Site icon Vistara News

Lionel Messi | ಕುಟುಂಬದ ಜತೆಗೆ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದ ಲಿಯೋನೆಲ್ ಮೆಸ್ಸಿ

Lionel Messi And Family

ಬ್ಯೂನಸ್ ಐರಿಸ್‌: ಕತಾರ್​ ಫಿಫಾ ವಿಶ್ವ ಕಪ್​ ಗೆಲುವಿನ ಬಳಿಕ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ತಮ್ಮ ವೃತ್ತಿಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಸ ವರ್ಷವನ್ನು ತಮ್ಮ ಕುಟುಂಬದವರೊಂದಿಗೆ ಮೆಸ್ಸಿ ಭರ್ಜರಿಯಾಗಿ ಆಚರಿಸಿದ್ದಾರೆ.

2023ರ ಹೊಸ ವರ್ಷದ ಮೊದಲ ದಿನವನ್ನು ಕುಟುಂಬದೊಂದಿಗೆ ಕಳೆದ ಫೋಟೊಗಳನ್ನು ಮೆಸ್ಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

“ಎಷ್ಟೇ ಹೊಸ ವರ್ಷಗಳು ಬಂದರೂ 2022ರ ವರ್ಷವನ್ನು ನಾನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ, ನಾನು ಇಷ್ಟು ವರ್ಷ ಕಂಡಿದ್ದ ಕನಸು ನನಸಾದ ವರ್ಷವಿದು. ನಾನು ನಿರಾಸೆ ಅನುಭವಿಸಿದಾಗ, ಕುಗ್ಗಿದಾಗ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು ಸಾಥ್ ನೀಡಿದ್ದರಿಂದಲೇ ಇದೆಲ್ಲವೂ ಸಾಧ್ಯವಾಗಿದೆ. ಹೊಸ ವರ್ಷವು ಎಲ್ಲರಿಗೂ ಒಳಿತನ್ನು ಮಾಡಲಿ. ಎಲ್ಲರ ಕನಸು ನನಸಾಗಲಿ ಜತೆಗೆ ಆರೋಗ್ಯ ಪೂರ್ಣ ದಿನಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮೆಸ್ಸಿ ಟ್ವೀಟ್​ ಮಾಡಿದ್ದಾರೆ.

ಕತಾರ್‌ನಲ್ಲಿ ನಡೆದ ಫಿಫಾ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಶೂಟೌಟ್​ನಲ್ಲಿ ಅರ್ಜೆಂಟೀನಾ ಗೆಲುವು ದಾಖಲಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಮೂಲಕ ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವ ಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಅರ್ಜೆಂಟೀನಾ ಗೆಲುವು ಸಾಧಿಸುತ್ತಿದ್ದಂತೆಯೇ ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳು ಮೆಸ್ಸಿ ಪಡೆಯ ಗೆಲುವನ್ನು ಸಂಭ್ರಮಿಸಿದ್ದರು.

ಇದನ್ನೂ ಓದಿ | Lionel Messi | ಚಾಂಪಿಯನ್​ ಲಿಯೋನೆಲ್​ ಮೆಸ್ಸಿ ಜತೆ ನಟಿ ಶ್ರದ್ಧಾ ಕಪೂರ್​ ಮಾಜಿ ಬಾಯ್​ಫ್ರೆಂಡ್​; ಫೋಟೊ ವೈರಲ್​

Exit mobile version