ಲಕ್ನೋ: ಐಪಿಎಲ್ನಲ್ಲಿ(IPL 2024) ಗಂಟೆಗೆ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್ ನಡೆಸಿ ಭಾರೀ ಸಂಚಲನ ಮೂಡಿಸಿದ ಲಕ್ನೋ ಸೂಪರ್ ಜೈಂಟ್ಸ್(LSG vs MI) ತಂಡದ ಯುವ ವೇಗಿ ಮಯಾಂಕ್ ಯಾದವ್(Mayank Yadav) ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಅವರು ಫಿಟ್ ಆಗಿದ್ದು ಇಂದು (ಮಂಗಳವಾರ) ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನು ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್(Morne Morkel) ಖಚಿತಪಡಿಸಿದ್ದಾರೆ. ಮಯಾಂಕ್ ಯಾದವ್ ಕಮ್ಬ್ಯಾಕ್ನಿಂದ ಲಕ್ನೋ(Lucknow Super Giants) ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ.
“ಮಯಾಂಕ್ ಫಿಟ್ ಆಗಿದ್ದಾರೆ. ಅವರು ತಮ್ಮ ಎಲ್ಲಾ ಫಿಟ್ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ನಾವು ಅವರನ್ನು ತಂಡಕ್ಕೆ ಮರಳಿ ಪಡೆಯಲು ಉತ್ಸುಕರಾಗಿದ್ದೇವೆ. ಮುಂಬೈ ವಿರುದ್ಧ ಆಡುವುದು ಖಚಿತ” ಎಂದು ಮಾರ್ಕೆಲ್ ಹೇಳಿದ್ದಾರೆ. ಮಯಾಂಕ್ ಯಾದವ್ ಏಪ್ರಿಲ್ 7ರಂದು ನಡೆದಿದ್ದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಆ ಬಳಿಕದ ಪಂದ್ಯಗಳಿಂದ ಹೊರಗುಳಿದಿದ್ದರು. ಆಡಿದ 3 ಪಂದ್ಯಗಳಿಂದ 6 ವಿಕೆಟ್ ಕಿತ್ತಿದ್ದಾರೆ. 2 ಬಾರಿ 150ಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್ ನಡೆಸಿ ಗಮನಸೆಳೆದಿದ್ದರು.
— Lucknow Super Giants (@LucknowIPL) April 30, 2024
ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(LSG vs MI) ಮತ್ತು ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಸೆಣಸಾಟ ನಡೆಸಲಿದೆ. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಮುಂಬೈಗೆ ಪ್ಲೇ ಆಫ್ ಆಸೆ ಜೀವಂತವಿರಿಸಬೇಕಿದ್ದರೆ ಇದು ಮಸ್ಟ್ ವಿನ್ ಗೇಮ್ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.
ಇದನ್ನೂ ಓದಿ IPL 2024: ಸೌರವ್ ಗಂಗೂಲಿಯ ಐಪಿಎಲ್ ದಾಖಲೆ ಮುರಿದ ಫಿಲ್ ಸಾಲ್ಟ್
ಲಕ್ನೋ ಬ್ಯಾಟಿಂಗ್ ಅಗ್ರ ಕ್ರಮಾಂಕವನ್ನು ಹೆಚ್ಚು ಅವಲಂಬಿಸಿದೆ. ರಾಹುಲ್- ಡಿ ಕಾಕ್ ಕ್ರೀಸ್ ಆಕ್ರಮಿಸಿಕೊಂಡರೆ ಮಾತ್ರ ತಂಡಕ್ಕೆ ಗೆಲುವು ಖಚಿತ ಎನ್ನಬಹುದು. ಪವರ್ ಪ್ಲೇ ತನಕ ಉಭಯ ಆಟಗಾರರು ನಿಲ್ಲದೆ ಹೋದರೆ ತಂಡದ ಬೃಹತ್ ಮೊತ್ತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಮಾರ್ಕಸ್ ಸ್ಟೋಯಿನಿಸ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ್ದರೂ ಕೂಡ ಇವರ ಬ್ಯಾಟಿಂಗ್ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ನಿಂತು ಆಡುವ ಕಲೆ ಇವರಿಗೆ ಅಷ್ಟಾಗಿ ತಿಳಿದಿಲ್ಲ. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸುವ ಯೋಚನೆಯಲ್ಲಿರುತ್ತಾರೆ.
Power. Patience. Progress 💙🤞 pic.twitter.com/XZ5rGE06ju
— Lucknow Super Giants (@LucknowIPL) April 30, 2024
ನಿಕೋಲಸ್ ಪೂರನ್ ಆರಂಭಿಕ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ, ಈಗ ಅವರ ಬ್ಯಾಟಿಂಗ್ ಆರ್ಭಟ ಕೊಂಚ ಕಡಿಮೆಯಾದಂತೆ ತೋರುತ್ತಿದೆ. ದೀಪಕ್ ಹೂಡಾ ಮತ್ತೆ ಬ್ಯಾಟಿಂಗ್ ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ನೀಡಿದೆ.
ಪಿಚ್ ರಿಪೋರ್ಟ್
ಲಕ್ನೋದ ಏಕಾನ ಸ್ಟೇಡಿಯಂನ ಪಿಚ್ ಇದುವರೆಗೆ ನಿಧಾನಗತಿಯಿಂದ ಕೂಡಿತ್ತು. ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ನಡೆಸುವ ಪಿಚ್ ಇದಾಗಿತ್ತು. ಆದರೆ ಈಗ ಈ ಪಿಚ್ ಈ ಹಿಂದಿನಂತೆ ವರ್ತಿಸುತ್ತಿಲ್ಲ. ಇಲ್ಲಿ ದೊಡ್ಡ ಮೊತ್ತವನ್ನು ಪೇರಿಸಿದರೂ ಕೂಡ ಚೇಸಿಂಗ್ ನಡೆಸಬಹುದು. ಇದಕ್ಕೆ ಕಳೆದ 2 ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಈ ಮೊದಲು ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಈಗ ಇಲ್ಲಿ ಮಂಚಿನ ಕಾಟ ಶುರುವಾಗಿದ್ದು ಚೇಸಿಂಗ್ ನಡೆಸಿದ ತಂಡಗಳೇ ಗೆಲ್ಲುತ್ತಿವೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.