ಕರಾಚಿ : ಪಾಕ್ ಕ್ರಿಕೆಟ್ ಆಲ್‌ರೌಂಡರ್ ಶೋಯೆಬ್ ಮಲಿಕ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿ ಸಾಕಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ ಈ ಸುದ್ದಿಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಆದರೆ, ಕ್ರಿಕೆಟರ್ ಶೋಯೆಬ್ ಮಲಿಕ್ ಮಾತ್ರ ಸುದ್ದಿ ಹರಡುತ್ತಿರುವವ ವಿರುದ್ಧ ಗರಂ ಆಗಿದ್ದು, ನಮ್ಮನ್ನು ಸುಮ್ಮನೆ ಬಿಟ್ಟುಬಿಡಿ. ಅನಗತ್ಯ ಸುದ್ದಿಗಳನ್ನು ಹಬ್ಬಿಸಬೇಡಿ ಎಂಬುದಾಗಿ ಹೇಳಿದ್ದಾರೆ.
ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಜತೆ ಮಾತನಾಡುವ ವೇಳೆ ಅವರಿಗೆ ೧೨ ವರ್ಷಗಳ ದಾಂಪತ್ಯ ಜೀವನದ ಕುರಿತು ಪ್ರಶ್ನೆ ಎದುರಾಗಿದೆ. ಅದರೆ, ಮಲಿಕ್ ಅದಕ್ಕೆ ಹೌದು ಅಥವಾ ಅಲ್ಲ ಎಂದಿಲ್ಲ. ಆದರೆ, ನಮ್ಮಿಬ್ಬರನ್ನು ಸುಮ್ಮನೆ ಬಿಟ್ಟುಬಿಡಿ ಎಂದಷ್ಟೇ ಕೋರಿಕೊಂಡಿದ್ದಾರೆ.
“ಅದು ನಮ್ಮ ವೈಯಕ್ತಿಕ ವಿಚಾರ. ನನ್ನ ಹೆಂಡತಿ ಅಥವಾ ನಾನು ಇದಕ್ಕೆ ಯಾವುದೇ ಕಾರಣಕ್ಕೂ ಉತ್ತರ ಕೊಡುವುದಿಲ್ಲ. ನಮ್ಮನ್ನು ಸುಮ್ಮನೆ ಬಿಟ್ಟು ಬಿಡಿ ಎಂಬುದಾಗಿ ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಟಾಕ್ ಶೋ ‘ಮಿರ್ಜಾ ಮಲಿಕ್’ನಲ್ಲಿ ಮಾತನಾಡುವಾಗಲೂ ಶೋಯೆಬ್ ಇದೇ ಮಾತನ್ನು ಹೇಳಿದ್ದರು. ನಮಗಿಬ್ಬರಿಗೆ ಯಾವುದೇ ಒಳ್ಳೆಯ ಅವಕಾಶಗಳು ಬಂದರೂ ಅದನ್ನು ಕಳೆದುಕೊಳ್ಳುವುದಿಲ್ಲ ಎಂಬುದಾಗಿ ಅವರು ನುಡಿದಿದ್ದರು.
ಇದನ್ನೂ ಓದಿ | ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು? – ಪತಿ ಶೋಯೆಬ್ರಿಂದ ದೂರವಾಗುವ ಮುನ್ಸೂಚನೆಯಾ ಈ ಇನ್ಸ್ಟಾ ಪೋಸ್ಟ್?