ಮೆಲ್ಬೋರ್ನ್ : ಭಾರತ ವಿರುದ್ಧ ಗೆಲುವು ಸಾಧಿಸಿಯೇ ಬಿಟ್ಟೆವು ಎಂದು ಪಾಕಿಸ್ತಾನ ತಂಡ ಖುಷಿಯಲ್ಲಿದ್ದ ಹಂತದಲ್ಲಿ ಸಿಡಿದೆದ್ದ ವಿರಾಟ್ ಕೊಹ್ಲಿ, ಅವರ ಗೆಲುವನ್ನು ಕಸಿದಿದ್ದರು. ೧೯ ಓವರ್‌ನ ಕೊನೇ ಎಸೆತದ ತನಕವೂ ಗೆಲುವು ಪಾಕಿಸ್ತಾನ ತಂಡದ ಬಳಿಯಲ್ಲಿಯೇ ಇತ್ತು. ಆದರೆ ವಿರಾಟ್ ಕೊಹ್ಲಿ ಹ್ಯಾರಿಸ್ ರವೂಫ್ ಅವರು ಎಸೆದ ಇನಿಂಗ್ಸ್‌ನ ೧೯ನೇ ಓವರ್‌ನ ಕೊನೇ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪರಿಸ್ಥಿತಿಯನ್ನು ಭಾರತ ತಂಡದ ಕಡೆಗೆ ತಿರುಗಿಸಿದ್ದರು. ಈ ಮೂಲಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಆಘಾತ ಉಂಟಾಗಿತ್ತು.
ಈ ಸೋಲಿನ ಕುರಿತು ಮಾತನಾಡಿದ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕಾರ್ ಅಹಮದ್, ಭಾರತ ವಿರುದ್ಧದ ಸೋಲನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಪರ ಇಫ್ತಿಕಾರ್ ಅಹಮದ್ (೫೧) ಅರ್ಧ ಶತಕ ಬಾರಿಸುವ ಮೂಲಕ ನೆರವಾಗಿದ್ದರು. ಹೀಗಾಗಿ ತಂಡ ಸೋಲುವ ಮೂಲಕ ಅವರ ಪರಿಶ್ರಮ ವ್ಯರ್ಥಗೊಂಡಿತ್ತು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಭಾರತ ವಿರುದ್ಧದ ಗೆಲುವನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ನಾವೆಲ್ಲರೂ ಸೋಲಿನ ನಿರಾಸೆಯಲ್ಲಿದ್ದೆವು. ಆದರೆ, ನಾಯಕ ಬಾಬರ್ ಅಜಮ್, ಕೋಚ್ ತಂಡದ ಪರವಾಗಿ ನಿಂತರು. ನಾವು ಆಡಿರುವುದು ಮೊದಲ ಪಂದ್ಯ. ಹೀಗಾಗಿ ನಮ್ಮ ಗುರಿ ಮುಂದಿನ ಪಂದ್ಯಗಳ ಗೆಲುವು,” ಎಂದು ಅವರು ಹೇಳಿದರು.
ಇದನ್ನೂ ಓದಿ | IND vs PAK | ದಿನೇಶ್ ಕಾರ್ತಿಕ್‌ಗೆ ಮೈದಾನದಲ್ಲೇ ಹಿಡಿಶಾಪ ಹಾಕಿದ್ದ ಆರ್ ಅಶ್ವಿನ್!