ಲಖನೌ: ಬಿಸಿಸಿಐನ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಅವರು ಐಪಿಎಲ್ 2024ಕ್ಕೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ ) ಸಹಾಯಕ ಸಿಬ್ಬಂದಿಯಾಗಿ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ಪ್ರಸಾದ್ ಅವರ ಸೇರ್ಪಡೆಯು ಫ್ರಾಂಚೈಸಿಯಲ್ಲಿ ನಡೆದಿರುವ ಮತ್ತೊಂದು ಬದಲಾವಣೆಯಾಗಿದೆ. ಇತ್ತೀಚೆಗೆ ಆ್ಯಂಡಿ ಫ್ಲವರ್ ಬದಲಿಗೆ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದ ಫ್ರಾಂಚೈಸಿ ಇದೀಗ ತಂಡದ ಆಯ್ಕೆಯ ವಿಚಾರದಲ್ಲಿ ಬಿಸಿಸಿಐನಲ್ಲಿ ಹೆಚ್ಚು ಯಶಸ್ಸು ಹೊಂದಿರುವ ಎಂಎಸ್ಕೆ ಪ್ರಸಾದ್ ಅವರನ್ನೂ ಸೇರ್ಪಡೆ ಮಾಡಿದೆ.
ಭಾರತದ ಮಾಜಿ ಕ್ರಿಕೆಟಿಗರಾದ ಪ್ರಸಾದ್ ಅವರು ಅನುಭವ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಅವರು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನುಭವಿಯಾಗಿದ್ದರು. ಅವರು ಎಲ್ಎಸ್ಜಿ ತಂಡದೊಂದಿಗೆ ಮಾರ್ಗದರ್ಶಕ ಗೌತಮ್ ಗಂಭೀರ್ ಮತ್ತು ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಸಹಾಯ ಮಾಡಲಿದ್ದಾರೆ.
ಪ್ರಸಾದ್ ಅವರು ಅವರು ಬಿಸಿಸಿಐನ ಹಿರಿಯರ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರತಿಭೆ ಅನ್ವೇಷಣೆ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಬಿಸಿಸಿಐನೊಂದಿಗಿನ ಒಡನಾಟದ ಹೊರತಾಗಿ, ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಆಂಧ್ರ ಪ್ರದೇಶದ 13 ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೋಚಿಂಗ್ ಸೌಲಭ್ಯಗಳನ್ನು ಸ್ಥಾಪಿಸಿದ್ದಾರೆ. ಆರ್ಪಿಎಸ್ಜಿ ಸ್ಪೋರ್ಟ್ಸ್ನಲ್ಲಿ ಅವರ ಪಾಲ್ಗೊಳ್ಳುವಿಕೆಯು ಹಿಂದೆ ಲಕ್ನೊ ತಂಡದ ಪ್ರತಿಭಾನ್ವೇಷಣೆ ಉದ್ದೇಶವೂ ಇದ್ದಂತಿದೆ.
ಇದನ್ನೂ ಓದಿ: Prithvi Shaw: ಪೃಥ್ವಿ ಶಾಗೆ ಬೆನ್ನು ಬಿಡದ ಗಾಯ; ಒನ್ ಡೇ ಕಪ್‌ನಿಂದ ಔಟ್
ಐಪಿಎಲ್ 2024 ರ ಹರಾಜಿಗೆ ತಂಡಗಳು ಸಿದ್ಧತೆಗಳನ್ನು ಪ್ರಾರಂಭಿಸಿದ ಸಮಯದಲ್ಲಿ ಪ್ರಸಾದ್ ಅವರ ಸೇರ್ಪಡೆಯಾಗಿದೆ. ಹರಾಜು ಪ್ರಕ್ರಿಯೆ ಡಿಸೆಂಬರ್ ಕೊನೆಯಲ್ಲಿ ನಡೆಯಲಿದ್ದು, ಲ್ಯಾಂಗರ್ ಮತ್ತು ಗಂಭೀರ್ ಇಬ್ಬರೂ ಎಲ್ಎಸ್ಜಿಯಲ್ಲಿ ತಂಡ ನಿರ್ಮಾಣದ ಬಗ್ಗೆ ಪ್ರಸಾದ್ ಅವರ ಒಳನೋಟಗಳನ್ನು ಬಳಸಿಕೊಳ್ಳಲಿದ್ದಾರೆ.
ಮತ್ತೊಂದು ಮೈಲುಗಲ್ಲು ಸೃಷ್ಟಿಸಿದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಟ್ವಿಟರ್ನಲ್ಲಿ 10 ಮಿಲಿಯನ್ (ಒಂದು ಕೋಟಿ) ಫಾಲೋಯರ್ಸ್ ಹೊಂದಿರುವ ಮೊದಲ ಐಪಿಎಲ್ (IPL 2024) ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್ಕೆ ಅಧಿಕೃತ ಟ್ವಿಟರ್ ಹ್ಯಾಂಡಲ್ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆಯನ್ನು ಸಲ್ಲಿಸಲು ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದೆ. ಚೆನ್ನೈ ತಂಡ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ಎಂಬುದಾಗಿ ಬರೆದುಕೊಂಡಿದೆ.
ಮುಂಬೈ ಇಂಡಿಯನ್ಸ್ 8.2 ಮಿಲಿಯನ್ (82 ಲಕ್ಷ) ಫಾಲೋಯರ್ಸ್ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 6.8 (68 ಲಕ್ಷ) ಮಿಲಿಯನ್ ಫಾಲೋಯರ್ಸ್ ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ (5.2 ಮಿಲಿಯನ್) ಮತ್ತು ಸನ್ರೈಸರ್ಸ್ ಹೈದರಾಬಾದ್ (3.2 ಮಿಲಿಯನ್) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಪಂಜಾಬ್ ಕಿಂಗ್ಸ್ (29 ಲಕ್ಷ ), ರಾಜಸ್ಥಾನ್ ರಾಯಲ್ಸ್ (27 ಲಕ್ಷ), ಡೆಲ್ಲಿ ಕ್ಯಾಪಿಟಲ್ಸ್ (25 ಲಕ್ಷ), ಲಕ್ನೋ ಸೂಪರ್ ಜೈಂಟ್ಸ್ (7.6 ಲಕ್ಷ) ಮತ್ತು ಕೊನೆಯದಾಗಿ ಗುಜರಾತ್ ಟೈಟಾನ್ಸ್ (5.2 ಲಕ್ಷ ) ನಂತರದ ಸ್ಥಾನಗಳಲ್ಲಿವೆ.