Site icon Vistara News

Rishabh Pant | ಪಂತ್​ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಲು ಕಳಪೆ ರಸ್ತೆ ಕಾರಣ ಎಂದ ಸ್ಥಳೀಯರು

ಡೆಹ್ರಾಡೂನ್​ : ಭಾರತ ಕ್ರಿಕೆಟ್​ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್ (Rishabh Pant)​ ಅವರ ಕಾರು ಅಪಘಾತಕ್ಕೆ ಒಳಗಾಗಲು ಕಳಪೆ ರಸ್ತೆಯೇ ಕಾರಣ ಎಂಬುದಾಗಿ ಸ್ಥಳೀಯರೊಬ್ಬರು ಹೇಳಿದ್ದಾರೆ. ರಸ್ತೆಯಲ್ಲಿ ಗುಂಡಿಯಿದ್ದು ಅದನ್ನು ತಪ್ಪಿಸಲು ಹೋದ ಪಂತ್​, ನಿಯಂತ್ರಣಕ್ಕೆ ಸಿಗದೇ ಡಿವೈಡರ್​ಗೆ ಗುದ್ದಿದ್ದಾರೆ ಎಂದು ಹೇಳಿದ್ದಾರೆ.

ಸ್ಥಳೀಯರೊಬ್ಬರು ರಸ್ತೆಯ ಗುಣಮಟ್ಟದ ಬಗ್ಗೆ ಮಾತನಾಡುತ್ತಿರುವ ವಿಡಿಯೊವೊಂದು ವೈರಲ್​ ಆಗಿದೆ. ಅದರಲ್ಲಿ ಅವರು ಈ ಹಿಂದೆಯೂ ಗುಡಿ ತಪ್ಪಿಸಲು ಹೋಗಿ ಹಲವಾರು ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿದ್ದವು ಎಂಬುದಾಗಿ ಅವರು ಹೇಳಿದ್ದಾರೆ.

ಇದು ಎರಡು ಲೇನ್​ನ ರಸ್ತೆಯಾಗಿದೆ. ಇಲ್ಲಿ ಅಪಾಯಕಾರಿ ತಿರುವು ಇದೆ. ರಿಷಭ್​ ಪಂತ್ ಅವರ ಕಾರು ಅತಿವೇಗದಲ್ಲಿತ್ತು. ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸಲು ಮುಂದಾದಾಗ ಅವರಿಗೆ ಅಪಾಯಕಾರಿ ತಿರುವು ಎದುರಾಗಿದೆ. ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Rishabh Pant | ಫೋನ್​ ಮೂಲಕ ರಿಷಭ್​ ಪಂತ್​ ಕುಟುಂಬಕ್ಕೆ ಧೈರ್ಯ ಹೇಳಿದ ಪ್ರಧಾನಿ ಮೋದಿ

Exit mobile version