Site icon Vistara News

LSG vs KKR: ಇಂದಿನ ಕೆಕೆಆರ್​ ಪಂದ್ಯಕ್ಕೆ ಫುಟ್ಬಾಲ್​ ತಂಡದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಲಕ್ನೋ ಸೂಪರ್​ ಜೈಂಟ್ಸ್

LSG vs KKR

ಕೋಲ್ಕೊತಾ: ಭಾನುವಾರದ ಡಬಲ್​ ಹೆಡರ್​ನ ಮೊದಲ(LSG vs KKR) ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ತಂಡ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಭಾರತದ ಅತ್ಯಂತ ಪ್ರಸಿದ್ಧ ಫುಟ್ಬಾಲ್​ ತಂಡವಾದ ATK ಮೋಹನ್ ಬಗಾನ್(Mohun Bagan) ತಂಡದ ಜೆರ್ಸಿಯಲ್ಲಿ ಲಕ್ನೋ ತಂಡ ಕಣಕ್ಕಿಳಿಯಲಿದೆ. ಐತಿಹಾಸಿಕ ಫುಟ್ಬಾಲ್‌ ಕ್ಲಬ್‌ಗೆ ಗೌರವ ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಂಡದ ಮಾಲಿಕ ಸಂಜೀವ್ ಗೋಯೆಂಕಾ ತಿಳಿಸಿದ್ದಾರೆ. ಸಂಜೀವ್ ಗೋಯೆಂಕಾ ಅವರು ಮೋಹನ್ ಬಗಾನ್ ತಂಡದ ಮಾಲಿಕರೂ ಆಗಿದ್ದಾರೆ.

“ಮೋಹನ್‌ ಬಗಾನ್‌ ಎನ್ನುವುದು ಕೇವಲ ಒಂದು ಸಂಸ್ಥೆಯಲ್ಲ, ಬದಲಾಗಿ ಅದೊಂದು ಎಮೋಷನ್. ಇದು ಕೋಲ್ಕತಾ ನಗರವನ್ನು ಪ್ರತಿನಿಧಿಸಿದ ಪರಂಪರೆಯಾಗಿದೆ. ನಮ್ಮ ಪಾಲಿಗೆ ಕೋಲ್ಕತಾವೂ ಒಂದು ರೀತಿಯ ತವರು ಇದ್ದ ಹಾಗೆ, ಹಾಗಾಗಿ ಲಕ್ನೋ ತಂಡಕ್ಕೂ ಇಲ್ಲಿನ ಅಭಿಮಾನಿಗಳು ಬೆಂಬಲ ನೀಡುವ ವೀಶ್ವಾಸವಿದೆ” ಎಂದು ತಂಡಗಳ ಮಾಲಿಕರಾದ ಸಂಜೀವ್ ಗೋಯೆಂಕಾ ಹೇಳಿದ್ದಾರೆ.

ಕಳೆದ ವರ್ಷವೂ ಕೂಡ ಲಕ್ನೋ ತಂಡ ಕೆಕೆಆರ್​ ವಿರುದ್ಧದ ಪಂದ್ಯದಲ್ಲೇ ಈ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಲಕ್ನೋ ತಂಡಕ್ಕೆ ಮೇಲಿನ ಸ್ಥಾನ ಪಡೆಯಬೇಕಾದರೆ ಈ ಪಂದ್ಯ ಗೆಲ್ಲಲ್ಲೇ ಬೇಕು. ಕೆಕೆಆರ್​ 2ನೇ ಸ್ಥಾನಿಯಾಗಿದೆ.

ಇದನ್ನೂ ಓದಿ IPL 2024 Points Table: ಪಂಜಾಬ್​ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ರಾಜಸ್ಥಾನ್

ಲಕ್ನೋ ತಂಡದ ವಿಶೇಷತೆ ಎಂದರೆ ಮೊದಲು ಬ್ಯಾಟಿಂಗ್​ ನಡೆಸಿದ ಪಂದ್ಯವನ್ನೇ ಅತ್ಯಧಿಕ ಬಾರಿ ಗೆದ್ದಿರುವುದು. ಸಾಮಾನ್ಯ ಮೊತ್ತವನ್ನು ಬಾರಿಸಿದರೂ ಘಾತಕ ಬೌಲಿಂಗ್​ ಮತ್ತು ಉತ್ಕೃಷ್ಟ ಮಟ್ಟದ ಫೀಲ್ಡಿಂಗ್​ ಮೂಲಕ ಪಂದ್ಯವನ್ನು ಗೆಲ್ಲುವ ಚಾಕಚಕ್ಯತೆ ರಾಹುಲ್​ ನಾಯಕತ್ವದ್ದು. ಟ್ರೇಡಿಂಗ್​ ಮೂಲಕ ರಾಜಸ್ಥಾನ್​ ತಂಡದಿಂದ ಲಕ್ನೋ ಸೇರಿದ ದೇವದತ್ತ ಪಡಿಕ್ಕಲ್​ ಅವರು ಆಡಿದ 5 ಪಂದ್ಯಗಳಲ್ಲಿಯೂ ಒಂದಂಕಕ್ಕೆ ಸೀಮಿತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.

ಸಂಭಾವ್ಯ ತಂಡಗಳು


ಲಕ್ನೋ: ಕೈಲ್​ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ದೀಪಕ್​ ಹೂಡಾ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ನವೀನ್-ಉಲ್-ಹಕ್/ ಶಮರ್​ ಜೋಸೆಫ್​, ಯಶ್ ಠಾಕೂರ್, ಅರ್ಷದ್ ಖಾನ್.

ಕೆಕೆಆರ್​: ಫಿಲಿಪ್ ಸಾಲ್ಟ್ (ವಿಕೆಟ್​ ಕೀಪರ್​), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.

Exit mobile version