ಲಂಡನ್: ಅರ್ಜೆಂಟೀನಾ ತಂಡಕ್ಕೆ ಮೂರನೇ ಫಿಫಾ ವಿಶ್ವಕಪ್ ತಂದು ಕೊಟ್ಟ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ತಮ್ಮ ಕಾಲ್ಚಳಕದಿಂದ ಅಮೆರಿಕದ(USA) ಇಂಟರ್ ಮಿಯಾಮಿ(Inter MIami) ಕ್ಲಬ್ಗೆ ಚೊಚ್ಚಲ ಪ್ರಶಸ್ತಿಯೊಂದನ್ನು ಗೆಲ್ಲಿಸಿಕೊಡುವ ಪಣ ತೊಟ್ಟಂತಿದೆ. ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಅವರು ಪ್ರತಿ ಪಂದ್ಯದಲ್ಲಿಯೂ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದು ಕೊಡುತ್ತಿದ್ದಾರೆ.
ಮಂಗಳವಾರ ನಡೆದ ಲೀಗ್ ಕಪ್(Leagues Cup) ಟೂರ್ನಿಯ ಸೆಮಿಫೈನಲ್ನಲ್ಲಿ ಮೆಸ್ಸಿ ಸಾರಥ್ಯದ ಇಂಟರ್ ಮಿಯಾಮಿ ತಂಡ ಫಿಲಡೆಲ್ಫಿಯಾ(Philadelphia Union) ಯೂನಿಯನ್ ತಂಡವನ್ನು 4-1 ಗೋಲ್ಗಳ ಅಂತರದಿಂದ ಸೋಲಿಸಿ ಫೈನಲ್ ತಲುಪಿದೆ. ಈ ಟೂರ್ನಿಯಲ್ಲಿ ಮಿಯಾಮಿ ತಂಡ ಕಾಣುತ್ತಿರುವ ಮೊದಲ ಫೈನಲ್ ಪಂದ್ಯ ಇದಾಗಿದೆ. 2023ರ ಸಾಲಿನಲ್ಲಿ ಇಂಟರ್ ಮಿಯಾಮಿ ಪರ ಹೆಚ್ಚು ಗೋಲ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಮೆಸ್ಸಿ ಫೈನಲ್ನಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದ್ದಾರೆ. ಮೆಸ್ಸಿ ಆಡಿದ 9 ಪಂದ್ಯಗಳಲ್ಲಿ ಒಟ್ಟು 6 ಗೋಲು ಗಳಿಸಿದ್ದಾರೆ.
ಮೆಸ್ಸಿ ತೂಫಾನ್ ಗೋಲ್ ಕಂಡು ಬೆರಗಾದ ಪ್ರೇಕ್ಷಕರು
ಈ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ ಅವರು ಬಾರಿಸಿದ ಗೋಲ್ ಒಂದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಲ್ಲದೆ ಮೈದಾನದಲ್ಲಿ ಈ ಒಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಕೂಡ ಈ ಗೋಲು ಕಂಡು ಅಚ್ಚರಿಗೊಂಡಿದ್ದಾರೆ. ಹೌದು, ಮೆಸ್ಸಿ ಅವರು ಸರಿ ಸುಮಾರು ಮೈದಾನದ ಮಧ್ಯ ಭಾಗದಿಂದ ಮೆಸ್ಸಿ ತಮ್ಮ ಕಾಲ್ಚಳಕದ ಮೂಲಕ ಚೆಂಡನ್ನು ತೂಫಾನ್ ವೇಗದಲ್ಲಿ ಗೋಲು ಪಟ್ಟಿಗೆಗೆ ಸೇರಿಸಿದರು. ಇದನ್ನು ಕಂಡ ಎಲ್ಲರು ಒಂದು ಕ್ಷಣ ದಂಗಾದರು. ಸದ್ಯ ಈ ಗೋಲಿನ ವಿಡಿಯೊ ವೈರಲ್ ಆಗಿದೆ.
ಕಳೆದ ಪಂದ್ಯದಲ್ಲಿ ಫ್ರೀ ಕಿಕ್ನಲ್ಲಿಯೂ ಇದೇ ರೀತಿಯ ಗೋಲ್ ಒಂದನ್ನು ಬಾರಿಸಿದ್ದರು. ಎಫ್ಸಿ ಡಲ್ಲಾಸ್(FC Dallas) ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಸರಿ ಸುಮಾರು ಅರ್ಧ ಮೈದಾನದಷ್ಟು ದೂರದಿಂದ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿದ್ದರು. ಈ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
ಇದನ್ನೂ ಓದಿ Lionel Messi: ಎದುರಾಳಿ ಆಟಗಾರನೊಂದಿಗೆ ಕಿರಿಕ್ ಮಾಡಿದ ಲಿಯೋನೆಲ್ ಮೆಸ್ಸಿ; ವಿಡಿಯೊ ವೈರಲ್
ಕಿರಿಕ್ ಮಾಡಿದ್ದ ಮೆಸ್ಸಿ
ಒರ್ಲ್ಯಾಂಡೊ ಸಿಟಿ ವಿರುದ್ಧದ ಲೀಗ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅವರು ತಾಳ್ಮೆ ಕಳೆದುಕೊಂಡಿದ್ದರು. ಒರ್ಲ್ಯಾಂಡೊ ಸಿಟಿಯ ಆಟಗಾರ ಅರೌಜೊ ಅವರೊಂದಿಗೆ ಮೆಸ್ಸಿ ಜಗಳವಾಡಿದ್ದರು. ಮೆಸ್ಸಿ ಸಿಟ್ಟಿನಿಂದ ಅವರನ್ನು ತಮ್ಮ ಭುಜದಿಂದ ತಲ್ಲಿ ಕೈ ಎತ್ತಿ ಏನೋ ವಾರ್ನಿಂಗ್ ಕೂಡ ನೀಡಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಮೈದಾನದಲ್ಲಿ ಅರೌಜೊ ಅವರ ವರ್ತನೆಯಿಂದ ಬೇಸರಗೊಂಡಿದ್ದ ಮೆಸ್ಸಿ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಬಳಿಕ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದರು. ಆದರೆ ಸಿಟ್ಟಿನಲ್ಲಿದ್ದ ಮೆಸ್ಸಿ ಪಂದ್ಯದ ಬಳಿಕ ತಮ್ಮ ಸೇಡನ್ನು ತೀರಿಸಿಕೊಂಡಿದ್ದರು.
ಮೆಸ್ಸಿ ಅವರು ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಜತೆಗಿನ ಒಪ್ಪಂದ ಮುಗಿದ ಬಳಿಕ ಅವರನ್ನು ಹಲವು ಕ್ಲಬ್ಗಳು ದೊಡ್ಡ ಮಟ್ಟದ ಆಫರ್ ನೀಡಿ ತಂಡಕ್ಕೆ ಸೇರಿಕೊಳ್ಳಲು ಪ್ರಯತ್ನಿಸಿದ್ದವು ಆದರೆ, ಮೆಸ್ಸಿ ಈ ಎಲ್ಲ ಆಫರ್ಗಳನ್ನು ತಿರಸ್ಕರಿಸಿ ಅಮೆರಿಕದ ಇಂಟರ್ ಮಿಯಾಮಿ ಕ್ಲಬ್ ಸೇರಿದ್ದರು. ಮುಂದಿನ 4 ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡರು. ಇದೀಗ ಅವರ ಸಾರಥ್ಯದಲ್ಲಿ ತಂಡ ಚೊಚ್ಚಲ ಬಾರಿ್ಎ ಫೈನಲ್ ಪ್ರವೇಶಿಸಿದೆ.