Site icon Vistara News

Team India | ಆರ್‌ ಅಶ್ವಿನ್‌ ಬೌಲಿಂಗ್‌ ಪ್ರದರ್ಶನದ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ ಲೆಜೆಂಡ್‌ ಕಪಿಲ್‌ ದೇವ್‌

ಮುಂಬಯಿ : ವಿಶ್ವ ಕಪ್‌ನಲ್ಲಿ ಆಡುತ್ತಿರುವ ಟೀಮ್‌ ಇಂಡಿಯಾದ ಸ್ಪಿನ್‌ ಬೌಲಿಂಗ್‌ ವಿಭಾಗದಲ್ಲಿ ಅವಕಾಶ ಪಡೆದಿರುವ ಆರ್‌. ಅಶ್ವಿನ್‌ ಅವರ ಪ್ರದರ್ಶನದ ಬಗ್ಗೆ ಕ್ರಿಕೆಟ್‌ ದಿಗ್ಗಜ ಆರ್‌. ಅಶ್ವಿನ್‌ ಅವರು ಮಾರ್ಮಿಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಲೆಗ್‌ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ಅವರ ಪರ್ಯಾಯವಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಅವರು ನಿರೀಕ್ಷೆಯಂತೆ ವಿಕೆಟ್‌ ಪಡೆಯುತ್ತಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಪ್ರದರ್ಶನದ ಬಗ್ಗೆ ಸ್ವತಃ ಅಶ್ವಿನ್‌ ಅವರಿಗೇ ನಾಚಿಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.

ಆರ್‌. ಅಶ್ವಿನ್ ಅವರು ಭಾರತ ತಂಡ ಆಡಿರುವ ಸೂಪರ್ ೧೨ ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ ಕಬಳಿಸಿದ್ದಾರೆ. ಅದರಲ್ಲಿ ೩ ಜಿಂಬಾಬ್ವೆ ವಿರುದ್ಧದ ಕೊನೇ ಪಂದ್ಯದಲ್ಲಿ ಪಡೆದಿರುವ ವಿಕೆಟ್‌ಗಳಾಗಿವೆ. ಈ ಪ್ರದರ್ಶನದ ಬಗ್ಗೆ ಕಪಿಲ್‌ ಬೇಸರ ವ್ಯಕ್ತಪಡಿಸಿದ್ದು, ತಮಗೆ ದೊರಕಿರುವ ವಿಕೆಟ್‌ ಬಗ್ಗೆ ಅವರೇ ಮುಖ ಮುಚ್ಚಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

“ಇಲ್ಲಿಯವರೆಗೆ ಆರ್ ಅಶ್ವಿನ್‌ ಅವರು ವಿಶ್ವಾಸಾರ್ಹ ಪ್ರದರ್ಶನ ನೀಡಿಲ್ಲ. ಜಿಂಬಾಬ್ವೆ ವಿರುದ್ಧ ವಿಕೆಟ್‌ ಪಡೆದಿರಬಹುದು. ಆದರೆ, ಬ್ಯಾಟ್ಸ್‌ಮನ್‌ಗಳೇ ವಿಕೆಟ್‌ ಒಪ್ಪಿಸಿದಂತಿತ್ತು. ಅವರು ಉತ್ತಮ ಪ್ರದರ್ಶನ ನೀಡಲು ಇನ್ನೂ ಯಶಸ್ಸು ಕಂಡಿಲ್ಲ,” ಎಂದು ಕಪಿಲ್‌ ಹೇಳಿದ್ದಾರೆ.

“ಅಶ್ವಿನ್‌ ಅವರನ್ನು ತಂಡಕ್ಕೆ ಸೇರಿಸುವ ವಿಚಾರ ಟೀಮ್‌ ಮ್ಯಾನೇಜ್ಮೆಂಟ್‌ ಕೈಯಲ್ಲಿದೆ. ಅವರಿಗೆ ವಿಶ್ವಾಸ ಇದ್ದರೆ ಅವರನ್ನು ಆಡಿಸಬಹುದು. ಒಂದು ವೇಳೆ ಎದುರಾಳಿ ತಂಡಕ್ಕೆ ಆಘಾತ ನೀಡಬೇಕಾದರೆ ಮಣಿಕಟ್ಟು ಸ್ಪಿನ್ನರ್‌ಗೆ ಅವಕಾಶ ನೀಡಬೇಕು,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | IND vs PAK | ದಿನೇಶ್‌ ಕಾರ್ತಿಕ್‌ಗೆ ಮೈದಾನದಲ್ಲೇ ಹಿಡಿಶಾಪ ಹಾಕಿದ್ದ ಆರ್‌ ಅಶ್ವಿನ್‌!

Exit mobile version