ಪ್ಯಾರಿಸ್: ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್‌ಗೆ ಸೇರಿಸಿಕೊಂಡರೆ, ತಾವು ಕ್ಲಬ್ ತೊರೆಯುವುದಾಗಿ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ Lionel Messi ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ವರದಿಯಾಗಿದೆ.
ರೊನಾಲ್ಡೊ ಪ್ರಸ್ತುತ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಪೋರ್ಚುಗಲ್‌ನ ಈ ಸ್ಟಾರ್ ಆಟಗಾರ ಮ್ಯಾಂಚೆಸ್ಟರ್ ಯನೈಟೆಡ್‌ನಿಂದ ಬಿಡುಗಡೆ ಹೊಂದಿ ಪಿಎಸ್‌ಜಿ ಸೇರಲು ಬಯಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಪಿಎಸ್‌ಜಿ ಸೇರುವ ಉದ್ದೇಶದಿಂದ ಕ್ಲಬ್ ಮಾಲೀಕರಾದ ನಾಸರ್ ಅಲ್ ಖೆಲಾಫಿಯನ್ನು ಭೇಟಿಯಾಗಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಮೆಸ್ಸಿ ಬೆದರಿಕೆ ಒಡ್ಡಿದ್ದಾರೆ.
ರೊನಾಲ್ಡೊ ಹಾಗೂ ಮೆಸ್ಸಿ ನಡುವೆ ಫುಟ್ಬಾಲ್ ಅಂಗಣದೊಳಗಿನ ಸೂಪರ್ ಸ್ಟಾರ್‌ಗಳು. ಹೀಗಾಗಿ ಫುಟ್ಬಾಲ್ ಕ್ಷೇತ್ರದಲ್ಲಿನ ಪ್ರಭುತ್ವಕ್ಕಾಗಿ ಅವರ ನಡುವೆ ಸ್ಪರ್ಧೆಯಿದೆ. ಈ ಹಿನ್ನೆಲೆಯಲ್ಲಿ ಅವರು ಜತೆಯಾಗಿ ಒಂದೇ ಕ್ಲಬ್‌ನಲ್ಲಿ ಆಡುವುದನ್ನು ಇಷ್ಟ ಪಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಲಿಯೋನೆಲ್ ಮೆಸ್ಸಿ ದಶಕಗಳ ಕಾಲ ಬಾರ್ಸಿಲೋನಾ ಕ್ಲಬ್ ಪರ ಆಡಿದ್ದರು. ಆದರೆ, ಅವರಿಗೆ ಸಂಭಾವನೆ ನೀಡುವ ವಿಚಾರದಲ್ಲಿ ಕ್ಲಬ್ ತೊಡಕುಗಳನ್ನು ಎದುರಿಸಿದ ಬಳಿಕ ಅವರು ಪಿಎಸ್‌ಜಿ ಸೇರಿಕೊಂಡಿದ್ದರು.
ಇದನ್ನೂ ಓದಿ: ಇಂದು ಸ್ಟಾರ್ ಫುಟ್ಬಾಲರ್ ಲಿಯೊನೆಲ್ ಮೆಸ್ಸಿ ಜನ್ಮದಿನ; ಮೆಸ್ಸಿ ಕುರಿತು ಮಾಹಿತಿ ಇಲ್ಲಿದೆ