Site icon Vistara News

Lal Salaam : ರಜನಿಕಾಂತ್​ ಜತೆ ಬಣ್ಣ ಹಚ್ಚಲಿದ್ದಾರೆ ಕಪಿಲ್​ ದೇವ್​

Lal Salaam' set to bring Kapil Dev and Rajnikanth together on silver screen

#image_title

ನವದೆಹಲಿ: ವಿಶ್ವ ಕಪ್​ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ಐಶ್ವರ್ಯ ರಜನಿಕಾಂತ್ ಅವರ (ರಜನಿಕಾಂತ್ ಅವರ ಮಗಳು) ಹೊಸ ಚಿತ್ರ ‘ಲಾಲ್ ಸಲಾಮ್’ ನಲ್ಲಿ (Lal Salaam) ನಟಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಚಿತ್ರದಲ್ಲಿ ಸೂಪರ್​ಸ್ಟಾರ್​ ನಟ ರಜನಿಕಾಂತ್ ಅವರೂ ಪಾತ್ರ ವಹಿಸಲಿದ್ದಾರೆ. ಅದೇ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಲೆಜಂಡರಿ ಕ್ರಿಕೆಟರ್​ ಕಪಿಲ್​ದೇವ್​ ಎಂದು ಹೇಳಲಾಗಿದೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ ಎಂಬುದಾಗಿ ವರದಿಯಾಗಿದೆ.

ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ಕೆಲವು ದಿನಗಳ ಹಿಂದೆ ರಜನೀಕಾಂತ್​ ಅವರ ಫಸ್ಟ್​ ಲುಕ್​ ಹಾಗೂ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಅದಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳು ಬಂದಿದ್ದವು. ಅಂದಹಾಗೆ ಪ್ರಸಿದ್ಧ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಕೂಡ ಚಿತ್ರದ ಭಾಗವಾಗಿದ್ದಾರೆ. ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಐಶ್ವರ್ಯಾ ರಜನಿಕಾಂತ್ ನಿರ್ದೇಶನಕ್ಕೆ ಮರಳಿದ್ದಾರೆ. ಕ್ರಿಕೆಟ್ ಮತ್ತು ಕಮ್ಯುನಿಸಂ ವಿಷಯವನ್ನು ಆಧರಿಸಿ ಸಿನಿಮಾ ನಿರ್ಮಾಣಗೊಳ್ಳುತ್ತಿದ ಎಂದು ಹೇಳಲಾಗಿದೆ.

ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರಜನಿಕಾಂತ್ ಟ್ವಿಟ್ಟರ್​ನಲ್ಲಿ ಕಪಿಲ್ ದೇವ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಪಿಲ್ ದೇವ್ ಅವರನ್ನು ಶ್ಲಾಘಿಸಿದ 72 ವರ್ಷದ ರಜನಿಕಾಂತ್, ಕ್ರಿಕೆಟ್​ ದಿಗ್ಗಜನ ಜತೆ ಕೆಲಸ ಮಾಡುವುದು ಗೌರವದ ಕೆಲಸ ಎಂದು ಬರೆದುಕೊಂಡಿದ್ದಾರೆ. ಎರಡು ಕ್ಷೇತ್ರದ ಇಬ್ಬರು ದಿಗ್ಗಜರು ಮುಂಬಯಿಯಲ್ಲಿ ನಡೆದ ಶೂಟಿಂಗ್ ವೇಳೆ ಮಾತುಕತೆ ನಡೆಸುತ್ತಿರಬಹುದು ಎಂದು ಹೇಳಲಾಗುತ್ತಿದೆ.

ಭಾರತ ಕ್ರಿಕೆಟ್​ ತಂಡಕ್ಕೆ ಮೊದಲ ವಿಶ್ವ ಕಪ್​ ತಂದುಕೊಟ್ಟಿರುವ ದಂತಕಥೆ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿ ಕಪಿಲ್ ದೇವ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದ ನನ್ನ ಗೌರವ ಮತ್ತು ಸುಯೋಗ. ಕ್ರಿಕೆಟ್ ವಿಶ್ವಕಪ್ ಎಂದು ರಜನಿಕಾಂತ್ ಟ್ವೀಟ್​ನಲ್ಲ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2023 : ರಿಂಕು ಸಿಂಗ್​ ಐದು ಸಿಕ್ಸರ್​ಗೆ ಸಿಕ್ಕಿತು ಪ್ರತಿಫಲ, ಭೇಟಿಗೆ ಅವಕಾಶ ಕೋರಿದ ತಲೈವಾ ರಜನಿಕಾಂತ್​

ಕಪಿಲ್ ದೇವ್ ಮತ್ತು ರಜನಿಕಾಂತ್ ಇಬ್ಬರೂ ಕಾಣಿಸಿಕೊಂಡಿರುವ ಚಿತ್ರದ ಭಾಗವನ್ನು ಚಿತ್ರೀಕರಿಸುವುದು ಆಶೀರ್ವಾದ ಎಂದು ಐಶ್ವರ್ಯಾ ರಜನಿಕಾಂತ್ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಪ್ಪಾ ಈ ಕ್ಷಣವನ್ನು ಚಿತ್ರೀಕರಣದ ಅವಕಾಶ ಸಿಕ್ಕಿರುವುದು ನಿಜವಾಗಿಯೂ ನನಗೆ ಸಿಕ್ಕ ಗೌರವ ಮತ್ತು ಆಶೀರ್ವಾದದ. ನೀವಿಬ್ಬರೂ ಅಸಾಮಾನ್ಯರು ಎಂದು ಐಶ್ವರ್ಯಾ ಟ್ವೀಟ್ ಮಾಡಿದ್ದಾರೆ.

ರಜನೀಕಾಂತ್​ ಅವರು ಭಾರತೀಯ ಸಿನಿಮಾ ಕ್ಷೇತ್ರದ ದಿಗ್ಗಜ ಎನಿಸಿಕೊಂಡಿದ್ದರೆ, ಕಪಿಲ್​ ದೇವ್ ಅವರು ವಿಶ್ವ ಕ್ರಿಕೆಟ್​ನ ಶ್ರೇಷ್ಠ ಆಟಗಾರ. ಅವರಿಬ್ಬರೂ ಜತೆಯಾಗಿ ನಟಿಸಿರುವ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

Exit mobile version