ವೆಲ್ಲಿಂಗ್ಟನ್ : ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕ ದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ಬೆಳಗ್ಗೆ ನಡೆಯಲಿದೆ. ಅದಕ್ಕಾಗಿ ಭಾರತ ತಂಡ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದು, ಟಿ೨೦ ಸರಣಿಯಂತೆ ಏಕ ದಿನ ಸರಣಿಯನ್ನೂ ವಶಪಡಿಸಿಕೊಳ್ಳುವ ಯೋಜನೆ ರೂಪಿಸಿಕೊಂಡಿದೆ. ಸರಣಿ ಆರಂಭಗೊಂಡ ಹಿನ್ನೆಲೆಯಲ್ಲಿ ನಾಯಕ ಶಿಖರ್ ಧವನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಈ ವೇಳೆ ಅವರು ಪತ್ರಕರ್ತರೊಬ್ಬರಿಗೆ ನೀಡಿದ ಉತ್ತರ ಎಲ್ಲರಿಗೂ ನಗು ತರಿಸಿದೆ.
ತಮ್ಮ ಸರದಿ ಬಂದಾಗ ಪತ್ರಕರ್ತರೊಬ್ಬರು, ನಿಮಗೆ ಪಂದ್ಯಗಳ ನಡುವೆ ಏನಾದರೂ ಸಮಯ ಸಿಕ್ಕರೆ ನ್ಯೂಜಿಲ್ಯಾಂಡ್‌ನಲ್ಲಿ ಏನಾದರೂ ಮಾಡುವ ಅಥವಾ ನೋಡುವ ಅಪೇಕ್ಷೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ತಕ್ಷಣ ಶಿಖರ್ ಧವನ್, ಮೊದಲು ಮಳೆ ನಿಲ್ಲಲಿ, ಬಳಿಕ ಏನು ಮಾಡುವುದು ಎಂದು ನೋಡೋಣ ಎಂದು ಹೇಳುತ್ತಾರೆ.
ನ್ಯೂಜಿಲ್ಯಾಂಡ್‌ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸರಣಿಗೆ ಅಡಚಣೆಯಾಗುತ್ತಿದೆ. ಟಿ೨೦ ಸರಣಿಯ ಮೊದಲ ಪಂದ್ಯ ಮಳೆಗೆ ಕೊಚ್ಚಿ ಹೋಗಿದ್ದರೆ, ಎರಡನೇ ಪಂದ್ಯ ನಡೆದಿತ್ತು. ಮೂರನೇ ಪಂದ್ಯವೂ ಮಳೆಯಿಂದಾಗಿ ಮೊಟಕುಗೊಂಡು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ಜಯ ಸಾಧಿಸಿತ್ತು. ಅಂತೆಯೇ ಏಕ ದಿನ ಸರಣಿಯೂ ಮಳೆಯ ಕಾಟ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಧವನ್ ಈ ರೀತಿ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ | IND vs SA | ಬೆಳಗಿದ ರಾಹುಲ್- ಸೂರ್ಯ; ಭಾರತಕ್ಕೆ 8 ವಿಕೆಟ್ ಜಯ, ಸರಣಿಯಲ್ಲಿ 1-0 ಅಂತರದ ಮುನ್ನಡೆ