ಬೆಂಗಳೂರು: ಶ್ರೀಲಂಕಾದ ಆಲ್ರೌಂಡರ್ ವಾನಿಂದು ಹಸರಂಗ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಜತೆಗೆ ಅವರು ಸತತವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಏತನ್ಮಧ್ಯೆ ಅವರು ಪಾಕಿಸ್ತಾನ ಸೂಪರ್ ಲೀಗ್ ( PSL 2023) ಟೂರ್ನಿಯಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಅವರಿಗೆ ಪಾಕಿಸ್ತಾನಕ್ಕೆ ಹೋಗಲು ನಿರಾಕ್ಷೇಪಣಾ ಪತ್ರ ಕೊಟ್ಟಿಲ್ಲ. ಹೀಗಾಗಿ ಅವರು ಹಾಲಿ ಆವೃತ್ತಿಯ ಪಿಎಸ್ಎಲ್ನಲ್ಲಿ ಆಡುವ ಅವಕಾಶ ಕಳೆದಕೊಂಡಿದ್ದಾರೆ. ವಾನಿಂದ ಹಸರಂಗ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದು ಅದಕ್ಕೂ ಅನುಮತಿ ಸಿಗುವುದೇ ಎಂಬುದು ಸದ್ಯದ ಪ್ರಶ್ನೆ.
ಶ್ರೀಲಂಕಾ ತಂಡ ತಂಡದ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದಿದೆ. ಆ ತಂಡ ಇನ್ನು ನ್ಯೂಜಿಲ್ಯಾಂಡ್ ಪ್ರವಾಸ ಮಾಡಲಿದ್ದು 2 ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಈ ಎರಡ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರುವ ಸಾಧ್ಯತೆಗಳಿವೆ. ಅದಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಫಲಿತಾಂಶವೂ ನಿರ್ಣಾಯಕ .ಆದಾಗ್ಯೂ ಉತ್ತಮ ಫಾರ್ಮ್ನಲ್ಲಿರುವ ವಾನಿಂದು ಹಸರಂಗ ಅವರನ್ನು ಪ್ರವಾಸಕ್ಕೆ ಕಳುಹಿಸುವುದು ಶ್ರೀಲಂಕಾ ತಂಡದ ಉದ್ದೇಶ. ಅದಕ್ಕಾಗಿ ಅವರಿಗೆ ಎನ್ಒಸಿ ನೀಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : WPL 2023: ಸ್ಮೃತಿ ಮಂಧಾನಾಗೆ ನೀಡುವ ಹಣದ ಅರ್ಧದಷ್ಟೂ ಮೊತ್ತ ಪಡೆಯುತ್ತಿಲ್ಲ ಪಾಕ್ ಆಟಗಾರರು!
ನ್ಯೂಜಿಲ್ಯಾಂಡ್ ಪ್ರವಾಸ ಮುಗಿಸಿದ ತಕ್ಷಣ ಅವರ ತವರಿಗೆ ವಾಪಸಾಗಲಿದ್ದಾರೆ. ಇದೇ ವೇಳೆ ಐಪಿಎಲ್ ಕೂಡ ಆರಂಭವಾಗಲಿದೆ. ಅದಕ್ಕೆ ಅವರು ಲಭ್ಯರಾಗುತ್ತಾರೆಯೇ ಎಂಬುದು ಈಗಿರುವ ಪ್ರಶ್ನೆ. ಆದರೆ, ಮೂಲಗಳ ಪ್ರಕಾರ ಅವರನ್ನು ಐಪಿಎಲ್ಗೆ ಕಳುಹಿಸುವ ಉದ್ದೇಶದಿಂದಲೇ ಪಾಕಿಸ್ತಾನ ಸೂಪರ್ ಲೀಗ್ಗೆ ಕಳುಹಿಸಿಲ್ಲ ಎನ್ನಲಾಗಿದೆ.