೆಗಳು ವ್ಯಕ್ತಗೊಂಡಿವೆ. 120 ಕಿ. ಮೀ ವೇಗದಲ್ಲಿ ಚೆಂಡೆಸೆಯುವ ಜೂಲಾನ್ ಅವರಿಂದ ಯಾಕೆ ಬೌಲಿಂಗ್ ಮಾಡಿಸುತ್ತೀರಿ? ಯುವ ಬೌಲರ್ಗಳಿಂದ 140 ಕಿ.ಮಿಗೂ ಅಧಿಕ ವೇಗದ ಎಸೆತಗಳನ್ನು ಹಾಕಿಸಿಕೊಳ್ಳಿ ಎಂದು ಬರೆದಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಸಿದ್ಧತೆ
ತೊಡೆ ಸಂದು ನೋವಿಗೆ ಒಳಗಾಗಿದ್ದ ಕೆ. ಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸುಧಾರಿಸಿಕೊಂಡು ಬಂದಿದ್ದ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಇದೀಗ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫಿಟ್ನೆಸ್ ಹಾಗೂ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ.
ಜೂಲಾನ್ ಗೊಸ್ವಾಮಿ ಭಾರತ ಮಹಿಳೆಯರ ತಂಡದ ಹಿರಿಯ ಸದಸ್ಯೆ. ಅವರು ಕಾಮನ್ವೆಲ್ತ್ ಗೇಮ್ಸ್ನ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ರಾಹುಲ್ ಅವರಿಗೆ ಚೆಂಡೆಸೆಯುತ್ತಿದ್ದಾರೆ. ಜೂಲಾನ್ ಅವರು ಮಹಿಳೆಯರ ಕ್ರಿಕೆಟ್ ಕ್ಷೇತ್ರದ ಸಾಧಕಿಯಾಗಿದ್ದು, ಒಟ್ಟಾರೆ 252 ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಕಬಳಿಸಿ ಸಾಧಕರಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಫಿಟ್ ಆಗುವರೇ ರಾಹುಲ್
ಕೆ. ಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ಅಯ್ಕೆಯಾಗಿರುವ ಹೊರತಾಗಿಯೂ ಅವರು ಇನ್ನೂ ಫಿಟ್ ಆಗಿರುವ ಬಗ್ಗೆ ಮಾಹಿತಿ ಇಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಅವರು ಮುಂದಿನ ಸರಣಿಯಲ್ಲಿ ಪಾಲ್ಗೊಳ್ಳಲು ಫಿಟ್ ಆಗಿದ್ದಾರೆ ಎಂಬುದನ್ನು ಅಲ್ಲಿನ ಫಿಸಿಯೊಗಳು ಪ್ರಮಾಣಿಸಬೇಕು. ಅವರು ಫಿಟ್ ಆಗಿದ್ದರೆ ಮಾತ್ರ ವಿಂಡೀಸ್ಗೆ ತೆರಳುವ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
ಇದನ್ನೂ ಓದಿ | Athiya Shetty And KL Rahul | ಅಥಿಯಾ- ರಾಹುಲ್ ಜೋಡಿಯ ಮದುವೆ ಮುಂದಿನ ವರ್ಷಾರಂಭಕ್ಕೆ?