ಪ್ಯಾರಿಸ್: ಕತಾರ್‌ನಲ್ಲಿ ನಡೆದ 2022ನೇ ಸಾಲಿನ ಫಿಫಾ ವಿಶ್ವ ಕಪ್ ಫುಟ್ಬಾಲ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರು ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿ ರೇಸ್ನಲ್ಲಿ ವಿಶ್ವ ಕಪ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದ ಫ್ರಾನ್ಸ್ ತಂಡದ ಆಟಗಾರ ಕೈಲಿಯನ್ ಎಂಬಾಪೆ ಸೇರಿ ಒಟ್ಟು 14 ಮಂದಿ ಗುರುತಿಸಿಕೊಂಡಿದ್ದರು. ಆದರೆ ಅಂತಿಮವಾಗಿ ಈ ಪ್ರಶಸ್ತಿ ಮೆಸ್ಸಿ ಅವರ ಪಾಲಾಗಿದೆ. ಮಹಿಳಾ ವಿಭಾಗದಲ್ಲಿ ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಅವರು ಈ ಪ್ರಶಸ್ತಿ ಗಳಿಸಿದ್ದಾರೆ.
ಇದನ್ನೂ ಓದಿ Lionel Messi | ಪ್ರಧಾನಿ ಮೋದಿಗೆ ಲಿಯೋನೆಲ್ ಮೆಸ್ಸಿಯ ಜೆರ್ಸಿ ಗಿಫ್ಟ್ ಕೊಟ್ಟ ಅರ್ಜೆಂಟೀನಾದ ಗಣ್ಯರು
ಕತಾರ್‌ನಲ್ಲಿ ನಡೆದ ಫಿಫಾ ವಿಶ್ವ ಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೆಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.
36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್ ಗೆದ್ದು ಸುದೀರ್ಘ ಬರವನ್ನು ನೀಗಿಸಿಕೊಂಡಿತ್ತು. ತಮ್ಮ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದ ಮೆಸ್ಸಿ, ಪ್ರಶಸ್ತಿ ಕನಸನ್ನು ನನಸಾಗಿಸಿಕೊಂಡಿದ್ದರು. ಇದೀಗ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.