Site icon Vistara News

FIFA: ಆಟಗಾರ್ತಿಗೆ ಚುಂಬಿಸಿದ್ದ ಲೂಯಿಸ್ ರುಬೆಲೆಸ್​ಗೆ ಅಮಾನತು ಶಿಕ್ಷೆ

Jenni Hermoso is kissed by president of the RFEF Luis Rubiales

ಮ್ಯಾಡ್ರಿಡ್: ಮಹಿಳಾ ವಿಶ್ವಕಪ್ ಫುಟ್ಬಾಲ್​ ಫೈನಲ್ ಪಂದ್ಯದ ವೇಳೆ ಸ್ಪೇನ್ ಆಟಗಾರ್ತಿ ಜೆನ್ನಿ ಹೆರ್ಮೊಸೋ(Jenni Hermoso) ಅವರಿಗೆ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲೆಸ್(Luis Rubiales) ಅವರನ್ನು ಫಿಫಾ(FIFA) ಅಮಾನತುಗೊಳಿಸಿದೆ. ಲೂಯಿಸ್ ರುಬೆಲೆಸ್ ಅವರು ಪ್ರಶಸ್ತಿ ಪ್ರಧಾನದ ವೇಳೆ ವೇದಿಕೆಯಲ್ಲೇ ತನ್ನ ದೇಶದ ಆಟಗಾರ್ತಿ ಜೆನ್ನಿ ಹೆರ್ಮೊಸೋ(Jenni Hermoso) ಅವರನ್ನು ತಬ್ಬಿಕೊಂಡು ತುಟಿಗೆ ಎಲ್ಲರ ಎದುರಲ್ಲೇ ಚುಂಬಿಸಿದ್ದರು.(kiss controversy) ರುಬೆಲೆಸ್ ಅವರ ಈ ವರ್ತನೆಗೆ ಎಲ್ಲಡೆ ಭಾರಿ ಟೀಕೆ ವ್ಯಕ್ತವಾಗಿತ್ತು. ಫೈನಲ್ ಪಂದ್ಯದಲ್ಲಿ​ ಸ್ಪೇನ್(Spain beat England)​ ತಂಡ ಇಂಗ್ಲೆಂಡ್​ ತಂಡವನ್ನು 1-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ವಿಶ್ವ ಕಿರೀಟ ಗೆದ್ದಿತ್ತು.


90 ದಿನಗಳವರೆಗೆ ಅಮಾನತು

ರುಬೆಲೆಸ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ ಫಿಫಾ, ತನ್ನ ಹೇಳಿಕೆಯಲ್ಲಿ, ಆಟಗಾರ್ತಿಯ ಒಪ್ಪಿಗೆಯಿಲ್ಲದೆ ತುಟಿಗೆ ಚುಂಬಿಸಿರುವ 46 ವರ್ಷದ ಲೂಯಿಸ್‍ರನ್ನು ಕನಿಷ್ಠ 90 ದಿನಗಳವರೆಗೆ ಅಮಾನತು ಮಾಡಲಾಗಿದೆ. ಇದಲ್ಲದೆ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಿಲ್ಲವೆಂದು ತಿಳಿಸಲಾಗಿದೆ. ಅಲ್ಲದೆ ಆಟಗಾರ್ತಿ ಜೆನ್ನಿ ಹೆರ್ಮೊಸೋ ಮತ್ತು ಆಕೆಯ ಆಪ್ತರನ್ನು ಯಾವುದೇ ಕಾರಣಕ್ಕೂ ಸಂಪರ್ಕಿಸುವಂತಿಲ್ಲವೆಂದು ಸೂಚನೆ ನೀಡಿದೆ.

ಇದನ್ನೂ ಓದಿ FIFA Women’s World Cup: ಚೊಚ್ಚಲ ಫಿಫಾ ವಿಶ್ವಕಪ್​ ಗೆದ್ದ ಸ್ಪೇನ್​ ಮಹಿಳಾ ತಂಡ

ಕ್ಷಮೆಯಾಚಿಸಿ ರಾಜಿನಾಮೆ ನೀಡಿದ್ದ ಲೂಯಿಸ್‌

ಸ್ಪೇನ್‌ನ ಜೆನ್ನಿಫರ್‌ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಚುಂಬಿಸಿದ್ದಕ್ಕೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಗೆಲುವಿನ ಸಂತಸದಲ್ಲಿ ಈ ಘಟನೆ ನಡೆದು ಹೋಯಿತು. ನನ್ನ ತಪ್ಪಿಗೆ ನಾನು ಕ್ಷೆಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಅವರು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದರು.

ಚೊಚ್ಚಲ ಟ್ರೋಫಿ ಗೆದ್ದ ಸ್ಪೇನ್

ವಿಶ್ವಕಪ್​ ಫೈನಲ್​ ಪಂದ್ಯ ಇಂಗ್ಲೆಂಡ್​ ಮತ್ತು ಸ್ಪೇನ್​ಗೆ ಮೊದಲ ಫೈನಲ್​ ಪಂದ್ಯವಾಗಿತ್ತು. ಫೈನಲ್‌ ಪಂದ್ಯಕ್ಕೆ 75 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಹಾಜರಿದ್ದರು. ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಸ್ಪೇನ್​ 1-0 ಗೋಲ್​ ಬಾರಿಸಿ ಗೆಲುವು ಸಾಧಿಸಿತು. ಪಂದ್ಯ ಆರಂಭಗೊಂಡ 29ನೇ ನಿಮಿಷದಲ್ಲೇ ಓಲ್ಗಾ ಕಾರ್ಮೋನಾ(Olga Carmona) ಆಕರ್ಷಕ ಗೋಲು ಸಿಡಿಸಿದ್ದರು. ಕಪ್​ ಗೆಲ್ಲುವ ಮೂಲಕ ಸ್ಪೇನ್‌ ತಂಡ ಫಿಫಾ ವಿಶ್ವಕಪ್‌ ಟ್ರೋಫಿ ಜಯಿಸಿದ 5ನೇ ತಂಡ ಎನಿಸಿಕೊಂಡಿತ್ತು. ಅಮೆರಿಕ ಸರ್ವಾಧಿಕ ನಾಲ್ಕು ಬಾರಿ ಟ್ರೋಫಿ ಜಯಿಸಿದ್ದರೆ, ಜರ್ಮನಿ 2 ಬಾರಿ ಹಾಗೂ ಜಪಾನ್‌ ಮತ್ತು ನಾರ್ವೆ ತಂಡಗಳು ತಲಾ ಒಂದೊಂದು ಬಾರಿ ಟ್ರೋಫಿ ಗೆದ್ದಿದೆ.

Exit mobile version