ಲಂಡನ್: ಆಸ್ಟ್ರೇಲಿಯಾ ತಂಡದ ವಿಕೆಟ್ಕೀಪರ್ ಅಲೆಕ್ಸ್ ಕ್ಯೇರಿ ಕ್ಷೌರಿಕನ ಅಂಗಡಿಯಲ್ಲಿ ದುಡ್ಡು ಕೊಡದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಮಾಜಿ ನಾಯಕ ಅಲೈಸ್ಟರ್ ಕುಕ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಈ ಪ್ರಸಂಗವು ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಇದಕ್ಕೆ ಸ್ಪಷ್ಟನೆ ನೀಡಿತ್ತು ಇದೀಗ ಕುಕ್ ಗೊಂದಲಕ್ಕೆ ಪೂರ್ಣ ವಿರಾಮ ಹೇಳಿದ್ದು, ಅಲೆಕ್ಸ್ ಕ್ಯೇರಿಯ ಕ್ಷಮೆಯಾಚಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ಬಳಿಕ ಇಂಗ್ಲೆಂಡ್ ತಂಡ ಕ್ಷೌರಿಕನ ಅಂಗಡಿಗೆ ಹೋಗಿ ಹೇರ್ಕಟ್, ಹಾಗಊ ಕ್ಷೌರ ಮಾಡಿಸಿಕೊಂಡು ದುಡ್ಡು ಕೊಟ್ಟಿಲ್ಲ ಎಂಬುದಾಗಿ ಸುದ್ದಿ ಹರಡಿತ್ತು. ದಿ ಸನ್ ಪತ್ರಿಕೆ ಈ ಬಗ್ಗೆ ಸುದ್ದಿಯನ್ನೂ ಪ್ರಕಟಿಸಿತ್ತು. ಅದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಲಂಡನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ನಂತರ ಕ್ಷೇರಿ ಕ್ಷೌರಿಕನ ಅಂಗಡಿಗೆ ಹೋಗಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಕ್ಷಣ ಈ ಹೇಳಿಕೆ ನೀಡಿತತ್ತು. ಸ್ಮಿತ್ ಕೂಡ ಈ ಆರೋಪವನ್ನು ನಿರಾಕರಿಸಿದ್ದರು. ಕ್ಯೇರಿ ಯುಕೆಗೆ ಬಂದ ಬಳಿಕ ಹೇರ್ ಕಟ್ ಮಾಡಿಸಿಯೇ ಇಲ್ಲ ಎಂದು ಹೇಳಿದ್ದಾರೆ.
ನಾವು ಲಂಡನ್ನಲ್ಲಿ ಇದ್ದಾಗಿನಿಂದ ಅಲೆಕ್ಸ್ ಕ್ಯಾರಿ ಹೇರ್ಕಟ್ ಮಾಡಿಲ್ಲ ಎಂದು ನಾನು ದೃಢಪಡಿಸಬಲ್ಲೆ. ಸರಿಯಾಗಿ ತಿಳಿದುಕೊಂಡು ವರದಿ ಮಾಡಿ ಎಂದು ಸ್ಮಿತ್ ಹೊಸ ಸಾಮಾಜಿಕ ಮಾಧ್ಯಮ ಥ್ರೆಡ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಕುಕ್ ಮಾಡಿದ ತಪ್ಪು
ಬಿಬಿಸಿ ಟೆಸ್ಟ್ ಮ್ಯಾಚ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಕುಕ್ ಇಂಥದ್ದೊಂದು ತಪ್ಪು ಕಲ್ಪನೆಗೆ ಕಾರಣರಾಗಿದ್ದರು. ಅವರು ಕ್ಷೌರಿಕನ ಅಂಗಡಿಯ ಕತೆ ಹೇಳಿದ್ದರು. ಲೀಡ್ಸ್ನಲ್ಲಿ ತಮಗೆ ಸಿಕ್ಕಿದ್ದ ಕ್ಷೌರಿಕನೊಂದಿಗಿನ ಸಂಭಾಷಣೆ ಎಂದು ಅವರು ಹೇಳಿಕೊಂಡಿದ್ದರು. ಕ್ಯೇರಿ ಸೇರಿದಂತೆ ಹಲವು ಆಸ್ಟ್ರೇಲಿಯನ್ ಕ್ರಿಕೆಟಿಗರು ತಮ್ಮ ಅಂಗಡಿಗೆ ಭೇಟಿ ನೀಡಿದ್ದರು. ಕ್ಯೇರಿ ಸೇರಿದಂತೆ ಅವರೆಲ್ಲರೂ ಹಣ ನೀಡದೆ ಹೋಗಿದ್ದರು ಎಂದು ಕ್ಷೌರಿಕ ಹೇಳಿದ್ದಾನೆ ಎಂಬುದಾಗಿ ಕುಕ್ ಕಾರ್ಯಕ್ರಮದಲ್ಲಿ ನುಡಿದಿದ್ದರು. ಹೀಗಾಗಿ ಒಟ್ಟು ಗೊಂದಲಕ್ಕೆ ತಾವೇ ಕಾರಣ ಎಂದು ಗೊತ್ತಾದ ತಕ್ಷಣ ಅಲೆಸ್ಟರ್ ಕುಕ್ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ : IND VS AUS: ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿಗೆ ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ಘಟನೆಯ ಬಗ್ಗೆ ಮಾತನಾಡಿದ ಕುಕ್, ಕ್ಷೌರಿಕನ ತಪ್ಪಾದ ಗ್ರಹಿಕೆಯಿಂದ ಈ ರೀತಿ ಆಗಿದೆ. ಅದು ಅಲೆಕ್ಸ್ ಕ್ಯೇರಿ ಆಗಿರಲಿಲ್ಲ. ಹೀಗಾಗಿ ಅವರ ಕ್ಷಮೆ ಕೋರುತ್ತೇನೆ ಎಂದು ಕುಕ್ ಹೇಳಿದ್ದಾರೆ.
ಈ ಘಟನೆಯು ಕ್ರಿಕೆಟ್ ಕ್ಷೇತ್ರದ ಗಮನವನ್ನು ಸೆಳೆದಿದೆ. ಎರಡೂ ದೇಶದ ಆಟಗಾರರ ನಡುವಿನ ಜಗಳವು ತಾರಕಕ್ಕೇರಿರುವುದು ಸ್ಪಷ್ಟಗೊಂಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಭಾಗಿಯಾಗಿರುವ ಆಟಗಾರರ ಸ್ಪಷ್ಟೀಕರಣದೊಂದಿಗೆ ಈ ವಿಷಯವನ್ನು ಪರಿಹರಿಸಲಾಗಿದೆ. ಆದರೆ ಹೇಳಿಕೆ ಕೊಡುವ ಮೊದಲ ಕುಕ್ ತೆಗೆದುಕೊಳ್ಳಬೇಕಾಗಿದ್ದ ಜವಾಬ್ದಾರಿ ಹಾಗೂ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದ್ದ ದಿ ಸನ್ ಪತ್ರಿಕೆಯ ಬೇಜವಾಬ್ದಾರಿಯನ್ನು ಪ್ರಶ್ನಿಸಲಾಗಿದೆ.