Site icon Vistara News

Jasprit Bumrah : ಬುಮ್ರಾ ನೋಡಿ ಕಲಿ; ಶಾಹೀನ್‌ ಶಾ​ ಅಫ್ರಿದಿಗೆ ಬುದ್ಧಿ ಹೇಳಿದ ಪಾಕ್​ ಮಾಜಿ ಕ್ರಿಕೆಟಿಗ

Shahid Afridi

ನವದೆಹಲಿ: 2023 ರ ಕ್ರಿಕೆಟ್ ವಿಶ್ವಕಪ್​ನಲ್ಲಿ ಪ್ರಭಾವ ಬೀರಲು ಬಯಸಿದರೆ ಭಾರತದ ವೇಗದ ಬೌಲರ್ ಜಸ್ಪ್ರೀತ್ (Jasprit Bumrah) ಬುಮ್ರಾ ಅವರಿಂದ ಕಲಿಯಿರಿ ಎಂದು ಪಾಕಿಸ್ತಾನದ ದಂತಕಥೆ ವಕಾರ್ ಯೂನಿಸ್ ಸೋಮವಾರ ತಮ್ಮ ದೇಶದ ಸ್ಟ್ರೈಕ್ ಬೌಲರ್ ಶಾಹೀನ್ ಶಾ ಅಫ್ರಿದಿ ಅವರಿಗೆ ಸಲಹೆ ನೀಡಿದ್ದಾರೆ. ಶಾಹೀನ್ ತನ್ನ ಬೌಲಿಂಗ್​ ವೇಗ ಮತ್ತು ಫಿಟ್ನೆಸ್​​ಗಾಗಿ ಹೆಣಗಾಡುತ್ತಿದ್ದಾರೆ . ವಿಶ್ವಕಪ್​​ನಲ್ಲಿ ಎಲ್ಲಾ ಮೂರು ಪಂದ್ಯಗಳಲ್ಲಿ ಪ್ರಭಾವಶಾಲಿಯಾಗಿಲ್ಲ. 139 ರನ್​ಗಳನ್ನು ಬಿಟ್ಟುಕೊಟ್ಟು ಕೇವಲ ನಾಲ್ಕು ವಿಕೆಟ್​ಗಳನ್ನು ಪಡೆದಿದ್ದಾರೆ.

“ಅಫ್ರಿದಿ ಫಿಟ್ನೆಸ್ನಲ್ಲಿ ಸಮಸ್ಯೆ ಇದೆಯೇ ಎಂದು ನನಗೆ ತಿಳಿದಿಲ್ಲ” ಎಂದು ವೀಕ್ಷಕ ವಿವರಣೆಗಾರರಾಗಿರುವ ವಕಾರ್ ಯೂನಿಸ್ ಹೇಳಿದ್ದಾರೆ. “ಅವರ ಬೌಲಿಂಗ್​​ನಲ್ಲಿ ಲಯ ಮತ್ತು ಶಿಸ್ತು ಕಾಣೆಯಾಗಿದೆ ಎಂದು ವಕಾರ್​ ಹೇಳಿದ್ದಾರೆ. ಶಾಹೀನ್ ಅಫ್ರಿದಿ ತನ್ನ ಯಾರ್ಕರ್ ಮೂಲಕವೇ ವಿಕೆಟ್​ ಪಡೆಯಲು ಯತ್ನಿಸುತ್ತಾರೆ. ಒಂದೇ ರೀತಿಯ ಬೌಲಿಂಗ್​ ಅನ್ನು ಮತ್ತೆ ಮತ್ತೆ ಮಾಡಿದಾಗ ಬ್ಯಾಟರ್​ಗಳಿಗೆ ಗೊತ್ತಾಗುತ್ತದೆ ಹಾಗೂ ಅವರು ಅದಕ್ಕೆ ಸಿದ್ಧರಾಗಿರುತ್ತಾರೆ ಎಂದು ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ಮಾದರಿಯನ್ನು ಶಾಹೀನ್ ಅಫ್ರಿದಿ ಅನುಸರಿಸಬೇಕು ಎಂದು ವಕಾರ್ ಯೂನಿಸ್ ಸಲಹೆ ನೀಡಿದರು. ಕೇವಲ 11.52ರ ಸರಾಸರಿಯಲ್ಲಿ 8 ವಿಕೆಟ್ ಕಬಳಿಸುವ ಮೂಲಕ ವಿಶ್ವ ಕಪ್​ನಲ್ಲಿ ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಮತ್ತು ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ತಲಾ ಎಂಟು ಬಲಿ ಪಡೆದಿದ್ದಾರೆ.

ಭಾರತಕ್ಕೆ ಸುಲಭ ಜಯ ಸಿಕ್ಕಿತ್ತು

ಅಹ್ಮದಾಬಾದ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಶತಕದ ನೆರವಿನಿಂದ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್​ಗಳಿಂದ ಮಣಿಸಿತ್ತು. ಶಾಹಿದ್ ಎಲ್ಲೂ ಭಾರತಕ್ಕೆ ಸವಾಲಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ರಿಜ್ವಾನ್ ಮತ್ತು ಶದಾಬ್ ಖಾನ್ ಅವರನ್ನು ಎರಡು ಉತ್ತಮ ಎಸೆತಗಳಲ್ಲಿ ಔಟ್ ಮಾಡಿ ಏಳು ಓವರ್​ಗಳಲ್ಲಿ 19 ರನ್​ ನೀಡಿ 2 ವಿಕೆಟ್​​ ಪಡೆದಿದ್ದರು. “ಜಸ್ಪ್ರೀತ್ ಬುಮ್ರಾ ಬ್ಯಾಟರ್​ಗಳ ಮೇಲೆ ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು ವಿಕೆಟ್ ಪಡೆಯಲು ಒತ್ತಡ ಸೃಷ್ಟಿಸಿದರು” ಎಂದು ವಕಾರ್ ಯೂನಿಸ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : ವಿಶ್ವಕಪ್​ನಲ್ಲೂ ನವೀನ್​ ಉಲ್​ ಹಕ್​ ಬೆಂಬಿಡದ ವಿರಾಟ್​ ಕೊಹ್ಲಿ ಅಭಿಮಾನಿಗಳು

23 ವರ್ಷದ ಶಾಹೀನ್ ಅಫ್ರಿದಿ ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್​ನಲ್ಲಿ ನಡೆದ ಐದು ವಿಶ್ವಕಪ್ ಪಂದ್ಯಗಳಲ್ಲಿ 16 ವಿಕೆಟ್​​ಗಳನ್ನು ಪಡೆದ ನಂತರ ಪಾಕಿಸ್ತಾನದ ಹೊಸ ಚೆಂಡಿನ ದಾಳಿಯನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. 414 ಟೆಸ್ಟ್ ಮತ್ತು 502 ಏಕದಿನ ಕೆಟ್​ ಹೊಂದಿರುವ ಮಾಜಿ ಶ್ರೇಷ್ಠ ವಾಸಿಮ್ ಅಕ್ರಮ್ ಅವರ ಬಳಿಕ ಪಾಕಿಸ್ತಾನದ ಅತ್ಯುತ್ತಮ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಅಕ್ರಮ್​ಗೆ ಉತ್ತಮ ಹೋಲಿಕೆ ಅಲ್ಲ ಎಂದ ಶಾಸ್ತ್ರಿ

ಭಾರತದ ಮಾಜಿ ಆಲ್ರೌಂಡರ್ ರವಿ ಶಾಸ್ತ್ರಿ ಪಾಕಿಸ್ತಾನ-ಭಾರತ ಪಂದ್ಯದ ಸಮಯದಲ್ಲಿ ಅಫ್ರಿದಿಯನ್ನು ಅಕ್ರಮ್​ ಗೆ ಹೋಲಿಕೆ ಮಾಡುವುದನ್ನು ವಿರೋಧಿಸಿದ್ದಾರೆ. “ಶಾಹೀನ್ ಅಫ್ರಿದಿ ವಾಸಿಮ್ ಅಕ್ರಮ್ ಅಲ್ಲ” ಎಂದು ಹೇಳಿದ್ದಾರೆ. ಭುಜದ ಗಾಯದಿಂದಾಗಿ ವಿಶ್ವ ಕಪ್​ನಿಂದ ಹೊರಗುಳಿದಿರುವ ನಸೀಮ್ ಶಾ ಅವರ ಅನುಪಸ್ಥಿತಿಯು ಶಾಹೀನ್ ಅವರ ಪ್ರದರ್ಶನದ ಮೇಲೆ ಹಾನಿಕಾರಕ ಪರಿಣಾಮ ಬೀರಿರಬಹುದು ಎಂದು ವಕಾರ್ ಯೂನಿಸ್ ಹೇಳಿದ್ದಾರೆ.

“ನಸೀಮ್ ಉತ್ತಮ ಬೌಲರ್ ಮತ್ತು ಹೆಚ್ಚು ರನ್ಗಳನ್ನು ನೀಡುವುದಿಲ್ಲ” ಎಂದು ವಕಾರ್ ಯೂನಿಸ್ ಹೇಳಿದ್ದಾರೆ. “ನಸೀಮ್ ಒತ್ತಡವನ್ನು ಸೃಷ್ಟಿಸುತ್ತಾರೆ. ಈಗ ಬ್ಯಾಟರ್​ಗಳು ಮತ್ತೊಂದು ಬ್ಯಾಟರ್​ಗಳ ಮೇಲೆ ಅವಕಾಶ ಪಡೆಯಲು ಯತ್ನಿಸುತ್ತಾರೆ. ಅದು ಅವರಿಗೆ ವಿಕೆಟ್​ಗಳನ್ನು ಒದಗಿಸುತ್ತದೆ ಎಂದು ವಕಾರ್​ ಹೇಳಿದ್ದಾರೆ.

ನಸೀಸ್​ ಅವರು ಇಲ್ಲದಿರುವುದು ಅಫ್ರಿದಿ ಕಳೆಗುಂದಲು ಕಾರಣ ಅಲ್ಲ ಎಂಬುದಾಗಿ ವಕಾರ್ ಅಭಿಪ್ರಾಯಪಟ್ಟಿದ್ದಾರೆ . ಬೌಲಿಂಗ್ ಶಿಸ್ತು ಇಲ್ಲದ ಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Exit mobile version