Site icon Vistara News

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

Kaptaan KL is keeping

ಲಕ್ನೋ: ರಾಜಸ್ಥಾನ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆ.ಎಲ್​ ರಾಹುಲ್(KL Rahul)​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ಶನಿವಾರದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​(LSG vs PBKS) ವಿರುದ್ಧ ಕಣಕ್ಕಿಳಿಯಲಿದೆ. ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಬೇಕಿದ್ದರೆ ತಂಡಕ್ಕೆ ಗೆಲುವು ಅತ್ಯಗತ್ಯ.

ಲಕ್ನೋ ತಂಡಕ್ಕೆ ಇದು ತವರಿನ ಮೊದಲ ಪಂದ್ಯವಾಗಿದೆ. ತಂಡ ಬಲಿಷ್ಠವಾಗಿದ್ದರೂ ಕೂಡ ಆಟಗಾರರ ಸಂಘಟಿತ ಪ್ರದರ್ಶನ ಮಾತ್ರ ಸಾಲದು. ಬೌಲಿಂಗ್​ ವಿಭಾಗದಲ್ಲಿ ನವೀನ್​ ಉಲ್​ ಹಕ್​ ಬದಲು ಗಬಾದಲ್ಲಿ ಆಸ್ಟ್ರೇಲಿಯಾದ ಹುಟ್ಟಡಗಿಸಿದ ವಿಂಡೀಸ್​ನ ಯುವ ಆಟಗಾರ ಶಮರ್​ ಜೋಸೆಪ್​ ಅವರನ್ನು ಆಡಿಸಿದರೆ ಉತ್ತಮ. ಬ್ಯಾಟಿಂಗ್​ನಲ್ಲಿಯೂ ಮಾರ್ಕಸ್​ ಸ್ಟೋಯಿಸ್​, ಕೃಣಾಲ್​ ಪಾಂಡ್ಯ, ಬದೋನಿ, ಪಡಿಕ್ಕಲ್​ ಮತ್ತು ಕ್ವಿಂಟನ್​ ಡಿ ಕಾಕ್​ ಸಿಡಿಯುವ ಅನಿವಾರ್ಯತೆ ಇದೆ.

ಕಳೆದ ಪಂದ್ಯದಲ್ಲಿ ರಾಹುಲ್​ ಮತ್ತು ಪೂರನ್​ ಮಾತ್ರ ತಂಡಕ್ಕೆ ಆಸರೆಯಾಗಿದ್ದರು. ಲಕ್ನೋ ಪರ ಚೊಚ್ಚಲ ಪಂದ್ಯವನ್ನಾಡಿದ ಪಡಿಕ್ಕಲ್​ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ರವಿ ಬಿಷ್ಟೋಯಿ ಕೂಡ ತುರ್ತು ವೇಗದಲ್ಲಿ ಬೌಲಿಂಗ್​ ಲಯ ಕಂಡುಕೊಳ್ಳುವ ಅಗತ್ಯವಿದೆ. ರಾಜಸ್ಥಾನ್​ ವಿರುದ್ಧ ದುಬಾರಿಯಾಗಿ ಗೋಚರಿಸಿದ್ದರು.

ಪಂಜಾಬ್​ ಆಡಿದ 2 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಸೋಲು ಕಂಡಿದೆ. ಇದು ತಂಡಕ್ಕೆ ಮೂರನೇ ಪಂದ್ಯವಾಗಿದೆ. ಶಿಖರ್​ ಧವನ್​, ಸ್ಯಾಮ್ ಕರನ್​, ಲಿಯಾಮ್​ ಲಿವಿಂಗ್ಸ್​ ಸ್ಟೋನ್​ ಬ್ಯಾಟಿಂಗ್​ ಬಲವಾದರೆ, ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​, ಕಗಿಸೊ ರಬಾಡ, ರಾಹುಲ್​ ಚಹರ್​ ಮತ್ತು ಹರ್‌ಪ್ರೀತ್ ಬ್ರಾರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಒಟ್ಟಾರೆಯಾಗಿ ತಂಡ ಎಲ್ಲ ವಿಭಾಗದಲ್ಲಿ ಸಮರ್ಥವಾಗಿದೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಲಕ್ನೋ ತಂಡ 2 ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಪಂಜಾಬ್​ ಒಂದು ಪಂದ್ಯ ಮಾತ್ರ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಬಲಿಷ್ಠವಾಗಿ ಗೋಚರಿಸಿದೆ.

ಸಂಭಾವ್ಯ ತಂಡಗಳು


ಲಕ್ನೋ:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್​ ಜೋಸೆಫ್​, ಯಶ್ ಠಾಕೂರ್.

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರಾನ್​, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್.

Exit mobile version