ಲಕ್ನೋ: ಕಳೆದ ಪಂದ್ಯದಲ್ಲಿ ತವರಿನಲ್ಲೇ ಸೋಲು ಕಂಡ ಲಕ್ನೋ ಸೂಪರ್ ಜೈಂಟ್ಸ್(LSG vs MI) ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಎದುರಾಳಿ ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿದ್ದರೆ, ಲಕ್ನೋ(lucknow super giants) 5ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆ ಜೀವಂತವಿರಿಸಬೇಕಿದ್ದರೆ ಮುಂಬೈಗೆ ಇದು ಮಸ್ಟ್ ವಿನ್ ಗೇಮ್ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.
ಲಕ್ನೋ ಬ್ಯಾಟಿಂಗ್ ಅಗ್ರ ಕ್ರಮಾಂಕವನ್ನು ಹೆಚ್ಚು ಅವಲಂಬಿಸಿದೆ. ರಾಹುಲ್- ಡಿ ಕಾಕ್ ಕ್ರೀಸ್ ಆಕ್ರಮಿಸಿಕೊಂಡರೆ ಮಾತ್ರ ತಂಡಕ್ಕೆ ಗೆಲುವು ಖಚಿತ ಎನ್ನಬಹುದು. ಪವರ್ ಪ್ಲೇ ತನಕ ಉಭಯ ಆಟಗಾರರು ನಿಲ್ಲದೆ ಹೋದರೆ ತಂಡದ ಬೃಹತ್ ಮೊತ್ತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಮಾರ್ಕಸ್ ಸ್ಟೋಯಿನಿಸ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ್ದರೂ ಕೂಡ ಇವರ ಬ್ಯಾಟಿಂಗ್ ಮೇಲೆ ಹೆಚ್ಚು ನಂಬಿಕೆ ಇಡುವಂತಿಲ್ಲ. ನಿಂತು ಆಡುವ ಕಲೆ ಇವರಿಗೆ ಅಷ್ಟಾಗಿ ತಿಳಿದಿಲ್ಲ. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸುವ ಯೋಚನೆಯಲ್ಲಿರುತ್ತಾರೆ.
Jonty bhai ke aage koi bol sakta hai kyaaa🤪 pic.twitter.com/T23Ll3mzXf
— Lucknow Super Giants (@LucknowIPL) April 29, 2024
ನಿಕೋಲಸ್ ಪೂರನ್ ಆರಂಭಿಕ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ, ಈಗ ಅವರ ಬ್ಯಾಟಿಂಗ್ ಆರ್ಭಟ ಕೊಂಚ ಕಡಿಮೆಯಾದಂತೆ ತೋರುತ್ತಿದೆ. ದೀಪಕ್ ಹೂಡಾ ಮತ್ತೆ ಬ್ಯಾಟಿಂಗ್ ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ನೀಡಿದೆ. ಶರವೇಗದ ಎಸೆತಗಾರ ಮಾಯಾಂಕ್ ಯಾದವ್ ಅವರ ಗೈರು ಕಾಡಿದೆ. ಈ ಪಂದ್ಯದಲ್ಲೂ ಅವರು ಆಡುವುದು ಅನುಮಾನ ಎನ್ನಲಾಗಿದೆ. ಮೊಹ್ಸಿನ್ ಖಾನ್, ಕೃಣಾಲ್ ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದಾರೆ. ಇವರಲ್ಲೊಬ್ಬರನ್ನು ಕೈ ಬಿಟ್ಟು ಯುವ ಆಲ್ರೌಂಡರ್ ಅರ್ಶಿನ್ ಕುಲಕರ್ಣಿಗೆ ಈ ಪಂದ್ಯದಲ್ಲಿ ಆಡಿಸಿದರೆ ಉತ್ತಮ. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಇವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ IPL 2024: ಆರ್ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ; ಸದ್ಯದ ಲೆಕ್ಕಾಚಾರ ಹೇಗಿದೆ?
ಮುಂಬೈ ತಂಡದಲ್ಲಿ ನಾಯಕತ್ವ ಬದಲಾವಣೆ ಬಳಿಕ ಯಾರು ಕೂಡ ಸಂಘಟಿತ ಪ್ರದರ್ಶನ ತೋರುತಿಲ್ಲ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ ಅವರಂತಹ ಘಟಾನುಘಟಿ ಆಟಗಾರರಿದ್ದರೂ ಕೂಡ ತಂಡಕ್ಕಾಗಿ ಆಡುತ್ತಿಲ್ಲ. ಸೋತರೂ ಗೆದ್ದರೂ ಕೂಡ ಜೋಶ್ ಕಾಣುತ್ತಿಲ್ಲ. ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಗಂಭೀರವಾಗಿ ಆಡುತ್ತಿಲ್ಲ. ಅವರ ವರ್ತನೆಗಳೇ ವಿಚಿತ್ರವಾಗಿ ಗೋಚರಿಸಿದೆ.
The most wholesome post you'll see today 💙🧿 pic.twitter.com/xxVVMgivvp
— Lucknow Super Giants (@LucknowIPL) April 29, 2024
ಪಿಚ್ ರಿಪೋರ್ಟ್
ಲಕ್ನೋದ ಏಕಾನ ಸ್ಟೇಡಿಯಂನ ಪಿಚ್ ಇದುವರೆಗೆ ನಿಧಾನಗತಿಯಿಂದ ಕೂಡಿತ್ತು. ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ನಡೆಸುವ ಪಿಚ್ ಇದಾಗಿತ್ತು. ಆದರೆ ಈಗ ಈ ಪಿಚ್ ಈ ಹಿಂದಿನಂತೆ ವರ್ತಿಸುತ್ತಿಲ್ಲ. ಇಲ್ಲಿ ದೊಡ್ಡ ಮೊತ್ತವನ್ನು ಪೇರಿಸಿದರೂ ಕೂಡ ಚೇಸಿಂಗ್ ನಡೆಸಬಹುದು. ಇದಕ್ಕೆ ಕಳೆದ 2 ಪಂದ್ಯಗಳ ಫಲಿತಾಂಶವೇ ಉತ್ತಮ ನಿದರ್ಶನ. ಈ ಮೊದಲು ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಈಗ ಇಲ್ಲಿ ಮಂಚಿನ ಕಾಟ ಶುರುವಾಗಿದ್ದು ಚೇಸಿಂಗ್ ನಡೆಸಿದ ತಂಡಗಳೇ ಗೆಲ್ಲುತ್ತಿವೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.