Site icon Vistara News

WTC Final 2023 : ಇವರ ಧ್ವನಿಯಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್ ಪಂದ್ಯದ ಕಾಮೆಂಟರಿ ಆಲಿಸಿ

Virat kohli

#image_title

ದುಬೈ: ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2023ರ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಬಳಿಕ ನಡೆಯುತ್ತಿದ್ದ ಚರ್ಚೆಗಳ ವೇಗ ಕಡಿಮೆಯಾಗುತ್ತಿದೆ. ಇದೀಗ ಕ್ರಿಕೆಟ್​ ಪ್ರೇಮಿಗಳ ಗಮನ ನಿಧಾನವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನತ್ತ ಹೊರಳುತ್ತಿದೆ. ಸುಮಾರು ಮೂರು ತಿಂಗಳ ವಿರಾಮದ ನಂತರ ಟೀಮ್ ಇಂಡಿಯಾ ಮತ್ತೆ ಅಂತಾರಾಷ್ಟ್ರಿಯ ಕ್ರಿಕೆಟ್​​ಗೆ ಮರಳುತ್ತಿದೆ. ಜೂನ್ 7ರಿಂದ ಇಂಗ್ಲೆಂಡ್​ನ ದಿ ಓವಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​​ ಫೈನಲ್​ನಲ್ಲಿ (WTC Final 2023) ಕಣಕ್ಕಿಳಿಯಲಿದೆ. ಐಪಿಎಲ್​​ನ ಫ್ರಾಂಚೈಸಿಗಳಿಂದ ಮುಕ್ತಿ ಪಡೆದಿರುವ ಭಾರತೀಯ ಕ್ರಿಕೆಟಿಗರು ಬ್ಯಾಚ್​​ಗಳ ಪ್ರಕಾರ ಲಂಡನ್ ತಲುಪಿದ್ದಾರೆ. ಗುರುವಾರ ಅವರೆಲ್ಲರೂ ಜತೆಯಾಗಿ ಕೋಚ್​ ದ್ರಾವಿಡ್​ ಉಪಸ್ಥಿತಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ವಿಶ್ವದ ಅಗ್ರ ಎರಡು ಟೆಸ್ಟ್ ತಂಡಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ಮುಂಚಿತವಾಗಿ ಡಬ್ಲ್ಯುಟಿಸಿ ಪಂದ್ಯದ ಅಧಿಕೃತ ಟಿವಿ ಮತ್ತು ಡಿಜಿಟಲ್ ಪ್ರಸಾರಕ ಸಂಸ್ಥೆಯಾಗಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಪ್ರಕಟಿಸಿವೆ. ಕ್ರಿಕೆಟ್​ ದಂತಕಥೆಗಳಾದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್ ಮತ್ತು ನಾಸಿರ್ ಹುಸೇನ್, ಹರ್ಭಜನ್ ಸಿಂಗ್, ಸೌರವ್ ಗಂಗೂಲಿ, ದೀಪ್ ದಾಸ್ ಗುಪ್ತಾ ಮತ್ತು ಎಸ್ ಶ್ರೀಶಾಂತ್ ಇರುತ್ತಾರೆ.

ಇದನ್ನೂ ಓದಿ : WTC Final 2023 : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದ ಅತ್ಯಾಕರ್ಷಕ ಪ್ರೋಮೊ ಹೀಗಿದೆ

ವೀಕ್ಷಕ ವಿವರಣೆಗಾರರ ಈ ಅದ್ಭುತ ತಂಡವು ಪಂದ್ಯ ವೀಕ್ಷಣೆಯ ಅನುಭವ ಹೆಚ್ಚಿಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ಗೆ ಅವರು ಕಳೆ ನೀಡಲಿದ್ದಾರೆ. ಅವರು ಸಮಗ್ರ ವಿಶ್ಲೇಷಣೆ, ಆಸಕ್ತಿದಾಯಕ ವಾಖ್ಯಾನಗಳು ಮತ್ತು ಆಕರ್ಷಕ ಚರ್ಚೆಗಳ ಮೂಲಕ ಕ್ರಿಕೆಟ್ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಪ್ರಸಾರ ಲಭ್ಯವಿರುತ್ತದೆ.

ಡಬ್ಲ್ಯುಟಿಸಿ ಫೈನಲ್​​ ಪಂದ್ಯದ ಐದು ಭಾಷೆಗಳ ಕಾಮೆಂಟೇಟರ್​​ಗಳ ಪಟ್ಟಿ ಇಲ್ಲಿದೆ

ಇಂಗ್ಲೆಂಡ್( ವಿಶ್ವವ್ಯಾಪಿ): ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ನಾಸಿರ್ ಹುಸೇನ್

ಹಿಂದಿ – ಹರ್ಭಜನ್ ಸಿಂಗ್, ಸೌರವ್ ಗಂಗೂಲಿ, ದೀಪ್ ದಾಸ್ ಗುಪ್ತಾ ಮತ್ತು ಎಸ್ ಶ್ರೀಶಾಂತ್

ತಮಿಳು – ಯೋ ಮಹೇಶ್, ಎಸ್ ರಮೇಶ್, ಎಲ್ ಬಾಲಾಜಿ ಮತ್ತು ಎಸ್ ಶ್ರೀರಾಮ್

ತೆಲುಗು – ಕೌಶಿಕ್ ಎನ್ ಸಿ, ಆಶಿಶ್ ರೆಡ್ಡಿ, ಟಿ ಸುಮನ್ ಮತ್ತು ಕಲ್ಯಾಣ್ ಕೆ.

ಕನ್ನಡ – ವಿಜಯ್ ಭಾರದ್ವಾಜ್, ಶ್ರೀನಿವಾಸ ಎಂ, ಬಿ ಚಿಪ್ಲಿ, ಪವನ್ ದೇಶಪಾಂಡೆ ಮತ್ತು ಸುನಿಲ್ ಜೋಶಿ.

Exit mobile version