Site icon Vistara News

Asia Cup | ಬಾಂಗ್ಲಾದೇಶ ಆಟಗಾರರಿಗೆ ನಾಗಿಣಿ ಡಾನ್ಸ್‌ ಮೂಲಕ ತಿರುಗೇಟು ಕೊಟ್ಟ ಲಂಕಾ ಬಳಗ

Asia Cup

ದುಬೈ : ಗುರುವಾರ ನಡೆದ ಏಷ್ಯಾ ಕಪ್‌ ಬಿ ಗುಂಪಿನ ಪಂದ್ಯದಲ್ಲಿ ಗೆದ್ದ ಲಂಕಾ ತಂಡದ ಆಟಗಾರರು ನಾಗಿಣಿ ಡಾನ್ಸ್‌ ಮಾಡಿ ಬಾಂಗ್ಲಾದೇಶ ತಂಡಕ್ಕೆ ತಿರುಗೇಟು ಕೊಟ್ಟಿದ್ದಾರೆ. ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾ ಬಳಗದ ವಿರುದ್ಧ ವೀರೋಚಿತ ೨ ವಿಕೆಟ್‌ಗಳ ಜಯ ಸಾಧಿಸಿ ಸೂಪರ್‌-೪ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಆದರೆ, ನಾಗಿಣಿ ನೃತ್ಯ ೨೦೧೮ರ ನಿದಾಸ್‌ ಟ್ರೋಫಿಯ ಪಂದ್ಯದ ವೇಳೆಯ ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ.

೨೦೧೮ರ ನಿದಾಸ್‌ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಶ್ರೀಲಂಕಾ ತಂಡ ಸೋಲುಕಂಡಿತ್ತು. ಗೆಲುವಿನ ಅಹಂನಲ್ಲಿ ಬಾಂಗ್ಲಾದೇಶ ಆಟಗಾರರು ನಾಗಿಣಿ ನೃತ್ಯ ಮಾಡುವ ಮೂಲಕ ಶ್ರೀಲಂಕಾ ಆಟಗಾರರನ್ನು ಕೆಣಕಿದ್ದರು. ಆ ಸೇಡನ್ನು ಲಂಕಾ ತಂಡ ಏಷ್ಯಾ ಕಪ್ ಗೆಲುವಿನ ಮೂಲಕ ತೀರಿಸಿಕೊಂಡಿದೆ. ಲಂಕಾ ತಂಡದ ಸದಸ್ಯರು ಡಗ್ಔಟ್‌ನಲ್ಲಿ ನಿಂತು ನಾಗಿಣಿ ಡಾನ್ಸ್ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಅಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್​​​ಗಳಲ್ಲಿ 7 ವಿಕೆಟ್ ​​ನಷ್ಟಕ್ಕೆ 183 ರನ್ ​​​​ಗಳಿಕೆ ಮಾಡಿತು. ೧೮೪ ರನ್‌ಗಳ ಗೆಲುವಿನ ಗುರಿಯನ್ನು ಪಡೆದ ಲಂಕಾ ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಕೊನೆಯಲ್ಲಿ ಸತತವಾಗಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ, ಕೊನೇ ಓವರ್‌ನಲ್ಲಿ ಅಸಿತಾ ಫರ್ನಾಂಡೊ ಸತತ ಎರಡು ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

ಇದನ್ನೂ ಓದಿ | Asia Cup | ಇಂದು ಶ್ರೀಲಂಕಾ- ಬಾಂಗ್ಲಾದೇಶ ತಂಡದ ನಡುವೆ ಪಂದ್ಯ, ಗೆದ್ದ ತಂಡ ಸೂಪರ್‌-4ಗೆ ಪ್ರವೇಶ

Exit mobile version