Site icon Vistara News

Lalit Modi | ಅನಾರೋಗ್ಯದ ಬೆನ್ನಲ್ಲೇ ತನ್ನ ಟ್ರಸ್ಟ್​​ಗೆ ಪುತ್ರನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ ಲಲಿತ್​ ಮೋದಿ

Lalit Modi tender unconditional apology to Supreme Court

ಲಂಡನ್​ : ಹಣಕಾಸು ಅಕ್ರಮದ ಆರೋಪದಲ್ಲಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿರುವ ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೋವಿಡ್​ ಮತ್ತು ನ್ಯುಮೋನಿಯಾ ಸೋಂಕಿಗೆ ಒಳಗಾಗಿರುವ ಅವರು ತಮ್ಮ ಕೆಕೆ ಮೋದಿ ಟ್ರಸ್ಟ್​ಗೆ ಉತ್ತರಾಧಿಕಾರಿಯಾಗಿ ಪುತ್ರ ರುಚಿರ್ ಮೋದಿಯನ್ನು ನೇಮಕ ಮಾಡಿದ್ದಾರೆ.

ಇನ್ನು ಮುಂದೆ ನನ್ನ ಕುಟುಂಬ ಹಾಗೂ ಕೆಕೆಎಮ್​ಟಿಎಫ್​ ಸಂಸ್ಥೆಯ ವ್ಯವಹಾರವನ್ನು ರುಚಿರ್ ನೋಡಿಕೊಳ್ಳಲಿದ್ದಾರೆ. ಈ ನಿರ್ಧಾರದ ಬಗ್ಗೆ ಪುತ್ರಿ ಅಲಿಯಾ ಜತೆಯೂ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಬರುವ ಯಾವುದೇ ಲಾಭಾಂಶದಲ್ಲಿ ನನ್ನ ಪಾಲು ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆಸ್ತಿ ವಿಚಾರದಲ್ಲಿ ತಾಯಿ ಹಾಗೂ ಸಹೋದರಿಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇನೆ. ಈ ಎಲ್ಲ ಪ್ರಕರಣಗಳನ್ನು ರುಚಿರ್​ ನೋಡಿಕೊಳ್ಳುತ್ತಾರೆ. ನಾನು ಸಾಕಷ್ಟು ವರ್ಷಗಳ ಕಾಲ ಹೋರಾಟ ನಡೆಸಿದ್ದೇನೆ. ಇನ್ನು ಮುಂದೆ ಹೋರಾಟ ಸಾಕು. ನನ್ನ ಮಕ್ಕಳು ಪ್ರಜ್ವಲಿಸಲಿ ಎಂದು ಅವರು ಹೇಳಿಕೊಂಡಿದ್ದಾರೆ.

ಐಪಿಎಲ್​ ಆರಂಭದ ರೂವಾರಿಯಾಗಿದ್ದ ಅವರು ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪ ಬಂದ ಬಳಿಕ 2010ರಲ್ಲಿ ದೇಶ ಬಿಟ್ಟು ಲಂಡನ್​ಗೆ ಹೋಗಿ ನೆಲೆಸಿದ್ದಾರೆ.

ಇದನ್ನೂ ಓದಿ | ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

Exit mobile version