ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟವನ್ನು(WFI) ಅಮಾನತು(wfi suspended) ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ಕಾನೂನು ಸಮರ ನಡೆಸುವುದಾಗಿ ಕುಸ್ತಿ ಫೆಡರೇಶನ್ನ ನೂತನ ಅಧ್ಯಕ್ಷ ಸಂಜಯ್ ಸಿಂಗ್(WFI President Sanjay Singh) ಹೇಳಿದ್ದಾರೆ.
‘ಕೇಂದ್ರ ಕ್ರೀಡಾ ಸಚಿವಾಲಯ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ. ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯನ್ನು ಸರ್ಕಾರವು ಈ ರೀತಿ ಏಕಾಏಕಿ ಅಮಾನತುಗೊಳಿಸಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಕೋರ್ಟ್ ಮೆಟ್ಟಿಲೇರಲಾಗುದು’ ಎಂದು ಸಂಜಯ್ ಸಿಂಗ್ ಎಎನ್ಐ ಜತೆ ಹೇಳಿದ್ದಾರೆ.
#WATCH | Varanasi, UP: Suspended WFI President Sanjay Singh says, "You must have seen that Bajrang Poonia lost with 10-0 since they are going towards politics, leaving wrestling…They don't want the junior wrestlers to make any progress since they are done and want to do… pic.twitter.com/LHnyMXMMLy
— ANI UP/Uttarakhand (@ANINewsUP) December 28, 2023
ಸಂಜಯ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೂರು ದಿನಗಳ ಬಳಿಕ ಕೇಂದ್ರ ಕ್ರೀಡಾ ಸಚಿವಾಲಯ ಈ ಸಮಿತಿಯನ್ನು ಅಮಾನತು ಮಾಡಿತ್ತು. ಅಂಡರ್-15 ಮತ್ತು ಅಂಡರ್-20 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗಳ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕಾಗಿ ನೂತನ ಫೆಡರೇಶನ್ ಸಮಿತಿಯನ್ನು ತಕ್ಷಣ ಜಾರಿಗೆ ಬರುವಂತೆ ಕ್ರೀಡಾ ಸಚಿವಾಲಯ ಅಮಾನತು ಮಾಡಿತ್ತು.
ಇದನ್ನೂ ಓದಿ ಕುಸ್ತಿ ಒಕ್ಕೂಟದ ವ್ಯವಹಾರ ನಡೆಸಲು ತ್ರಿಸದಸ್ಯ ತಾತ್ಕಾಲಿಕ ಸಮಿತಿ ನೇಮಿಸಿದ ಐಒಎ
ಸರ್ಕಾರದ ಜತೆ ಮಾತುಕತೆ
“ನಾವು ಸರ್ಕಾರದೊಂದಿಗೆ ಮಾತನಾಡಲಿದ್ದೇವೆ. ಒಂದೊಮ್ಮೆ ಸರ್ಕಾರ ಅಮಾನತು ಹಿಂಪಡೆಯದಿದ್ದರೆ, ನಾವು ಕಾನೂನು ಅಭಿಪ್ರಾಯ ಪಡೆದು ನ್ಯಾಯಾಲಯಕ್ಕೆ ಹೋಗಲಿದ್ದೇವೆ” ಎಂದು ಸಂಜಯ್ ಸಿಂಗ್ ತಾಕೀತು ಮಾಡಿದ್ದರೆ.
ಸಂಜಯ್ ಸಿಂಗ್ ಅವರು ಮಾಜಿ ಅಧ್ಯಕ್ಷ ಮತ್ತು ಲೈಗಿಂಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷನ್ ಶರಣ್ ಸಿಂಗ್ ಆಪ್ತರಾಗಿರುವ ಕಾರಣ ಇದನ್ನು ವಿರೋಧಿಸಿ ಸಾಕ್ಷಿ ಸಿಂಗ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಭಜರಂಗ್ ಪೂನಿಯಾ ಪದ್ಮಶ್ರೀ ಪ್ರಶ್ತಿಯನ್ನು, ವಿನೇಶ್ ಫೋಗಟ್ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದರು.
ಅಮಾನತುಗೊಂಡಿರುವ ರಾಷ್ಟ್ರೀಯ ಕುಸ್ತಿ ಸಂಸ್ಥೆಯ(WFI) ದೈನಂದಿನ ವ್ಯವಹಾರಗಳನ್ನು ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ತ್ರಿಸದಸ್ಯರ ತಾತ್ಕಾಲಿಕ ಸಮಿತಿಯನ್ನು ಬುಧವಾರ ರಚಿಸಿತ್ತು. ವುಶು ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಹಾಕಿ ಒಲಿಂಪಿಯನ್ ಎಂಎಂ ಸೋಮಯ್ಯ ಮತ್ತು ಮಾಜಿ ಅಂತಾರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಈ ಸಮಿತಿಯ ಸದಸ್ಯರಾಗಿದ್ದಾರೆ.