Site icon Vistara News

IPL 2024 : ವನಿಂದು ಬದಲಿಗೆ ಲಂಕಾ ಬೌಲರ್​​ನನ್ನೇ ಆಯ್ಕೆ ಮಾಡಿಕೊಂಡ ಎಸ್​ಆರ್​ಎಚ್​​​

IPL 2024

ಬೆಂಗಳೂರು: ಸನ್​ರೈಸರ್ಸ್​​ ಹೈದರಾಬಾದ್ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಬದಲಿಗೆ ಶ್ರೀಲಂಕಾದ 22 ವರ್ಷದ ಸ್ಪಿನ್ನರ್ ವಿಜಯಕಾಂತ್ ವಿಯಾಸ್​ಕಾಂತ್​ ಅವರನ್ನು ಆಯ್ಕೆ ಮಾಡಲಾಗಿದೆ. ಎಡಗಾಲಿನ ಹಿಮ್ಮಡಿ ನೋವಿನಿಂದಾಗಿ ಹಸರಂಗ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ಮಂಗಳವಾರ ವರದಿ ಮಾಡಿದೆ.

ಗಾಯದ ಸಮಸ್ಯೆಯಿಂದಾಗಿ ವನಿಂದು ಹಸರಂಗ ಈ ಋತುವಿನಲ್ಲಿ ಅಲಭ್ಯರಾಗಲಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಶ್ರೀಲಂಕಾದ ಸ್ಪಿನ್ನರ್ ವಿಜಯಕಾಂತ್ ವಿಯಾಸ್​ಕಾಂತ್​ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಸ್ವಾಗತ, ವಿಯಾಸ್​​ಕಾಂತ್​ ಎಂದು ಸನ್ರೈಸರ್ಸ್ ಹೈದರಾಬಾದ್ ಟ್ವೀಟ್ ಮಾಡಿದೆ.

ವಿಜಯಕಾಂತ್ ವಿಯಾಕಾಂತ್ ಯಾರು?

ಇದೇ ಮೊದಲ ಬಾರಿಗೆ ವಿಯಾಸ್​ಕಾಂತ್​ಗೆ ಐಪಿಎಲ್ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿದೆ. ಶ್ರೀಲಂಕಾ ಪರ ಒಂದು ಟಿ 20 ಪಂದ್ಯವನ್ನು ಆಡಿರುವ 22 ವರ್ಷದ ಕಾಂತ್​, ಲೆಗ್ ಸ್ಪಿನ್ನರ್ ಹಸರಂಗ ಅವರ ಬದಲಿ ಆಟಗಾರರಾಗಿದ್ದಾರೆ. ಅವರನ್ನು 50 ಲಕ್ಷ ಮೂಲ ಬೆಲೆಗೆ ಖರೀದಿಸಲಾಗಿದೆ.

ಇದನ್ನೂ ಓದಿ: Ravindra Jadeja : ಐಪಿಎಲ್​ ಇತಿಹಾಸದಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆ ಬರೆದ ರವೀಂದ್ರ ಜಡೇಜಾ

ವಿಜಯಕಾಂತ್ ವಿಯಾಸ್ಕಾಂತ್ 2020 ರ ಡಿಸೆಂಬರ್​ನಲ್ಲಿ ಮೊದಲ ಬಾರಿಗೆ ಮುನ್ನೆಲೆಗೆ ಬಂದರು. ಅವರು 18 ವರ್ಷ 364 ದಿನಗಳ ವಯಸ್ಸಿನಲ್ಲಿ ಜಾಫ್ನಾ ಸ್ಟಾಲಿಯನ್ಸ್ ಪರ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆ ಪಂದ್ಯಾವಳಿಯಲ್ಲಿ, ಅವರು ಶ್ರೀಲಂಕಾದ ಉತ್ತರ ತುದಿಯಲ್ಲಿರುವ ಮತ್ತು ಒಂದು ಕಾಲದಲ್ಲಿ ಮೂರು ದಶಕಗಳ ಸುದೀರ್ಘ ಅಂತರ್ಯುದ್ಧದ ಜಾಗವಾಗಿದ್ದ ಜಾಫ್ನಾದ ಕ್ರಿಕೆಟಿಗರಾಗಿದ್ದು. ಟಿವಿಯಲ್ಲಿ ಆಟ ನೋಡಿ ಬೆಳೆದವರು ಅವರಾಗಿದ್ದಾರೆ.

ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲಿ ವಿಯಾಸ್ಕಾಂತ್ ಶ್ರೀಲಂಕಾಗೆ ಪಾದಾರ್ಪಣೆ ಮಾಡಿದ್ದರು. ಐಎಲ್ಟಿ 20 ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿಜೇತ ಎಂಐ ಎಮಿರೇಟ್ಸ್​​ ತಂಡದ ಪರ ನಾಲ್ಕು ಪಂದ್ಯಗಳಲ್ಲಿ 5.43 ಎಕಾನಮಿಯಲ್ಲಿ ಎಂಟು ವಿಕೆಟ್​ಗಳನ್ನು ಪಡೆದಿದ್ದರು. ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Exit mobile version