ಲಂಡನ್: ಕಾಲ್ಜೆಂಡಿನ ಜಾದೂಗಾರ ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟಿನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು ಬಾರಿಸಿದ ಪೆನಾಲ್ಟಿ ಕಿಕ್ ಗೋಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಈ ಗೋಲಿನ ಸಹಾಯದಿಂದ ಇಂಟರ್ ಮಿಯಾಮಿ(Inter Miami) ತಂಡ ಗೆಲುವು ಸಾಧಿಸಿದೆ. ಸದ್ಯ ಮೆಸ್ಸಿ ಅವರ ಈ ಪೆನಾಲ್ಟಿ ಕಿಕ್ ವಿಡಿಯೊವನ್ನು ಅನೇಕ ಫುಟ್ಬಾಲ್ ಅಭಿಮಾನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
85ನೇ ನಿಮಿಷದ ವರೆಗೆ ಎದುರಾಳಿ ತಂಡ ಎಫ್ಸಿ ಡಲ್ಲಾಸ್(FC Dallas) 4-3 ಅಂತರದಿಂದ ಮುಂದಿತ್ತು. ಪಂದ್ಯ ಮುಕ್ತಾಯಕ್ಕೆ ಇನ್ನೇನು ಬೆರಳೆಣಿಯ ನಿಮಿಷಗಳು ಬಾಕಿ ಇದ್ದವು. ಹಿನ್ನಡೆಯ ಒತ್ತಡದಲ್ಲಿದ್ದ ಇಂಟರ್ ಮಿಯಾಮಿಗೆ ಇದೇ ವೇಳೆ ಪೆನಾಲ್ಟಿ ಕಿಕ್ನ ಅದೃಷ್ಟವೊಂದು ಒಲಿದು ಬಂದಿತು. ಆದರೆ ಇದು ಅಷ್ಟು ಸುಲಭವಾಗಿರಲ್ಲಿ. ಸರಿ ಸುಮಾರು ಅರ್ಧ ಮೈದಾನದಷ್ಟು ದೂರದಿಂದ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸುವ ಸವಾಲು ಎದುರಾಗಿತ್ತು. ಅನುಭವಿ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ಕಾಲ್ಚಳಕದ ಮೂಲಕ ಚೆಂಡನ್ನು ಲೀಲಾಜಾಲವಾಗಿ ಗೋಲು ಪಟ್ಟಿಗೆಗೆ ಸೇರಿಸಿದರು.
ಮೆಸ್ಸಿಯ ಈ ಗೋಲನ್ನು ಕಂಡ ಪ್ರೇಕ್ಷಕರು ಮತ್ತು ಇಂಟರ್ ಮಿಯಾಮಿ ತಂಡದ ಕೋಚ್ ಒಂದು ಕ್ಷಣ ನಂಬಲಾಗದ ಸ್ಥಿತಿಯಲ್ಲಿದ್ದರು. ಪಂದ್ಯ ಸಮಬಲವಾಯಿತು. ಅಂತಿಮವಾಗಿ ಶೂಟೌಟ್ನಲ್ಲಿ 5-4 ಅಂತರದಿಂದ ಗೆದ್ದ ಇಂಟರ್ ಮಿಯಾಮಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಇದನ್ನೂ ಓದಿ Lionel Messi: ಎದುರಾಳಿ ಆಟಗಾರನೊಂದಿಗೆ ಕಿರಿಕ್ ಮಾಡಿದ ಲಿಯೋನೆಲ್ ಮೆಸ್ಸಿ; ವಿಡಿಯೊ ವೈರಲ್
ಪಂದ್ಯದ ಆರಂಭದ 6ನೇ ನಿಮಿಷದಲ್ಲೇ ಇಂಟರ್ ಮಿಯಾಮಿ ಗೋಲಿನ ಖಾತೆ ತೆರೆಯಿತು. ಬಳಿಕ 37ನೇ ನಿಮಿಷದಲ್ಲಿ ಡಲ್ಲಾಸ್ ಕೂಡ ಗೋಲು ಬಾರಿಸಿತು. ಇದಾದ ಬೆನ್ನಲೇ ಮತ್ತೊಂದು ಗೋಲು ಬಾರಿಸಿದ ಡಲ್ಲಾಸ್ 2-1 ಮುನ್ನಡೆ ಸಾಧಿಸಿ ಮುನ್ನುಗಿತು. ಅರ್ಧದಾರಿ ಕ್ರಮಿಸುವ ವೇಳೆ 3-1 ರಿಂದ ಪಂದ್ಯದಲ್ಲಿ ಸಂಪೂರ್ಣ ಹಿಡಿದ ಸಾಧಿಸಿ ಗೆಲುವಿನ ಕಡೆ ಹೆಜ್ಜೆ ಹಾಕುತ್ತಿತ್ತು. ಆದರೆ ಫಿನಿಕ್ಸ್ನಂತೆ ಪುಟಿದೆದ್ದ ಮೆಸ್ಸಿ ಪಡೆ ಸತತ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದಿತು. ಅಂತಿಮವಾಗಿ ಪಂದ್ಯದಲ್ಲಿ ಜಯಿಸಿ ಕ್ವಾರ್ಟರ್ ಫೈನಲ್ ಟಿಕೆಟ್ ಪಡೆಯಿತು.
ಮೆಸ್ಸಿ ಅವರು ಈ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ 2023ರ ಸಾಲಿನಲ್ಲಿ ಇಂಟರ್ ಮಿಯಾಮಿ ಪರ ಹೆಚ್ಚು ಗೋಲ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕ್ವಾರ್ಟರ್ ಫೈನಲ್ನಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದೆ ಮೆಸ್ಸಿ ಪಡೆ.
ಕಿರಿಕ್ ಮಾಡಿದ್ದ ಮೆಸ್ಸಿ
ಬುಧವಾರದ ಒರ್ಲ್ಯಾಂಡೊ ಸಿಟಿ ವಿರುದ್ಧದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರು ತಾಳ್ಮೆ ಕಳೆದುಕೊಂಡಿದ್ದರು. ಒರ್ಲ್ಯಾಂಡೊ ಸಿಟಿಯ ಆಟಗಾರ ಅರೌಜೊ ಅವರೊಂದಿಗೆ ಮೆಸ್ಸಿ ಜಗಳವಾಡಿದ್ದರು. ಮೆಸ್ಸಿ ಸಿಟ್ಟಿನಿಂದ ಅವರನ್ನು ತಮ್ಮ ಭುಜದಿಂದ ತಲ್ಲಿ ಕೈ ಎತ್ತಿ ಏನೋ ವಾರ್ನಿಂಗ್ ಕೂಡ ನೀಡಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಮೈದಾನದಲ್ಲಿ ಅರೌಜೊ ಅವರ ವರ್ತನೆಯಿಂದ ಬೇಸರಗೊಂಡಿದ್ದ ಮೆಸ್ಸಿ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಬಳಿಕ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದರು. ಆದರೆ ಸಿಟ್ಟಿನಲ್ಲಿದ್ದ ಮೆಸ್ಸಿ ಪಂದ್ಯದ ಬಳಿಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದರು.