ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳ ಸಂಸ್ಥೆಗಳ ಒಕ್ಕೂಟಕ್ಕೆ (ಎಫ್‌ಐಸಿಎ) ಈ ಬಾರಿ ಮಹಿಳೆಯರೊಬ್ಬರು ಅಧ್ಯಕ್ಷರಾಗಿದ್ದಾರೆ. ಅವರೇ ಆಸ್ಟ್ರೇಲಿಯಾದ ಲಿಸಾ ಸ್ಥಳೇಕರ್. ಸ್ವಿಜರ್ಲೆಂಡ್‌ನ ನಿಯೋನ್‌ನಲ್ಲಿ ನಡೆದ ಎಫ್‌ಐಸಿಎನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಗಿದೆ.
೪೨ ವರ್ಷಸ ಲಿಸಾ ಸ್ಥಳೇಕರ್ ಅವರು ವಿಶ್ವ ಕಪ್ ವಿಜೇತ ಆಸ್ಟ್ರೇಲಿಯಾ ಮಹಿಳೆಯರ ತಂಡದ ನಾಯಕಿಯಾಗಿದ್ದರು. ನಿವೃತ್ತಿ ಬಳಿಕ ಅವರು ಕ್ರಿಕೆಟ್ ವಿಶ್ಲೇಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅವರು ಎಫ್‌ಐಸಿಎನ ಪ್ರಮುಖ ಹುದ್ದೆಯೊಂದನ್ನು ಅಲಂಕರಿಸಿದ್ದಾರೆ.
ಈ ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾರಿ ರಿಚರ್ಡ್ಸ್, ವೆಸ್ಟ್ ಇಂಡೀಸ್‌ನ ಜಿಮ್ಮಿ ಆಡಮ್ಸ್ ಹಾಗೂ ಇಂಗ್ಲೆಂಡ್ ಕ್ರಿಕೆಟಿಗ ವಿಕ್ರಮ್ ಸೋಲಂಕಿ ಈ ಹುದ್ದೆಯನ್ನು ಅಲಂಕರಿಸಿದ್ದರು.
ಆಸ್ಟ್ರೇಲಿಯಾ ತಂಡದ ಪರ ಮೂರು ಮಾದರಿಯಲ್ಲಿ ಒಟ್ಟಾರೆ ೧೮೭ ಪಂದ್ಯಗಳನ್ನು ಆಡಿರುವ ಲಿಸಾ ಸ್ಥಳೇಕರ್ ಅವರು, ೨೦೦೫, ೨೦೧೩ರ ಏಕದಿನ ವಿಶ್ವ ಕಪ್ ಹಾಗೂ ೨೦೧೦ ಹಾಗೂ ೨೦೧೨ರ ಟಿ೨೦ ವಿಶ್ವ ಕಪ್ ಗೆದ್ದ ಆಸೀಸ್ ತಂಡದಲ್ಲಿ ಆಡಿದ್ದರು.
ಲಿಸಾ ಅವರನ್ನು ೨೦೨೧ರ ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ| ಐಪಿಎಲ್‌ನಲ್ಲಿ ಅವಕಾಶ ಕಳೆದುಕೊಂಡಿರುವ ಕ್ರಿಸ್ ಗೇಲ್ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಭೇಟಿಯಾಗಿದ್ದೇಕೆ?