ಕೊಲಂಬೊ: ಕ್ರಿಕೆಟ್ನಲ್ಲಿ ಗಾಯದ ಸಮಸ್ಯೆ ಯಾವಾಗ ಬೇಕಾದರೂ ಎದುರಾಗಬಹುದು. ಅದರಂತೆ ಹಲವು ಕ್ರಿಕೆಟ್ ಆಟಗಾರರು ಗಾಯಗೊಂಡು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನೇ ಕೊನೆಗೊಳಿಸಿದ ಹಲವು ನಿದರ್ಶನಗಳಿವೆ. ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡ ಪ್ರಸಂಗಗಳು ಕಣ್ಣಮುಂದಿದೆ. ಇಂಥದ್ದೇ ಆಘಾತಕಾರಿ ಘಟನೆಯೊಂದು ಮೂರನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಭವಿಸಿದೆ.
ಬುಧವಾರ ನಡೆದ ಟೂರ್ನಿ ನಾಲ್ಕನೇ ಪಂದ್ಯದಲ್ಲಿ ಕ್ಯಾಂಡಿ ಫಾಲ್ಕನ್ಸ್ ಪರ ಆಡಿದ್ದ ಚಾಮಿಕಾ ಕರುಣಾರತ್ನೆ, ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಕ್ಯಾಚ್ ಪಡೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಚೆಂಡು ಮುಖದ ಮೇಲೆ ಬಡಿದಿದೆ. ಚೆಂಡು ಬಿದ್ದ ರಭಸಕ್ಕೆ ಅವರ ನಾಲ್ಕು ಹಲ್ಲು ಮುರಿದು ರಕ್ತ ಹರಿದಿದೆ.
ಗಾಲೆಯ ಆಸ್ಪತ್ರೆಗೆ ದಾಖಲಾದ ಚಾಮಿಕಾ ಕರುಣಾರತ್ನೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ವರದಿಯಾಗಿದೆ. “ಕ್ಯಾಂಡಿ ಫಾಲ್ಕನ್ಸ್ ತಂಡದ ನಿರ್ದೇಶಕರು ಮಾಹಿತಿ ನೀಡಿರುವ ಪ್ರಕಾರ ಚಾಮಿಕಾ ಅವರ ಸ್ಥಿತಿ ನಿಯಂತ್ರಣದಲ್ಲಿದೆ. ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವರು ತಂಡದ ಪರ ಆಡಲು ಸಿದ್ಧರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | India Cricket Schedule | ಐಪಿಎಲ್ಗೂ ಮುನ್ನ 19 ಪಂದ್ಯಗಳನ್ನಾಡಲಿದೆ ಟೀಮ್ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ