Site icon Vistara News

LSG vs CSK: ಗೆಲುವಿನ ಹಳಿ ಏರೀತೇ ಲಕ್ನೋ?; ಚೆನ್ನೈ ಎದುರಾಳಿ

LSG vs CSK

ಲಕ್ನೋ: ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಲಕ್ನೋ ಸೂಪರ್​ ಜೈಂಟ್ಸ್(LSG vs CSK)​ ಗೆಲುವಿನಿ ಹಳಿ ಏರುವ ವಿಶ್ವಾಸದಲ್ಲಿ ನಾಳೆ(ಶುಕ್ರವಾರ) ನಡೆಯುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​(hennai Super Kings) ವಿರುದ್ಧ ಆಡಲಿಳಿಯಲಿದೆ. ಈ ಪಂದ್ಯ ಲಕ್ನೋಗೆ(Lucknow Super Giants) ತವರಿನ ಪಂದ್ಯವಾಗಿದೆ. 6ನೇ ಸ್ಥಾನಿಯಾಗಿರುವ ಲಕ್ನೋಗೆ ಪ್ಲೇ ಆಫ್​​ ಪ್ರವೇಶದ ಹಿನ್ನೆಲೆ ಲಕ್ನೋಗೆ ಇದು ಮಹತ್ವದ ಪಂದ್ಯ.

ಪಿಚ್​ ರಿಪೋರ್ಟ್​


ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದ ಔಟ್​ ಫೀಲ್ಡ್​ ದೊಡ್ಡದಾಗಿರುವ ಕಾರಣ ಇಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸುವುದು ಅಷ್ಟು ಸುಲಭವಲ್ಲ. ಪಿಚ್​ ಕೂಡ ಬ್ಯಾಟಿಂಗ್​ಗೆ ಅಷ್ಟು ಯೋಗ್ಯವಾಗಿಲ್ಲ. 160 ರನ್​ ಬಾರಿಸಿದರೂ ಇದನ್ನು ಹಿಡಿದು ನಿಲ್ಲಸಬಹುದು. ವೇಗಿಗಳಿಗೆ ಇದು ಹೇಳಿ ಮಾಡಿಸಿದ ಪಿಚ್​. ಇಲ್ಲಿ ನಡೆದ ಹಲವು ಪಂದ್ಯಗಳು ಲೋ ಸ್ಕೋರ್​ ಪಂದ್ಯಗಳಾಗಿವೆ. ಹೀಗಾಗಿ ಈ ಪಂದ್ಯವನ್ನು ಸಣ್ಣ ಮೊತ್ತದ ಹೋರಾಟ ಎಂದು ನಿರೀಕ್ಷಿಸಬಹುದು.

ಮುಖಾಮುಖಿ


ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

ಮಯಾಂಕ್​ ಆಗಮನ


ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಮಾಯಾಂಕ್‌ ಯಾದವ್‌ ಗಾಯಾಳಾಗಿ ಕಳೆದ 3 ಪಂದ್ಯಗಳಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ ಎಂದು ತಂಡದ ಕೋಚ್​ ಮಾಹಿತಿ ನೀಡಿದ್ದಾರೆ. ಆಡಿದ 6 ಪಂದ್ಯಗಳಲ್ಲಿ ಒಂದಂಕಿ ಗಡಿ ದಾಟದ ದೇವತ್ತ ಪಡಿಕ್ಕಲ್​ ಈ ಪಂದ್ಯದಿಂದ ಹೊರಗುಳಿಯುವುದು ಖಚಿತ. ಡಿ ಕಾಕ್​ ಬದಲು ಕೈಲ್​ ಮೇಯರ್ಸ್​, ಮಾರ್ಕಸ್​ ಸ್ಟೋಯಿನಿಸ್​ ಬದಲಿಗೆ ಮ್ಯಾಟ್​ ಹೆನ್ರಿ ಕಣಕ್ಕಿಳಿಯಬಹುದು. ಕೃಣಾಲ್​ ಪಾಂಡ್ಯ ಸ್ಥಾನದಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್​ಗೆ ಅವಕಾಶ ಸಿಗಬಹುದು. ನಾಯಕ ರಾಹುಲ್ ಅತಿಯಾದ ರಕ್ಷಣಾತ್ಮಕ ಆಟದಿಂದ ಹೊರಬಂದು ಬಿರುಸಿನ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ.

ಇದನ್ನೂ ಓದಿ IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

ಇದನ್ನೂ ಓದಿ IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

ಚೆನ್ನೈ ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಬಲಿಷ್ಠವಾಗಿದೆ. ಇಂಪ್ಯಾಕ್ಟ್​ ಪ್ಲೇಯರ್​ ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತು ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗುತ್ತಿದ್ದಾರೆ. ಡೇರಿಯಲ್​ ಮಿಚೆಲ್​, ರಚೀನ್​ ರವೀಂದ್ರ, ನಾಯಕ ಗಾಯಕ್ವಾಡ್​ ಮತ್ತು ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ ತಂಡದ ಬ್ಯಾಟಿಂಗ್​ ಬಲವಾಗಿದ್ದಾರೆ. ವಯಸ್ಸು 40 ದಾಡಿದರೂ ಧೋನಿಯ ಬ್ಯಾಟಿಂಗ್​ ಫಾರ್ಮ್​ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿಂದೆ ಆಡುತ್ತಿದ್ದ ರೀತಿಯಲ್ಲೇ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಇದಕ್ಕೆ ಕಳೆದ ಮುಂಬೈ ವಿರುದ್ಧದ ಪಂದ್ಯವೇ ಸಾಕ್ಷಿ. ಪಾಂಡ್ಯ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್​ ಬಾರಿಸಿದ್ದರು.

​ಸಂಭಾವ್ಯ ತಂಡ

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​), ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಲಕ್ನೋ: ಕೈಲ್​ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ದೀಪಕ್​ ಹೂಡಾ, ಮ್ಯಾಟ್​ ಹೆನ್ರಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೆ. ಗೌತಮ್​, ರವಿ ಬಿಷ್ಣೋಯ್, ಶಮರ್​ ಜೋಸೆಫ್​, ಯಶ್ ಠಾಕೂರ್, ಮಯಾಂಕ್​ ಯಾದವ್​.

Exit mobile version